‘ಬಿಗ್ ಬಾಸ್​’ ಈಗಿನ ಸೀಸನ್​ಗೆ ಸುದೀಪ್ ಸಂಭಾವನೆ ಎಷ್ಟು ಗೊತ್ತಾ ? ಈ ಹಿಂದೆ ಎಷ್ಟಿತ್ತು ?

ಸುದ್ದಿ ಸಂಗ್ರಹ

ಬೆಂಗಳೂರು: ಸುದೀಪ್ ಬಿಗ್ ಬಾಸ್’ನ ಅತಿಯಾಗಿ ಪ್ರೀತಿಸುತ್ತಾರೆ. ಸ್ಪರ್ಧಿಗಳನ್ನು ತಮ್ಮ ಮನೆಯವರಂತೆ ಕಾಣುತ್ತಾರೆ. ಈ ಕಾರಣಕ್ಕೆ ಸುದೀಪ್ ಅವರು ಪ್ರತಿ ಸೀಸನ್​ನಲ್ಲಿ ಸ್ಪರ್ಧಿಗಳಿಗೆ ತಾವೇ ಅಡುಗೆ ಮಾಡಿ ಮನೆಯಿಂದ ಊಟ ಕಳುಹಿಸುತ್ತಾರೆ. ಇದು ಅವರಿಗೆ ಬಿಗ್ ಬಾಸ್​ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ.

ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮಧ್ಯದಲ್ಲೇ ಶಾಕಿಂಗ್ ಅಪ್​ಡೇಟ್ ಕೊಟ್ಟಿದ್ದಾರೆ. ಈ ಸೀಸನ್ ಬಳಿಕ ಶೋ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಕೂಡ ನೀಡಿದ್ದಾರೆ. ಅವರ ಈ ನಿರ್ಧಾರದಿಂದ ಅಭಿಮಾನಿಗಳಿಗೆ ​ಬೇಸರ ಮೂಡಿದೆ.

ಸುದೀಪ್ ಬಿಗ್ ಬಾಸ್​ನ ಅತಿಯಾಗಿ ಪ್ರೀತಿಸುತ್ತಾರೆ. ಸ್ಪರ್ಧಿಗಳನ್ನು ತಮ್ಮ ಮನೆಯವರಂತೆ ಕಾಣುತ್ತಾರೆ. ಈ ಕಾರಣಕ್ಕೆ ಪ್ರತಿ ಸೀಸನ್​ನಲ್ಲಿ ಸ್ಪರ್ಧಿಗಳಿಗೆ ತಾವೇ ಅಡುಗೆ ಮಾಡಿ ಮನೆಯಿಂದ ಊಟ ಕಳುಹಿಸುತ್ತಾರೆ. ಇದು ಅವರಿಗೆ ಬಿಗ್ ಬಾಸ್​ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ.

ಈ ಮೊದಲು ಐದು ಸೀಸನ್​ಗಳಿಗೆ ಸುದೀಪ್ ಒಪ್ಪಂದ ಮಾಡಿಕೊಂಡಿದ್ದರು. ಐದು ಸೀಸನ್​ಗಳಿಂದ ಅವರು ಪಡೆದುಕೊಂಡಿದ್ದು 20 ಕೋಟಿ ರೂ ಎನ್ನಲಾಗಿದೆ. ಅಂದರೆ, ಪ್ರತಿ ಸೀಸನ್​ಗೆ ಅವರು ನಾಲ್ಕು ಕೋಟಿ ರೂ.ಗಳು ಪಡೆದಿದ್ದಾರೆ ಎನ್ನಲಾಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ಸುದೀಪ್ 8 ಕೋಟಿ ರೂ ಪಡೆದಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಸುದೀಪ್ ಕಡೆಯಿಂದಾಗಲಿ, ಕಲರ್ಸ್ ವಾಹಿನಿ ಕಡೆಯಿಂದ ಯಾವುದೆ ಅಧಿಕೃತ ಘೋಷಣೆಯಾಗಿಲ್ಲ.

ಸುದೀಪ್ ಅವರ ಖಡಕ್ ನಿರೂಪಣೆ ಇಷ್ಟವಾಗುತ್ತದೆ. ಅವರಿಂದಲೇ ಶೋ ಟಿಆರ್​ಪಿ ಕೂಡ ಹೆಚ್ಚಿದೆ. ಈಗ ಅವರು ಇಲ್ಲ ಎಂದರೆ, ಶೋ ವರ್ಚಸ್ಸು ಕಡಿಮೆಯಾಗುವ ಭಯ ಶುರುವಾಗಿದೆ.

Leave a Reply

Your email address will not be published. Required fields are marked *