ಎಲ್ಲ ಕ್ಷೇತ್ರದಲ್ಲೂ ಮಹಿಳೆಯರ ಸಾಧನೆ ಗಮನಾರ್ಹ

ನಗರದ

ಸುದ್ದಿ ಸಂಗ್ರಹ ಶಹಾಬಾದ್
ಮಹಿಳೆಯರ ಬುದ್ಧಿಶಕ್ತಿ, ತಾಳ್ಮೆ ಮತ್ತು ವಿಶ್ಲೇಷಣಾ ಸಾಮರ್ಥ್ಯದಿಂದ ಕುಟುಂಬದಿಂದ ಬಾಹ್ಯಾಕಾಶದವರೆಗೂ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ ಎಂದು ಅರ್ಥಶಾಸ್ತ್ರ ಮುಖ್ಯಸ್ಥೆ ಡಾ.ಸುರೇಖಾ ನಾಟೆಕರ್ ಹೇಳಿದರು.

ನಗರದ ಎಸ್’ಎಸ್ ಮರಗೋಳ ಪದವಿ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಯುಗದಲ್ಲಿ ಮಹಿಳೆಯರು ಸಂಪ್ರದಾಯಗಳ ಸಂಕೋಲೆಯಿಂದ ಮುಕ್ತಗೊಂಡು ಜಾಗತಿಕ ಮನ್ನಣೆ ಪಡೆಯುವಂತಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಬಸವರಾಜ್ ಹಿರೇಮಠ್ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸೇರಿದಂತೆ ಸರ್ವ ಕ್ಷೇತ್ರದಲ್ಲೂ ಮಹಿಳೆಯರು ಪುರುಷರಿಗೆ ಸರಿ ಸಮಾನವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ವೇದಿಕೆಯ ಮೇಲೆ ಡಾ.ಲಕ್ಷ್ಮಣ್ ರಾಠೋಡ್, ಡಾ.ಕಾವೇರಿ, ಗೌರಾದೇವಿ ಶೇರಿಕರ್ ಇದ್ದರು.

ಈ ಸಂದರ್ಭದಲ್ಲಿ ಡಾ.ಜಿ.ಆರ್ ಸ್ಥಾವರಮಠ, ಡಾ.ಹಣಮಂತಪ್ಪಾ ಸೇಡಂಕರ್, ಡಾ.ನಾಗರಾಜ್ ದೇವತ್ಕಲ್ ಸೇರಿದಂತೆ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಬಳಗ, ಬೋಧಕ- ಬೋಧಕೇತರ ಬಳಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಲಲಿತಾ ಸಿ ನಿರೂಪಿಸಿದರು, ಜ್ಯೋತಿ ಗಂಟಿಮಠ ವಂದಿಸಿದರು.

Leave a Reply

Your email address will not be published. Required fields are marked *