ಸುದ್ದಿ ಸಂಗ್ರಹ ಚಿತ್ತಾಪುರ
ಮಾಡಬೂಳ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗೆ ಮಂಗಳವಾರ ಭೇಟಿ ನೀಡಿದ ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ರಾಹುಲ್ ತುಕಾರಾಮ್ ಪಾಂಡ್ವೆ ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆ-2 ಪರಿಶೀಲಿಸಿದರು.
ಪರೀಕ್ಷೆಗಿಂತ ಮೊದಲ ದಿನವಾಗಿದ್ದ ಈ ದಿನ ಕನ್ನಡ ವಿಷಯಕ್ಕೆ ವಿದ್ಯಾರ್ಥಿಗಳು ಉತ್ತರ ಬರೆಯುತ್ತಿದ್ದರು. ಈ ಕೊಠಡಿಯನ್ನು ಪರಿಶೀಲಿಸಿ, ಪರೀಕ್ಷೆ-1ರ ಫಲಿತಾಂಶ ಗಮನಿಸಿದರು.
ಫಲಿತಾಂಶ ಉತ್ತಮ ಪಡಿಸಲು ಈಗಾಗಲೆ ನೀಡಿದ ಮಿಷನ್ 40 + ಸರಿಯಾಗಿ ಅನುಷ್ಠಾನ ಮಾಡಿ ಶಾಲೆಯ ಫಲಿತಾಂಶ ಶೇ.90ರಷ್ಟು ಪಡೆಯಲು ಎಲ್ಲಾ ಶಿಕ್ಷಕರು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಗುಂಡಗುರ್ತಿ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ಸಿಆರ್ಸಿ ಸಂಯೋಜಕ ಶಿವಲಿಂಗಯ್ಯ ಹಿರೇಮಠ, ಮುಖ್ಯಗುರುಗಳಾದ ಸಿದ್ದಮ್ಮ ಹೆಬ್ಬಾಳ, ಮಾಳಪ್ಪ ಪೂಜಾರಿ ಇದ್ದರು.