ವಿದ್ಯಾರ್ಥಿಗಳು ಪಠ್ಯದ ಜೊತೆ ಆಟೋಟಗಳಲ್ಲಿ ಭಾಗವಹಿಸಿ: ಅಲ್ಲಮ ಪ್ರಭು ಪಾಟೀಲ್

ನಗರದ

ಕಲಬುರಗಿ: ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಬಾರದು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ, ಆಟೋಟಗಳಲ್ಲಿ ಭಾಗವಹಿಸಬೇಕು. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ವ್ಯಾಯಾಮ ದೊರೆಯುತ್ತದೆ ಎಂದು ಶಾಸಕ ಅಲ್ಲಮ ಪ್ರಭು ಪಾಟೀಲ್ ಹೇಳಿದರು.

ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಬಾಲಕರ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಭಾಗವಹಿಸಿ, ನಮ್ಮ ನಾಡು, ದೇಶದ ಕೀರ್ತಿ ತರಬೇಕು ಎಂದರು.

ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲವು ಸಮನಾಗಿ ಸ್ವೀಕರಿಸಿ. ಕ್ರೀಡಾಸ್ಪೂರ್ತಿಯಿಂದ ಭಾಗವಹಿಸಿ ಎಂದು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಡಿಡಿಪಿಐ ಸುರೇಶ ಕೆ.ಅಕ್ಕಣ್ಣ ಮಾತನಾಡಿ, ಈ ವರ್ಷ ನಮ್ಮ ಜಿಲ್ಲೆಗೆ ಬಾಲಕರ ಅಥ್ಲೆಟಿಕ್ಸ್ ಪಂದ್ಯಾವಳಿ ನೀಡಲಾಗಿದೆ. ಇದನ್ನು ಯಶಸ್ವಿಯಾಗಿ ನೆರವೇರಿಸಲು ಇಲಾಖೆ ಸಂಪೂರ್ಣ ಪೂರ್ವ ಸಿದ್ಧತೆ ಮಾಡಲಾಗಿದೆ. ಇದಕ್ಕೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಅವರು ಕಾರ್ಯನಿರ್ವಹಿಸುತ್ತಿದ್ದಾರೆ.  ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

ಮುಖಂಡ ಲಾಲ್ ಅಹಮ್ಮದ್,  ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಪ್ರಾಚಾರ್ಯ ಸಂಘದ ಅಧ್ಯಕ್ಷ‌ ಬಸವರಾಜ ಬಿರಾದಾರ, ಉಪನ್ಯಾಸಕ ಸಂಘದ ಅಧ್ಯಕ್ಷ ಜೆ.ಮಲ್ಲಪ್ಪ, ಕ್ರೀಡಾಕೂಟದ ಸಂಯೋಜಕ ಶ್ರೀಶೈಲಪ್ಪ ಬೋನಾಳ್, ಮುಖಂಡರಾದ ಬಸವರಾಜ ದಿಗ್ಗಾಂವಿ, ದೇವನಗೌಡ ಪಾಟೀಲ, ಡಾ.ಬುರ್ಲಿ ಪ್ರಹ್ಲಾದ್, ಬಿ.ಎಸ್ ಮಾಲಿ ಪಾಟೀಲ್, ಸುಜಾತಾ ಎಂ, ಜೊಹರಾ ಫಾತಿಮಾ, ಭೀಮರಾವ ಅರಕೇರಿ, ರಾಜು ಗಂಗಾಧರ, ಶಂಕರರೆಡ್ಡಿ, ಚಂದ್ರಕಾಂತ ಸನದಿ, ಪ್ರಭಾವತಿ ಪಾಟೀಲ, ಜಯಶ್ರೀ ಎಸ್,  ಭಾರತಿ ಖೂಬಾ, ಶಿವಶರಣಪ್ಪ ಮಸ್ಕನಳ್ಳಿ,  ಪರಮೇಶ್ವರ, ಎನ್.ಎಸ್.ಎಸ್ ವಿಭಾಗೀಯ ಡಾ.ಚಂದ್ರಶೇಖರ ದೊಡ್ಡಮನಿ,  ಬಿ.ಎಚ್.ನಿರಗುಡಿ, ಶಿವಾನಂದ ಖಜೂರ್ಗಿ, ಧರ್ಮರಾಜ ಜವಳಿ, ಮಲ್ಲಿಕಾರ್ಜುನ ಪಾಲಮೂರ್,  ಭೀಮಾಶಂಕರ ಮಠಪತಿ, ಮಹಾದೇವ ನಲಕಂಠೆ,  ಶಿಲ್ಪಾ ಅಲ್ಲದ, ಮಾಪಣ್ಣ ಜಿರೊಳ್ಳಿ, ಉಮೇಶ್ ಅಷ್ಟಗಿ, ದಯಾನಂದ ಬಂದರವಾಡ, ಪರಶಿವಮೂರ್ತಿ, ಶಿವಕುಮಾರ ಸಜ್ಜನ್, ಸಂತೋಷ ಡಿಗ್ಗಿ, ಕಾಂತಪ್ಪ ಬಡಿಗೇರ, ಪರಮೇಶ್ವರ ನಾಯಕ್ ಹಾಗೂ ವಿವಿಧ ಜಿಲ್ಲೆಗಳ ತಂಡದ ವ್ಯವಸ್ಥಾಪಕರು ವೇದಿಕೆ ಮೇಲಿದ್ದರು.

ಕಾರ್ಯಕ್ರಮವನ್ನು ದೇವಿದಾಸ ಪವಾರ ನಿರೂಪಿಸಿದರು, ಡಿಡಿಪಿಯು ಕಚೇರಿಯ ಸಿಬ್ಬಂದಿ, ಕ್ರೀಡಾಕೂಟದ ಎಲ್ಲಾ ಸಮಿತಿಯವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *