ಸಚಿವ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ ಕರೆ ಖಂಡಿಸಿ: ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ

ಪಟ್ಟಣ

ಸುದ್ದಿ ಸಂಗ್ರಹ ಶಹಾಬಾದ
ಸರ್ಕಾರಿ ಸ್ಥಳಗಳಲ್ಲಿ ಹಾಗೂ ಶಾಲೆಗಳ ಜಾಗದಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿರ್ಬಂಧಿಸುವಂತೆ ಕೋರಿ ಪತ್ರ ಬರೆದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ದುಷ್ಕರ್ಮಿಗಳು ಕರೆ ಮಾಡಿ ಬೆದರಿಸುತ್ತಿರುವುದುನ್ನು ಖಂಡಿಸಿ ಶುಕ್ರವಾರ ಬೆಳಗ್ಗೆ ನಗರದ ವಾಡಿ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರೆ 150ರ ಮೇಲೆ ಬ್ಲಾಕ್ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಮಾಡಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.   

ಕಲಬುರಗಿ ಕಾಡಾ ಅಧ್ಯಕ್ಷ ಡಾ.ಎಮ್.ಎ ರಶೀದ ಮತ್ತು ಜಿ.ಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ್ ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯ ಮಟ್ಟದಲ್ಲಿ ಬೆಳೆಯುತ್ತಿರುವುದು ಸಹಿಸದೆ ಅವರ ವಿರುದ್ಧ ಕೀಳುಮಟ್ಟದ ಭಾಷೆ ಬಳಸಿ ನಿಂದಿಸಲಾಗುತ್ತಿದೆ. ಸಮಾಜದಲ್ಲಿ ಕೆಟ್ಟ ಆಲೋಚನೆಗಳಿಗೆ ಆರ್‌ಎಸ್‌ಎಸ್ ಪುಷ್ಟಿಕೊಡುತ್ತಿದೆ.ಎಂದರು. 

ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಅವರ ಕುಟುಂಬದ ವಿರುದ್ಧ ಅವಾಚ್ಯ ಮತ್ತು ಅಶ್ಲೀಲ ಶಬ್ದಗಳಿಂದ ವೈಯಕ್ತಿಕವಾಗಿ ನಿಂದಿಸಿದ ಘಟನೆ ಖಂಡಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೃಹತ ಪ್ರತಿಭಟನೆ ನಡೆಯಿತು.

ನಗರ ಸಭೆ ಸದಸ್ಯ ಡಾ.ಅಹ್ಮದ ಪಟೇಲ್, ತಾ.ಪಂ ಮಾಜಿ ಸದಸ್ಯ ನಾಮದೇವ ರಾಠೋಡ, ಮುಖಂಡರಾದ ಸುರೇಶ ಮೆಂಗನ, ಮಹಮ್ಮದ ಉಬೇದುಲ್ಲ, ಅಜೀತಕುಮಾರ ಪೊಲೀಸ ಪಾಟೀಲ್, ರಾಜು ಮೀಸ್ತ್ರಿ, ಮುಜಾಹೀದ ಹುಸೇನ ಮಾತನಾಡಿದರು. 

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮುಖಂಡರಾದ ವಿಜಯಕುಮಾರ ಮುತ್ತಟ್ಟಿ, ಮೃತ್ಯುಂಜಯ ಹಿರೇಮಠ, ಗ್ರಾ.ಪಂ ಅಧ್ಯಕ್ಷ ಶರಣಬಸಪ್ಪ ಧನ್ನಾ, ಪ್ರಮುಖರಾದ ಚಂದು ಜಾಧವ, ಮಾಣಿಕಗೌಡ ಪಾಟೀಲ್, ಶರಣಗೌಡ ಪೊಲೀಸ್ ಪಾಟೀಲ್, ವಿಶ್ವರಾಧ್ಯ ಬಿರಾಳ, ಬಾಬುರಾವ ಪಂಚಾಳ,  ನಾಗರಾಜ ಕರಣಿಕ, ಹಾಷಮ ಖಾನ, ದೇವಿಂದ್ರಪ್ಪ ವಾಲಿ, ಸಾಹೇಬಗೌಡ ಬೋಗುಂಡಿ, ಶಂಕರ ಕೋಟನೂರ, ಮಹ್ಮದ ಜಾವಿದ, ಅನ್ವರ ಪಾಶಾ, ಮಹ್ಮದ ಜಲೀಲ್, ಮಹ್ಮದ ಮಸ್ತಾದ, ಬಸವರಾಜ ಮಯೂರ, ಫಜಲ ಪಟೇಲ್, ಕಿರಣ ಚವ್ಹಾಣ್, ಮೀರಲ್ಲಿ ನಾಗೋರೆ, ಮೀರಜ ಸಾಹೇಬ, ಶೇರ ಅಲಿ, ಧನ್ವಂತ ಮುದಿಗೌಡ, ಮಹಾರುದ್ರ ಇಂಗಿನಶೆಟ್ಟಿ, ಶಿವಕುಮಾರ ನಾಟೀಕಾರ, ಸುನೀಲ ಚವ್ಹಾಣ್, ಭರತ ಧನ್ನಾ, ರಾಜು ರಾಠೋಡ, ರಾಕೇಶ ಪವಾರ, ಮಹ್ಮದ ಇಮ್ರಾನ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದರು. 

ಪ್ರತಿಭಟನೆಯಿಂದ ಸುಮಾರು 1 ಗಂಟೆಗೂ ಅಧಿಕ ಸಮಯದವರೆಗೆ ಸಂಚಾರ ಬಂದ್ ಆಗಿತು. ನಗರ ಠಾಣೆಯ ಪಿಐ ನಟರಾಜ ಲಾಡೆ, ಪಿಎಸ್‌ಐ ಚಂದ್ರಕಾಂತ ಮಕಾಲೆ, ಎಎಸ್‌ಐ ಹಣಮಂತ ಅಷ್ಟಗಿ ಮತ್ತು ಪೊಲೀಸ್ ಸಿಬ್ಬಂದಿ ಬಂದೋಬಸ್ತ ನೀಡಿದರು. 

Leave a Reply

Your email address will not be published. Required fields are marked *