ಸುದ್ದಿ ಸಂಗ್ರಹ ಯಡ್ರಾಮಿ
ನೀರಿನ ಪಂಪ್‌ಸೆಟ್, ಮೋಟಾರ್ ಸ್ಟಾರ್ಟರ್ ಮತ್ತು ಕೇಬಲ್ ವೈರ್ ಕಳ್ಳತನ ಪ್ರಕರಣಗಳನ್ನು ಯಡ್ರಾಮಿ ಪೊಲೀಸರು ಭೇದಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಶಹಾಪುರ ತಾಲೂಕಿನ ಗೋಗಿ ತಾಂಡಾದ ಕಿಶನ್ ಟೋಪು ಜಾಧವ ಬಂಧಿತ ಆರೋಪಿ. ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಐದು ನೀರೆತ್ತುವ ಮೋಟಾರ್, ಮೂರು ಸ್ಟಾರ್ಟ್‌ರ್‌ಗಳು ಮತ್ತು ಕೇಬಲ್, ವೈರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಯಡ್ರಾಮಿ ಮತ್ತು ನೆಲೋಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ.10 ರಂದು ಕಾಚಾಪುರ, ಜೂನ್ 18ರಂದು ತೆಲಗಬಾಳ ಹಾಗೂ ಜ.1ರಂದು ಹರವಾಳ ಗ್ರಾಮದಲ್ಲಿ ಸ್ಟಾರ್ಟರ್, ಅಟೊ ಸ್ಟಾರ್ಟರ್‌ಗಳು, ನೀರೆತ್ತುವ ಮೋಟಾರ್ ಮತ್ತು ಕೇಬಲ್ ವೈರ್ ಕಳ್ಳತನವಾದ ಬಗ್ಗೆ ಈ ಗ್ರಾಮಸ್ಥರು ದೂರು ನೀಡಿದ್ದರು.
ಪ್ರಕರಣಗಳ ಪತ್ತೆಗೆ ಡಿವೈಎಸ್‌ಪಿ ಲೋಕೇಶ್ವರಪ್ಪ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಬಾಪುಗೌಡ ಪಾಟೀಲ, ಶ್ರೀಶೈಲ ಅಂಬಾಟಿ ನೇತೃತ್ವದಲ್ಲಿ ಎಎಸ್‌ಐ ಸುರೇಶಕುಮಾರ, ಸಿಬ್ಬಂದಿ ಹೈದರಸಾ, ಶಿವಾನಂದ, ಸಿದ್ದರಾಮ, ದೊಡ್ಡಬಸಪ್ಪ, ಬಾಷಾಸಾಬ, ಮೌಲಪ್ಪ ಅವರನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸುಲು ಪ್ರಶಂಸಿದ್ದಾರೆ.