ಸುದ್ದಿ ಸಂಗ್ರಹ ಶಹಾಬಾದ್
ದಿ.ಸಂತೋಷ ಇಂಗಿನಶೆಟ್ಟಿ ಅವರು ಕನ್ನಡ ಸಾಹಿತ್ಯದ ಪ್ರೇರಕ, ಪೋಷಕ, ಸಾಮಾಜಿಕ ಸೇವೆ ಜೊತೆಗೆ ಕೊಡುಗೈ ದಾನಿಯಾಗಿದ್ದರು ಎಂದು ಕಾಡಾ ಅಧ್ಯಕ್ಷ ಡಾ.ಎಮ್.ಎ ರಶೀದ ಹೇಳಿದರು.
ನಗರದ ರೈಲ್ವೆ ನಿಲ್ದಾಣದ ಬಳಿ ಸಂತೋಷಕುಮಾರ ಇಂಗಿನಶೆಟ್ಟಿ ಅಭಿಮಾನಿ ಬಳಗದಿಂದ ಹುಟ್ಟು ಹಬ್ಬದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಬಳಗದ ಅಭಿಮಾನಿ ದಿಲೀಪ ನಾಯಕ ಶಹಾಬಾದ ಮಾತನಾಡಿ, ಇಂಗಿನಶೆಟ್ಟಿ. ಅವರ ಅಭಿಮಾನಿ ಬಳಗ ಸಾಮಾಜಿಕ ಕೆಲಸ ಮಾಡುತ್ತಿರುವುದು ಮಾದರಿಯಾಗಿದೆ. ಪ್ರತಿ ವರ್ಷ ಬಡ ರೋಗಿಗಳಿಗೆ ಹಣ್ಣು ವಿತರಣೆ, ಬಡ ಮಕ್ಕಳಿಗೆ ಸಹಾಯ ಧನ, ಉಚಿತ ನೋಟ್ ಬುಕ್, ಬ್ಯಾಗ್ ವಿತರಣೆ, ಅನ್ನ ಸಂತರ್ಪಣೆ ಮಾಡುಲಾಗುತ್ತಿದೆ. ಸಂತೋಷ ಅವರ ಸೇವೆ ಸ್ಮರಿಸಲಾಗುತ್ತದೆ ಎಂದರು.
ಪ್ರಮುಖರಾದ ಕಿಶನ ನಾಯಕ, ಡಾ.ಅಹ್ಮದ ಪಟೇಲ್ ಮಾತನಾಡಿದರು.
ಸಂತೋಷಕುಮಾರ ಇಂಗಿನಶೆಟ್ಟಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ಎನ್ಸಿ ಇಂಗಿನಶೆಟ್ಟಿ ಶಾಲೆಯ ಮಕ್ಕಳಿಗೆ ನೋಟ್ ಬುಕ್, ಹಣ್ಣುಗಳು ಮತ್ತು ಕೇಕ್ ವಿತರಿಸಿದರು. ನಂತರ ಅನ್ನ ಸಂತರ್ಪಣೆ ಮಾಡಲಾಯಿತು.
ಮುಖಂಡರಾದ ವಿಜಯಕುಮಾರ ಮುತ್ತಟ್ಟಿ, ಅಣವೀರ ಇಂಗಿನಶೆಟ್ಟಿ, ಮೃತ್ಯುಂಜಯ ಹಿರೇಮಠ, ವಿಶ್ವರಾಧ್ಯ ಬಿರಾಳ, ಹಾಶಮ ಖಾನ, ಬಾಬುರಾವ ಪಂಚಾಳ, ದಿಲೀಪ ನಾಯಕ, ಪತ್ರಕರ್ತ ವಾಸುದೇವ ಚವ್ಹಾಣ್, ಶರಣು ಬಿರಾಳ, ಅನಿಲಕುಮಾರ ಇಂಗಿನಶೆಟ್ಟಿ, ಪ್ರಶಾಂತ ಮರಗೋಳ, ಕುಮಾರ ಚವ್ಹಾಣ್, ಸಾಹೇಬಗೌಡ ಬೋಗುಂಡಿ, ರಾಜೇಶ ಯನಗುಂಟಿ, ಶರಣಗೌಡ ಪೊಲೀಸ್ ಪಾಟೀಲ್, ಡಾ.ಅಹ್ಮದ ಪಟೇಲ, ರಾಜು ಬೆಳಗುಂಪಿ, ನಿಂಗಣ್ಣ ಪೂಜಾರಿ, ಶರಣು ಪಗಲಾಪೂರ, ವಸಂತ ಕಾಂಬಳೆ, ಶಂಕರ ಕೋಟನೂರ, ದೇವರಾಜ ರಾಠೋಡ, ವಿಜಯ ರಾಠೋಡ, ಪ್ರಕಾಶ ರಾಠೋಡ, ರವಿ ಚವ್ಹಾಣ್, ಬಾಬಾ ಖಾನ, ಆಕಾಶ ನಾಯಕ, ರವಿ ರಾಠೋಡ, ಉಮೇಶ ರಾಠೋಡ ಸೇರಿದಂತೆ ಮುಖಂಡರು, ಯುವಕರು ಪಾಲ್ಗೊಂಡಿದ್ದರು.