ಸುದ್ದಿ ಸಂಗ್ರಹ ಶಹಾಬಾದ್
ಕೃಷಿ ಇಲಾಖೆ ವತಿಯಿಂದ ಮುಗಳನಾಗಾವಿ ಗ್ರಾಮದ ರೈತರಿಗೆ ಉಚಿತವಾಗಿ ತೊಗರಿ ಬೀಜ ವಿತರಿಸಲಾಯಿತು.
ತಾ.ಪಂ ಮಾಜಿ ಸದಸ್ಯ ನಾಮದೇವ ರಾಠೋಡ ಮಾತನಾಡಿ, ಕ್ಷೇತ್ರದ ಶಾಸಕರು ಹಾಗೂ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಮಾರ್ಗದರ್ಶನದಲ್ಲಿ ಮುಗಳನಾಗಾವಿ ಗ್ರಾಮ ಪಂಚಾಯಿತಿ ಭಾಗದಲ್ಲಿ ಮೂಲಭೂತ ಸೌಲಭ್ಯ ಮತ್ತು ವಿವಿಧ ಯೋಜನೆಗಳ ಮೂಲಕ ಅಭಿವೃದ್ಧಿ ಮಾಡಿದ್ದು, ತಾಲೂಕಿನ ರೈತರ ಸಮಸ್ಯೆಯನ್ನು ಆಲಿಸಿ ಅವರಿಗೆ ಪೂರಕವಾಗಿ ದೂರದೃಷ್ಟಿಯೊಂದಿಗೆ ಕೆರೆಗಳ ಅಭಿವೃದ್ಧಿಗೆ ಅನುದಾನ ನೀಡಿದಾರೆ. ಈ ಯೋಜನೆಗಾಗಿ ಸಚಿವರಿಗೆ, ಕೃಷಿ ಇಲಾಖೆಯ ಅಧಿಕಾರಿಗಳಿಗೆ, ಕೃಷಿಕ ಸಮಾಜದ ಪ್ರತಿನಿಧಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಗ್ರಾಮಸ್ಥರು ಮತ್ತು ರೈತರು ಹೃತ್ಪೂರ್ವಕ ಧನ್ಯವಾದಗಳು ಸಮರ್ಪಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಉಷಾ, ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ರಮೇಶ್ ಕಂಠಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರು ನಾಗಶೆಟ್ಟಿ, ಮುಖಂಡರಾದ ರೋಹಿತ್ ಬೋರಿ, ಹೀರಾಸಿಂಗ್ ಕಾರಭಾರಿ, ಚಂದು ಜಾಧವ, ಶಂಕರ್ ಚವ್ಹಾಣ್, ವಿಜಯಕುಮಾರ್ ಪೂಜಾರಿ ಸೇರಿದಂತೆ ಗ್ರಾಮದ ಪ್ರಮುಖರು ಮತ್ತು
ರೈತರು ಉಪಸ್ಥಿತರಿದ್ದರು.