ಸುದ್ದಿ ಸಂಗ್ರಹ ಕಲಬುರಗಿ
ಇಲ್ಲಿನ ತಾಜನಗರ 2ನೇ ಕ್ರಾಸ್ ಮನೆಯೊಂದರ ಮೇಲೆ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ, 302 ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.
ಅಬ್ದುಲ್ ರಜಾಕ್ ಬಂಧಿತ ಆರೋಪಿ, ಅಬಕಾರಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಸಣ್ಣದಾದ 90 ಪ್ಲಾಸ್ಟಿಕ್ ಪೌಚ್ಗಳು ದೊರೆತಿವೆ. ಅದರಲ್ಲಿ ಹೂ, ಬೀಜ ಮತ್ತು ಎಲೆಗಳಿಂದ ಕೂಡಿದ ಒಣ ಗಾಂಜಾ ಇದೆ. ಆರೋಪಿಯು ವ್ಯಸನಿಗಳಿಗೆ ಮಾರುವ ಉದ್ದೇಶದಿಂದ ಗಾಂಜಾ ಸಂಗ್ರಹಿಸಿದ್ದ ಎಂದು ಮೂಲಗಳು ಹೇಳಿವೆ.
ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಅಧೀಕ್ಷಕ ಮಲ್ಲಿಕಾರ್ಜುನ ದೊಡ್ಡಮನಿ, ಅಬಕಾರಿ ನಿರೀಕ್ಷಕರಾದ ನರೇಂದ್ರ ಹೊಸಮನಿ, ಸಿದ್ರಾಮಪ್ಪ ತಾಳಿಕೋಟಿ, ಅಬಕಾರಿ ಉಪ ನಿರೀಕ್ಷಕ ರಾಮರೆಡ್ಡಿ, ಸಿಬ್ಬಂದಿಯಾದ ರಾಜೇಂದ್ರ, ಫಿರೋಜ್ ಪಾಶಾ, ವಾಸಿಂ ಮತ್ತು ಪುಟ್ಟರಾಜ್ ಪಾಲ್ಗೊಂಡಿದ್ದರು.