ಇಂದಿರಾ ಕ್ಯಾಂಟಿನ್‌ ಸ್ಥಳ ಅತಿಕ್ರಮಣ: ಡಬ್ಬಿ ತೆರವಿಗೆ ಬಿಜೆಪಿ ಆಗ್ರಹ‌

ನಗರದ

ಸುದ್ದಿ ಸಂಗ್ರಹ ಶಹಾಬಾದ
ಇಂದಿರಾ ಕ್ಯಾಂಟಿನ್‌ ಕಾಂಪೌಂಡ್ ಆವರಣದಲ್ಲಿ ಅಕ್ರಮವಾಗಿ ಇರಿಸಲಾಗಿದ್ದ ಡಬ್ಬಿ ತಕ್ಷಣ ತೆರೆವು ಗೊಳಿಸಬೇಕು ಎಂದು ಬಿಜೆಪಿ ಮಂಡಲದ ಅಧ್ಯಕ್ಷ ನಿಂಗಪ್ಪ ಹುಳಗೋಳಕರ್ ಆಗ್ರಹಿಸಿದ್ದಾರೆ.‌

ನಗರದ ಇಂದಿರಾ ಕ್ಯಾಂಟಿನಗಾಗಿ ಸರಕಾರಿ ಆಸ್ಪತ್ರೆಯ ಆವರಣದ ಗೋಡೆ ತೆರೆವುಗೊಳಿಸುವಾಗ ಒಳಗಡೆ ಯಾವುದೆ ತರಹದ ಡಬ್ಬದ ಅಂಗಡಿ ಇರಲಿಲ್ಲ, ಕಾಮಗಾರಿ ಪ್ರಾರಂಭಿಸಿದ ತಕ್ಷಣ ನಗರದ ಪ್ರಭಾವಿ ನಾಯಕರು ಮತ್ತು ನಗರ ಸಭೆ ಅಧಿಕಾರಿಗಳ ಬೆಂಬಲದಿಂದ ಪ್ರಭಾವಿ ವ್ಯಕ್ತಿಯೊಬ್ಬ ಕ್ಯಾಂಟಿನ್‌ ಉಧ್ಘಾಟನೆ ಮುಂಚೆ ಅಕ್ರಮವಾಗಿ ಡಬ್ಬಿ ತಂದು ಇರಿಸಿದ್ದು ಕಂಡುಬಂದಿದೆ ಎಂದರು.

ನಗರ ಸಭೆಯ ಮುಂಬಾಗದಲ್ಲೆ ಪೌರಾಯುಕ್ತರು ಮತ್ತು ಅಧಿಕಾರಿಗಳ ಕಣ್ಮುಂದೆಯೇ ಅತಿಕ್ರಮಣ ಮಾಡುತ್ತಿದ್ದರು ಕ್ಯಾರೆ ಎನ್ನುತ್ತಿಲ್ಲ, ಆದರೆ ಇಂದಿರಾ ಕ್ಯಾಂಟಿನ್‌ ಕಾಮಗಾರಿ ಜೊತೆ ಸುತ್ತ ಕಂಪೌಂಡ್ ವಾಲ್ ನಿರ್ಮಾಣ ಮಾಡದೆ ಹಾಗೂ ಸಿಸಿ ಕ್ಯಾಮರಾ ಹಾಕದೆ ಉದ್ಘಾಟನೆ ಮಾಡಿರುವದು ಅತಿಕ್ರಮಣಕ್ಕೆ ದಾರಿ ಮಾಡಿ ಕೊಟ್ಟಂತಾಗಿದೆ ಎಂದರು.

ಡಬ್ಬದ ಅಂಗಡಿ ತೆರವುಗೊಳಿಸುವವರೆಗೂ ಕಂಪೌಂಡ್ ವಾಲ್ ಕಾಮಗಾರಿ ನಿಲ್ಲಸಬೇಕು, ಜೊತೆಗೆ ಕ್ಯಾಂಟಿನ್‌ ‌ಸುತ್ತ ಪೂರ್ಣ ಕಂಪೌಂಡ್ ವಾಲ್ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.‌

ನಗರ ಸಭೆಯ ವ್ಯಾಪ್ತಿಯಲ್ಲಿ ಇದೆ ರೀತಿಯಾಗಿ ಅನೇಕ ಕಡೆ ಸರಕಾರಿ ಜಾಗ ಮತ್ತು ಜಮೀನಿಗಳು ಅತಿಕ್ರಮಣ ಮಾಡಿಕೊಂಡಿದ್ದಾರೆ, ನಗರ ಸಭೆಯವರು ಒಂದು ವೇಳೆ ಅಕ್ರಮವಾಗಿ ಇರಿಸಲಾದ ಡಬ್ಬವನ್ನು ತೆರವುಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿಯ ಬಸವರಾಜ ಬಿರಾದಾರ್, ಸಿದ್ರಾಮ ಕುಸಾಳೆ, ಸದಾನಂದ ಕುಂಬಾರ, ಗೋವಿಂದ ಕುಸಾಳೆ, ನಾರಾಯಣ ಕಂದಕೂರ ಮತ್ತು ಲೋಹಿತ ಮಳಖೇಡ ಇದ್ದರು.

Leave a Reply

Your email address will not be published. Required fields are marked *