ಮಾಡಬೂಳ, ಗುಂಡಗುರ್ತಿ ಪರೀಕ್ಷಾ ಕೇಂದ್ರಕ್ಕೆ ಹೆಚ್ಚುವರಿ ಆಯುಕ್ತ ರಾಹುಲ್ ಪಾಂಡ್ವೆ ಭೇಟಿ, ಪರಿಶೀಲನೆ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಚಿತ್ತಾಪುರ
ಮಾಡಬೂಳ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗೆ ಮಂಗಳವಾರ ಭೇಟಿ ನೀಡಿದ ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ರಾಹುಲ್ ತುಕಾರಾಮ್ ಪಾಂಡ್ವೆ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ-2 ಪರಿಶೀಲಿಸಿದರು.

ಪರೀಕ್ಷೆಗಿಂತ ಮೊದಲ ದಿನವಾಗಿದ್ದ ಈ ದಿನ ಕನ್ನಡ ವಿಷಯಕ್ಕೆ ವಿದ್ಯಾರ್ಥಿಗಳು ಉತ್ತರ ಬರೆಯುತ್ತಿದ್ದರು. ಈ ಕೊಠಡಿಯನ್ನು ಪರಿಶೀಲಿಸಿ, ಪರೀಕ್ಷೆ-1ರ ಫಲಿತಾಂಶ ಗಮನಿಸಿದರು.‌

ಫಲಿತಾಂಶ ಉತ್ತಮ ಪಡಿಸಲು ಈಗಾಗಲೆ ನೀಡಿದ ಮಿಷನ್ 40 + ಸರಿಯಾಗಿ ಅನುಷ್ಠಾನ ಮಾಡಿ ಶಾಲೆಯ ಫಲಿತಾಂಶ ಶೇ.90ರಷ್ಟು ಪಡೆಯಲು ಎಲ್ಲಾ ಶಿಕ್ಷಕರು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಗುಂಡಗುರ್ತಿ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ಸಿಆರ್‌ಸಿ ಸಂಯೋಜಕ ಶಿವಲಿಂಗಯ್ಯ ಹಿರೇಮಠ, ಮುಖ್ಯಗುರುಗಳಾದ ಸಿದ್ದಮ್ಮ ಹೆಬ್ಬಾಳ, ಮಾಳಪ್ಪ ಪೂಜಾರಿ ಇದ್ದರು.

Leave a Reply

Your email address will not be published. Required fields are marked *