ಕರ್ನಾಟಕಕ್ಕೆ ಸಗರನಾಡಿನ ಕೊಡುಗೆ ಅಪಾರ: ಮುಡುಬಿ ಗುಂಡೇರಾವ

ಜಿಲ್ಲೆ

ಸುದ್ದಿ ಸಂಗ್ರಹ ಕಲಬುರಗಿ
ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು ಆಳಿದ ಪುಣ್ಯ ನೆಲ, ಪ್ರಾಚೀನ ಕಾಲದಿಂದಲೂ ಕರ್ನಾಟಕಕ್ಕೆ ಸಗರನಾಡಿನ ಕೊಡುಗೆ ಅಪಾರವಾಗಿದೆ ಎಂದು ಎಂದು ಸಂಶೋಧಕ ಮುಡುಬಿ ಗುಂಡೇರಾವ ಅಭಿಮತವ್ಯಕ್ತಪಡಿಸಿದರು.

ಜಿಲ್ಲೆಯ ಜೇವರ್ಗಿ ಪಟ್ಟಣದ ಹನುಮಾನ ಮಂದಿರದ ಪರಿಸರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ ಹಮ್ಮಿಕೊಂಡಿರುವ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ -46 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಗರನಾಡಿನಲ್ಲಿ ದೊರೆಯುವ ಪಾಚೀನ ಸ್ಮಾರಕಗಳು, ಕೋಟೆಕೊತ್ತಲಗಳು, ದೇವಾಲಯಗಳು, ಶಾಸನ, ವೀರಗಲ್ಲುಗಳು ಕನ್ನಡ ನಾಡಿನ ಇತಿಹಾಸದ ಪುಟ ತೆರೆಯುತ್ತವೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಪ್ರಧಾನ ಮಂತ್ರಿಯಾಗಿದ್ದ ಕೊಂಡುಗುಳಿ ಕೇಶಿರಾಜ, ಅಭಿನವ ಪಂಪ ನಾಗಚಂದ್ರ ಕವಿಗಳು ನಡೆದಾಡಿದ ಪುಣ್ಯಭೂಮಿ, ಬಸವೋತ್ತರ ಕಾಲಘಟ್ಟದಲ್ಲಿ ವಚನ ಚಳುವಳಿ ಸಗರನಾಡಿನಲ್ಲಿ ಸಮರ್ಥವಾಗಿ ಮುಂದುವರೆಸಿದ ಷಣ್ಮುಖ ಶಿವಯೋಗಿಗಳು, ತತ್ವಪದ ಕಡಿಕೋಳ ಮಡಿವಾಳಪ್ಪ, ಅರಳಗುಂಡಗಿಯ ಶರಣಬಸವೇಶ್ವರರು, ಅಂದೇಲಿಯ ಕರುಣೇಶ್ವರರು, ನೆಲೋಗಿಯ ಕೋಲ ಶಾಂತಯ್ಯ, ಆದ್ಯವಚನಕಾರ ದೇವರದಾಸಿಮಯ್ಯ, ತಿಂತಣಿ ಮೌನೇಶ್ವರರು ಮುಂತಾದ ಶರಣರು ತಮ್ಮ ವಚನಗಳ ಮೂಲಕ ಸಮಾಜ ಪರಿವರ್ತನೆ ಮಾಡಿದ್ದಾರೆ. ಸಗರ ನಾಡಿನ ಇತಿಹಾಸವನ್ನು ಮಕ್ಕಳಿಗೆ ತಿಳಿಸಿಕೊಡುವ ಕೆಲಸವಾಗಬೇಕು ಎಂದರು.

ಬಳಗದ ಅಧ್ಯಕ್ಷ ಹೆಚ್ ಬಿ ಪಾಟೀಲ ಮಾತನಾಡಿ, ನಮ್ಮ ಬಳಗದ ವತಿಯಿಂದ ಕಳೆದ ಒಂದುವರೆ ವರ್ಷದಿಂದ ಐತಿಹಾಸಿಕ ಜಾಗೃತಿ ಅಭಿಯಾನ ಹಮ್ಮಿಕೊಂಡು ಬರಲಾಗುತ್ತಿದೆ, ಜಿಲ್ಲೆಯ ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಪ್ರತಿಯೊಬ್ಬರು ಐತಿಹಾಸಿಕ ಸ್ಮಾರಕಗಳನ್ನು ಸಂಹರಕ್ಷಿಸುವ ಕೆಲಸ ಮಾಡಬೇಕು ಎಂದರು.

ಸಮಾಜ ಸೇವಕ ರವೀಂದ್ರಕುಮಾರ ವೈ ಕೋಳಕೂರ ಮಾತನಾಡಿ, ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಬಸವೇಶ್ವರ ಸೇವಾ ಬಳಗದ ಕೊಡುಗೆ ಅಪಾರವಾಗಿದೆ. ಸಗರ ನಾಡಿನ ಬಗ್ಗೆ ಹೊಸ ಸಂಶೋಧನೆಗಳು ಜರುಗಲಿ ಎಂದರು.

ಜೇವರ್ಗಿ ತಾಲೂಕಿನ ಇತಿಹಾಸವೆಂದರೆ ಅದು ಕನ್ನಡ ನಾಡಿನ ಇತಿಹಾಸವಾಗಿದೆ, ಸಗರನಾಡಿನ ಕೊಡುಗೆ ಅಪಾರವಾಗಿದೆ, ಈ ನೆಲದ ಇತಿಹಾಸ ರೋಚಕವಾಗಿದೆ, ಅಭಿನವ ಪಂಪ ನಾಗಚಂದ್ರ, ಪ್ರಧಾನಿ ಮತ್ತು ಕವಿ ಕೊಂಡುಗುಳಿ ಕೇಶಿರಾಜ, ಶ್ರೇಷ್ಠ ವಚನಕಾರ ಷಣ್ಮುಖ ಶಿವಯೋಗಿಗಳು, ದೇವರದಾಸಿಮಯ್ಯ, ಕಡಿಕೋಳ ಮಡಿವಾಳಪ್ಪ ಮುಂತಾದ ಶರಣರು ಮಾಡಿದ ಸಮಾಜ ಪರಿವರ್ತನೆಯ ಕಾರ್ಯ ಭವಿಷ್ಯದ ದಾರಿದೀಪವಾಗಿವೆ.

ಮುಡುಬಿ ಗುಂಡೇರಾವ
ಸಂಶೋಧಕ- ಸಾಹಿತಿಗಳು

ಈ ಸಂಧರ್ಭದಲ್ಲಿ ಪ್ರಾಚಾರ್ಯ ದೇವಿಂದ್ರ ಗುಡೂರು, ಮಹಾನಂದ ಹಿರೇಮಠ, ಶರಣಬಸಪ್ಪ ಮತ್ತು ಯಮನಪ್ಪ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *