ಸಮಾಜದ ಕೆಡುಕು ತಿದ್ದುವ ಶಕ್ತಿ ಶಿಕ್ಷಣಕ್ಕಿದೆ: ಜ್ಞಾನಪ್ರಕಾಶ ಸ್ವಾಮೀಜಿ

ನಗರದ

ಸುದ್ದಿ ಸಂಗ್ರಹ ಶಹಾಬಾದ್
ಸಮಾಜದಲ್ಲಿನ ಕೆಡುಕು ತಿದ್ದುವ ಶಕ್ತಿ ಶಿಕ್ಷಣಕ್ಕಿದೆ, ಗುಡಿ–ಗುಂಡಾರಗಳಿಗಿಲ್ಲ. ಅವು ನಮ್ಮನ್ನು ಕಣ್ಣು ಮುಚ್ಚಿಸುತ್ತವೆ ಗ್ರಂಥಾಲಯ ನಮ್ಮ ಕಣ್ಣನ್ನು ತೆರೆಯುತ್ತದೆ ಎಂದು ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ನಗರದ ರಾಯಲ್ ಫಂಕ್ಷನ್‌ ಹಾಲ್‌ನಲ್ಲಿ ಮಂಗಳವಾರ ಡಾ.ಬಿ.ಆರ್ ಅಂಬೇಡ್ಕರ್ ಅವರ 135ನೇ ಜಯಂತಿ ನಿಮಿತ್ತ ಆಯೋಜಿಸಲಾಗಿದ್ದ ‘ಅಂಬೇಡ್ಕರ್‌ ಹಬ್ಬ’ದಲ್ಲಿ ಭಾಗವಹಿಸಿ ಮಾತನಾಡಿದರು.

ಉಪನ್ಯಾಸಕರಾಗಿ ಆಗಮಿಸಿದ ವಿಜಯಕುಮಾರ ಸಾಲಿಮನಿ ಮಾತನಾಡಿ, ಜಗತ್ತು ಅಂಬೇಡ್ಕರ್‌ ಅವರ ಜ್ಞಾನವನ್ನು ನೋಡುತ್ತಿದೆ. ಆದರೆ, ನಮ್ಮ ಭಾರತದಲ್ಲಿ ಅವರ ಜಾತಿಯನ್ನು ನೋಡುತ್ತಿರುವುದು ಬದಲಾಗಬೇಕು ಎಂದರು.

ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹಾಗೂ ಜಿ.ಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಆಣದೂರಿನ ವರಜ್ಯೋತಿ ಭಂತೇಜಿ ವಹಿಸಿದ್ದರು.

ನಗರದ ಬಸವೇಶ್ವರ ವೃತ್ತದಿಂದ ಪ್ರಮುಖ ಬೀದಿಯಲ್ಲಿ ಅಂಬೇಡ್ಕರ್ ಪುತ್ಥಳಿಯನ್ನು ಮೆರವಣಿಗೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಪದಕಗಳು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ರಾಜೇಶ ಯನಗುಂಟಿಕರ, ಗೌರವಾಧ್ಯಕ್ಷ ವಸಂತ ಕಾಂಬಳೆ, ಪಿಐ ಪರಶುರಾಮ ವನಂಜಕರ, ಪ್ರಮುಖರಾದ ಎಂ.ಎ ರಶೀದ್, ಸುರೇಶ ಮೆಂಗನ, ಅಣ್ಣಾರಾವ ಪಾಟೀಲ, ಡಾ.ಫಾರೂಕ್ ಮಣ್ಣೂರ, ಮಾಣಿಕಗೌಡ ಪಾಟೀಲ, ಭೀಮಾಶಂಕರ ಖೇಣಿ, ಸತೀಶ ಕೋಬಾಳ, ಸುನಿಲ ದೊಡ್ಡಮನಿ ಮತ್ತು ಮಲ್ಲಣ್ಣ ಮಸ್ಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.‌‌

ಪೂಜಪ್ಪ ಮೈತ್ರಿ, ಪ್ರವೀಣ ರಾಜನ್ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *