ತೋಟ್ನಳ್ಳಿ ಶ್ರೀ ದುರ್ಗಾದೇವಿ ಪಲ್ಲಕ್ಕಿ ಉತ್ಸವ ಪತ್ರಿಕೆ ಬಿಡುಗಡೆ‌

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ತೋಟ್ನಳ್ಳಿ
ಗ್ರಾಮದ ಶ್ರೀ ದುರ್ಗಾದೇವಿ ಪಲ್ಲಕ್ಕಿ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಡಾ.ತ್ರಿಮೂರ್ತಿ ಶಿವಾಚಾರ್ಯರ ನೇತೃತ್ವದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಬಿಡುಗಡೆ ಮಾಡಿದರು. ಆಮಂತ್ರಣ ಪತ್ರಿಕೆಯ ದಾಸೋಹಿಗಳಾದ ವಿಶ್ವನಾಥ ತೋಟ್ನಳ್ಳಿ, ಡಾ.ವಿವೇಕಾನಂದ ಬುಳ್ಳಾ ಮತ್ತು ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

ಸೇಡಂ ತಾಲೂಕಿನ ತೋಟ್ನಳ್ಳಿ ಗ್ರಾಮದಲ್ಲಿ ಜ.2 ರಂದು ಸಂಜೆ 5 ಗಂಟೆಗೆ ತೋಟ್ಟಳ್ಳಿ ಗ್ರಾಮದ ಮಹಾಂತೇಶ್ವರ ಮಠದಿಂದ ವಾದ್ಯಮೇಳದೊಂದಿಗೆ ದೇವಿಯ ದೇವಸ್ಥಾನದವರೆಗೆ ಪಲ್ಲಕ್ಕಿ ಉತ್ಸವ
ಹಾಗೂ ದುರ್ಗಾದೇವಿಯ ಉತ್ಸವ ಮೂರ್ತಿಯನ್ನು ಬರಮಾಡಿ ಕೊಳ್ಳುವುದು. ರಾತ್ರಿ 8.30ಕ್ಕೆ ಸುತ್ತ ಮುತ್ತಲಿನ ಗ್ರಾಮಗಳಾದ ಮೀನಾಬಾಳ, ಮಂಗಲಗಿ, ಬಿಜನಳ್ಳಿ, ಸಂಗಾವಿ, ಬೀರನಳ್ಳಿ, ಕುಕ್ಕುಂದಾ, ಯಡಗಾ, ಬೀಜನಳ್ಳಿ,
ನೀಲಹಳ್ಳಿ, ಮಳಖೇಡ, ಮಲಕೂಡ, ತೋನಸನಹಳ್ಳಿ(ಟಿ), ಟೆಂಗಳಿ, ಸಾಲಹಳ್ಳಿ ಮತ್ತು ಕೊಡದೂರ ಸೇರಿದಂತೆ ವಿವಿಧ ಗ್ರಾಮದ ಗ್ರಾಮಸ್ಥರಿಂದ ಭಜನಾ ಕಾರ್ಯಕ್ರಮ ನೆರೆವೇರುವುದು.

ಜ. 3 ರಂದು ಮಲ್ಲಿಕಾರ್ಜುನಸ್ವಾಮಿ ಸಹಿತ ದೇವಿ ವಿಗ್ರಹಕ್ಕೆ ರುದ್ರಾಭಿಷೇಕ ಕನ್ನೆ ಮುತ್ತೈದೆಯರಿಂದ ಉಡಿ ತುಂಬುವ ಕಾರ್ಯಕ್ರಮ, ನಂತರ ತಜ್ಞ ವೈದ್ಯರ ನೇತೃತ್ವದಲ್ಲಿ ತಾಲೂಕು ಸಮುದಾಯ ಆರೋಗ್ಯ ಕೇಂದ್ರ ಸೇಡಂ ಸಹಯೋಗದಲ್ಲಿ ಉಚಿತ ಆರೋಗ್ಯ ಶಿಬಿರ ಮತ್ತು ರಾತ್ರಿ 9ಕ್ಕೆ ನಂತರ ‘ರೇಣುಕಾ ಮಹಾತ್ಮೆ’ ಬಯಲಾಟ ಹಮ್ಮಿಕೊಳ್ಳಲಾಗಿದೆ.‌

ಈ ಕಾರ್ಯಕ್ರಮಕ್ಕೆ ಸೇಡಂ ಶಿವಶಂಕರ ಶಿವಾಚಾರ್ಯರು, ಟೆಂಗಳಿ- ಮಂಗಲಗಿಯ ಡಾ.ಶಾಂತಸೋಮನಾಥ ಶಿವಾಚಾರ್ಯರು, ಮಳಖೇಡದ ಅಭಿನವ ಕಾರ್ತಿಕೇಶ್ವರ ಶಿವಚಾರ್ಯರು, ಕೊಟ್ಟೂರೇಶ್ವರ ಶಿವಾಚಾರ್ಯರು, ಸೇಡಂ ಪಂಚಾಕ್ಷರಿ ಮಹಾಸ್ವಾಮಿಗಳು, ಸದಾಶಿವ ಮಹಾಸ್ವಾಮಿಗಳು, ರಾಯಕೋಡ ಚಿಕ್ಕಶಿವಲಿಂಗೇಶ್ವರ
ದೇವರು, ನಿಡಗುಂದಾ ಉಮೇಶ್ವರ ದೇವರು ಸಾನಿಧ್ಯ
ವಹಿಸಲಿದ್ದಾರೆ. ‌‌….ಕಲಬುರಗಿ ಚನ್ನವೀರ ಮುತ್ಯಾ, ಮಂಗಲಗಿ ಸಿದ್ದಯ್ಯ ಮುತ್ಯಾ, ಕರವಾಳ ತೋಟಯ್ಯ ಶಾಸ್ತ್ರಿಗಳು ಅವರ ಸಮ್ಮುಖದಲ್ಲಿ ಮಹಾಂತೇಶ್ವರ ಹಿರೇಮಠ ಶಿವಮೂರ್ತಿ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ ಮಾತ್ರಾ ಮಹೋತ್ಸವ ಕಾರ್ಯಕ್ರಮ ಜರುಗಲಿದೆ.

ಜಾತ್ರೆಗೆ ಬರುವ ಭಕ್ತರಿಗೆ ಸೇಡಂ ಮತ್ತು ಮಳಖೇಡದಿಂದ ತೋಟ್ಟಳ್ಳಿ ದುರ್ಗಾದೇವಿ ದೇವಸ್ಥಾನಕ್ಕೆ ಬಸ್ಸಿನ ಸೌಕರ್ಯವಿರುತ್ತದೆ ಎಂದು ಶ್ರೀ ಮಠದ ಭಕ್ತರು ಮತ್ತು ಜಾತ್ರಾ ಮಹೋತ್ಸವದ ಪತ್ರಿಕಾ ಮುದ್ರಣ ಸೇವಾಕರ್ತ ವಿಶ್ವನಾಥ ತೋಟ್ನಳ್ಳಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *