ಸುದ್ದಿ ಸಂಗ್ರಹ ಕಲಬುರಗಿ
ಭರತನಾಟ್ಯವು ಕೇವಲ ನೃತ್ಯವಲ್ಲ, ಅದು ಭಾರತದ ಶ್ರೀಮಂತ ಸಾಂಸ್ಕೃತಿಕ, ಪರಂಪರೆಯ ಸಂಕೇತವಾಗಿದೆ. ಆಧ್ಯಾತ್ಮಿಕತೆಯ ಆಳ ಮತ್ತು ಕಲಾತ್ಮಕ ಶ್ರೇಷ್ಠತೆಯ ಪ್ರತೀಕವಾಗಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ವತಿಯಿಂದ 2023-24ನೇ ಸಾಲಿನ ‘ಅಕಾಡೆಮಿ ಬಾಲಗೌರವ ಪ್ರಶಸ್ತಿ’ ಪುರಸ್ಕೃತೆ, ಭರತನಾಟ್ಯ ಕಲಾವಿದೆ ವರ್ಷಿಣಿ ಆರ್. ಪತ್ತಾರ ಅವರಿಗೆ ನಗರದ ಮಾಣಿಕೇಶ್ವರಿ ಕಾಲೋನಿಯಲ್ಲಿನ ‘ಶಾಂತಲೆ ಸಾಂಸ್ಕೃತಿಕ ನೃತ್ಯಕಲಾ ಸಂಸ್ಥೆ’ಯಲ್ಲಿ ಬುಧವಾರ ಸಂಜೆ ಬಸವೇಶ್ವರ ಸಮಾಜ ಸೇವಾ ಬಳಗ ಮತ್ತು ಶಾಂತಲೆ ಸಂಸ್ಥೆ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸತ್ಕರಿಸಿ, ಮಾತನಾಡಿದ ಅವರು, ನಮ್ಮ ಭಾಗದಲ್ಲಿ ಅನೇಕ ಪ್ರತಿಭಾವಂತರಿದ್ದಾರೆ. ಅವರನ್ನು ಗುರುತಿಸಿ, ಪ್ರೋತ್ಸಾಹಿಸುವುದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗೆಪ್ಪಾ ಎಸ್. ಬಿರಾದಾರ, ಡಾ.ರಾಜಶೇಖರ ಪಾಟೀಲ್, ಅಸ್ಲಾಂ ಶೇಖ್, ದೇವೇಂದ್ರಪ್ಪ ಎಚ್.ಸುತಾರ, ಜಯಶ್ರೀ ಆರ್.ಪತ್ತಾರ, ನೇಮಿಚಂದ್ರ ಪಿ.ಭೋಗಾರ, ಜ್ಯೋತಿ, ಜಯಶ್ರೀ, ಕನ್ಯಾಕುಮಾರಿ, ಮಲ್ಲಮ್ಮ, ಈರಮ್ಮ, ಕನ್ಯಾಕುಮಾರಿ, ಸಿದ್ದಲಿಂಗ, ಗಣೇಶ ಸೇರಿದಂತೆ ಅನೇಕರು ಇದ್ದರು.