ಸುಲಭವಾಗಿ ಹಾಗೂ ಕಡಿಮೆ ಎಣ್ಣೆಯಲ್ಲಿ ದೋಸೆ, ಚಪಾತಿ, ಮತ್ತು ಪರಾಠಗಳನ್ನು ತಯಾರಿಸಲು ಹಳೆಯ ಕಬ್ಬಿಣದ ತವಾಗಳನ್ನು ಬಿಟ್ಟು ಹಲವರು ಈಗ ನಾನ್ಸ್ಟಿಕ್ ತವಾ ಖರೀದಿ ಮಾಡುತ್ತಿದ್ದಾರೆ. ಹೆಚ್ಚು ತ್ರಾಸ ನೀಡದ ಇವು ಆಧುನಿಕ ಕಾಲಘಟ್ಟದ ಟ್ರೆಂಡ್ ಆಗಿ ಮಾರ್ಪಟ್ಟಿದೆ.
ನಾನ್ಸ್ಟಿಕ್ ತವಾಗಳಿಗೆ ಮರದ ಸೌಟು ಬಳಸ್ಬೇಕು. ಇದನ್ನು ಉಜ್ಜಿ ತೊಳೆಯುವಾಗ ಸ್ಮೂತ್ ಆದ ನಾರಿನಲ್ಲೆ ಉಜ್ಜಬೇಕು. ಆದರೆ ಕೆಲವರು ಜಿಡ್ಡು ಹೋಗಲೆಂದು ಸ್ಟೀಲ್ ನಾರಿನಲ್ಲಿ ಉಜ್ಜುತ್ತಾರೆ. ಇದರಿಂದಾಗಿ ನಾನ್ ಸ್ಟಿಕ್ ಪಾತ್ರೆಗಳಲ್ಲಿ ಗೀರು ಕಾಣಿಸಿಕೊಳ್ಳುತ್ತೆ.
ದುಬಾರಿ ಪಾತ್ರೆ ಗೆರೆ ಬಿದ್ರೆ ಏನಾಗುತ್ತದೆ ಅಂತೆಲ್ಲ ತಲೇಲಿ ಇಟ್ಕೊಂಡು ಅದರಲ್ಲೆ ಅಡುಗೆ ಮಾಡುವದಕ್ಕೆ ಶುರುವಿಟ್ಟುಕೊಳ್ಳುತ್ತಾರೆ. ಆದರೆ ನೆನಪಿಡಿ ಗೀರು ಬಿದ್ದ ನಾನ್ ಸ್ಟಿಕ್ ಪಾತ್ರೆಯಲ್ಲಿ ಅಡುಗೆ ಮಾಡುತ್ತಿದ್ದರೆ ಇಂದೆ ಅದನ್ನು ಬಿಸಾಡುವುದು ಲೇಸು. ಯಾಕೆಂದರೆ, ಆಸ್ಟ್ರೇಲಿಯಾದ ನ್ಯೂಕ್ಯಾಸಲ್ ವಿಶ್ವವಿದ್ಯಾಲಯ ಮತ್ತು ಫ್ಲಿಂಡರ್ಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ಅಧ್ಯಯನವೊಂದು ಅಘಾತಕಾರಿ ವಿಚಾರವೊಂದನ್ನು ಹೊರತಂದಿದೆ. ಈ ಕುರಿತಾದ ಪೂರ್ಣ ವಿವರ ಇಲ್ಲಿದೆ.
ವಿಜ್ಞಾನಿಗಳ ವರದಿಯಲ್ಲಿ ಏನಿದೆ ?
ಟೆಫ್ಲಾನ್ ಲೇಪಿತ ನಾನ್ಸ್ಟಿಕ್ ಪ್ಯಾನ್ಗಳ ಮೇಲೆ ಬೀಳುವ ಒಂದು ಸಣ್ಣ ಗೀರು ಅಥವಾ ಬಿರುಕಿನಿಂದ ಸುಮಾರು 9,000 ಪ್ಲಾಸ್ಟಿಕ್ ಕಣಗಳನ್ನು ಬಿಡುಗಡೆ ಮಾಡುತ್ತದೆ ಎಂದು ‘ರಾಮನ್ ಇಮೇಜಿಂಗ್’ ತಂತ್ರಜ್ಞಾನದ ಮೂಲಕ ಪತ್ತೆಹಚ್ಚಲಾಗಿದೆ. ಇನ್ನು ಪ್ಯಾನ್ ಮೇಲಿನ ಲೇಪನವು ಸ್ವಲ್ಪ ಹೆಚ್ಚು ಹಾನಿಗೊಳಗಾಗಿದ್ದರೆ, ಅಡುಗೆ ಮಾಡುವಾಗ ಬರೋಬ್ಬರಿ 23 ಲಕ್ಷ ಮೈಕ್ರೋಪ್ಲಾಸ್ಟಿಕ್ ಮತ್ತು ನ್ಯಾನೋಪ್ಲಾಸ್ಟಿಕ್ ಕಣಗಳು ನಿಮ್ಮ ದೇಹವನ್ನು ರಕ್ತದ ಮೂಲಕ ಸೇರುತ್ತವೆ ಎಂದು ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
“ಫಾರೆವರ್ ಕೆಮಿಕಲ್ಸ್” ಎಂದರೆ ಏನು ?
ಪರಿಸರದಲ್ಲಿ ಅಥವಾ ಮನುಷ್ಯನ ದೇಹದಲ್ಲಿ ಸುಲಭವಾಗಿ ನಾಶವಾಗುವುದ ಕೆಮೆಕಲ್ಸ್ ಅನ್ನು ಫಾರೆವರ್ ಕೆಮಿಕಲ್ಸ್ ಎಂದು ಕರೆಯಲಾಗುತ್ತದೆ. ಇದೇ ಗುಂಪಿಗೆಟೆಫ್ಲಾನ್ ಲೇಪನವು ಸೇರಿದೆ.
ನಾನ್ಸ್ಟಿಕ್ ತವಾಗಳಿಂದ ಆರೋಗ್ಯದ ಮೇಲಾಗುವ ಪರಿಣಾಮವೇನು ?
ಇವು ಕ್ಯಾನ್ಸರ್, ಬಂಜೆತನ, ಹಾರ್ಮೋನ್ ಏರುಪೇರು ಮತ್ತು ಮಕ್ಕಳ ಬೆಳವಣಿಗೆಯಲ್ಲಿ ಸಮಸ್ಯೆಯನ್ನುಂಟು ಮಾಡಬಹುದು. ಶೇ.99ರಷ್ಟು ಅಮೆರಿಕನ್ನರ ರಕ್ತದಲ್ಲಿ ಈ ರಾಸಾಯನಿಕಗಳ ಅಂಶ ಈಗಾಗಲೆ ಪತ್ತೆಯಾಗಿದ್ದು, ಇದು ಜಾಗತಿಕ ಮಟ್ಟದ ಗಂಭೀರ ಸಮಸ್ಯೆಯಾಗಿದೆ. ಮೈಕ್ರೋ ಪ್ಲಾಸ್ಟಿಕ್ ಕಣಗಳು ಜೀರ್ಣಾಂಗದ ಮುಖೇನ ನಿಮ್ಮ ದೇಹ ಸೇರುವದಿಲ್ಲ. ಬದಲಾಗಿ ರಕ್ತದ ಕಣಗಳ ಮೂಲಕ ಯಕೃತ್ತು, ಮೂತ್ರಪಿಂಡಗಳಲ್ಲಿ ಅಡಗಿರುತ್ತವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸುರಕ್ಷಿತವಾಗಿರುವುದು ಹೇಗೆ ?
ಫಾರೆವರ್ ಕೆಮಿಕಲ್ಸ್ ಮುಕ್ತ ಉತ್ಪನ್ನಗಳ ಖರೀದಿ ನಿಷೇಧದ ಬಗ್ಗೆ ಕಟ್ಟುನಿಟ್ಟಿನ ನಿಯಮವಿಲ್ಲ ಹೀಗಾಗಿ, ಗ್ರಾಹಕರೆ ಎಚ್ಚರಿಕೆ ವಹಿಸುವುದು ಅನಿವಾರ್ಯ.
- ನಾನ್ಸ್ಟಿಕ್ ಬದಲಿಗೆ ಹಿಂದೆ ಬಳಕೆ ಮಾಡಲಾಗುತ್ತಿದ್ದ ಸ್ಟೇನ್ಲೆಸ್ ಸ್ಟೀಲ್ ಅಥವಾ ಕಬ್ಬಿಣದ ಪಾತ್ರೆಗಳನ್ನು ಬಳಸುವುದು ಅತ್ಯಂತ ಸುರಕ್ಷಿತ.
- ನಿಮ್ಮ ನಾನ್ಸ್ಟಿಕ್ ಪ್ಯಾನ್ ಮೇಲೆ ಗೀರುಗಳಾಗಿದ್ದರೆ ಅಥವಾ ಲೇಪನ ಕಿತ್ತುಬರುತ್ತಿದ್ದರೆ ತಕ್ಷಣ ಅದನ್ನು ಬಳಸುವುದನ್ನು ನಿಲ್ಲಿಸಿ.
- ನಾನ್ಸ್ಟಿಕ್ ಪಾತ್ರೆ ಬಳಸುವಾಗ ಲೋಹದ ಸೌಟುಗಳ ಬದಲು ಮರದ ಅಥವಾ ಸಿಲಿಕಾನ್ ಸೌಟುಗಳನ್ನು ಬಳಸಿ, (ಏಜೆನ್ಸೀಸ್)