ಯಾರಿಗೆ ಹೇಳ್ತಿರಾ ಹೇಳಿ: ರಾಷ್ಟ್ರೀಯ ಹೆದ್ದಾರಿಯ ಟೋಲ್‌ನಲ್ಲಿ MLC ತಡೆದು ಅನುಚಿತ ವರ್ತನೆ

ಜಿಲ್ಲೆ

ಸುದ್ದಿ ಸಂಗ್ರಹ ವಿಜಯಪುರ
ರಾಷ್ಟ್ರೀಯ ಹೆದ್ದಾರಿ 52ರ ಟೋಲ್‌ನಲ್ಲಿ ಎಂಎಲ್‌ಸಿ ಕೇಶವ ಪ್ರಸಾದ್ ಅವರನ್ನು ತಡೆದು ಅನುಚಿತ ವರ್ತನೆ ತೋರಿರುವ ಘಟನೆ ನಡೆದಿದೆ.

ವಿಜಯಪುರ ನಗರದ ಹೊರವಲಯದಲ್ಲಿರುವ ಬೆಂಗಳೂರು-ಸೋಲಾಪುರ ಹೈವೆಯಲ್ಲಿರುವ ಟೋಲ್‌ನಲ್ಲಿ ಕೇಶವ ಪ್ರಸಾದ್ ಅವರ ಪಾಸ್ ಹಾಗೂ ಪಿಎ ಮೊಬೈಲ್ ಕಸಿದುಕೊಂಡ ಮಹಿಳಾ ಸಿಬ್ಬಂದಿ ಅನುಚಿತ ವರ್ತನೆ ತೋರಿದ್ದಾರೆ.

ಬರೋಬ್ಬರಿ ಒಂದು ಗಂಟೆಕಾಲ ಎಂಎಲ್‌ಸಿಯನ್ನು ತಡೆದು ಗೊಂದಲ ಸೃಷ್ಟಿಸಿದ್ದಾರೆ. ಮೊಬೈಲ್, ಪಾಸ್ ಕಸಿದು ‘ಯಾರಿಗೆ ಹೇಳ್ತಿರಾ ಹೇಳಿ’ ಎಂದು ಏರುದ್ವನಿಯಲ್ಲಿ ಮಾತನಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

ನೀವೆ ಎಂಎಲ್‌ಸಿ ಅಂತ ನಾವು ಹೇಗೆ ನಂಬೋದು ಎಂದು ಟೋಲ್ ಸಿಬ್ಬಂದಿ ಪ್ರಶ್ನಿಸಿದ್ದಾರೆ. ಸಿಬ್ಬಂದಿ ನಡೆಯಿಂದ ಬೇಸತ್ತ ಪ್ರಸಾದ್ ಅವರು ಎಸ್ಪಿ ಲಕ್ಷ್ಮಣ ನಿಂಬರಗಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಗ್ರಾಮೀಣ ಪೊಲಿಸ್ ಠಾಣಾ ಪೊಲೀಸರು ದೌಡಾಯಿಸಿ ವಾತಾವರಣ ತಿಳಿಗೊಳಿಸಿದ್ದಾರೆ.

ಸ್ಥಳದಲ್ಲಿ ಬಿಜೆಪಿ ಕಾರ್ತಕರ್ತರು ಕೂಡ ಜಮಾವಣೆಗೊಂಡಿದ್ದರು. ಕೆಲ ಕಾಲ ಟೋಲ್‌ನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಒಂದುವರೆ ಗಂಟೆ ನಂತರ ಸ್ಥಳಕ್ಕೆ ಟೋಲ್ ಅಧಿಕಾರಿ ಭೇಟಿಯಾದರು. ಆಗ ಟೋಲ್ ಅಧಿಕಾರಿಯನ್ನು ಬಿಜೆಪಿ ಕಾರ್ಯಕರ್ತರು ತರಾಟೆಗೆ ತಗೆದುಕೊಂಡರು. ಅನುಚಿತ ವರ್ತನೆ ತೋರಿದ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಕೊನೆಗೆ ಪೊಲೀಸರು ಗೊಂದಲ ನಿವಾರಣೆ ಮಾಡಿದರು.

Leave a Reply

Your email address will not be published. Required fields are marked *