ಬೆಂಗಳೂರು: ಇತ್ತೀಚಿನ ದಿನಗಳಲ್ಲಿ, ಎಲ್ಲರೂ ಆನ್ಲೈನ್ನಲ್ಲಿ ಹಣ ಗಳಿಸುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಈ ಉದ್ದೇಶಕ್ಕಾಗಿ ಯೂಟ್ಯೂಬ್ ಅತ್ಯಂತ ಜನಪ್ರಿಯ ವೇದಿಕೆಯಾಗಿದ್ದು ಸದಾ ಟ್ರೆಂಡಿಂಗ್ನಲ್ಲಿರುತ್ತದೆ. ಲಕ್ಷಾಂತರ ಜನರು ಹವ್ಯಾಸ, ಪ್ರತಿಭೆ ಅಥವಾ ಜ್ಞಾನ ವೀಡಿಯೊಗಳ ಮೂಲಕ ಹಂಚಿಕೊಳ್ಳುತ್ತಾರೆ ಮತ್ತು ಉತ್ತಮ ಆದಾಯ ಗಳಿಸುತ್ತಾರೆ. ಆದರೆ ದೊಡ್ಡ ಪ್ರಶ್ನೆಯೆಂದರೆ ನೀವು ಇಂದು ಹೊಸ ಯೂಟ್ಯೂಬ್ ಚಾನಲ್ ರಚಿಸಿದರೆ, ಹಣ ಗಳಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ?. ಈ ಕುರಿತು ವಿವರವಾಗಿ ನೋಡೋಣ.
ಯೂಟ್ಯೂಬ್ ನಿಂದ ಹಣ ಗಳಿಸುವ ಮೊದಲ ಹೆಜ್ಜೆ ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಂಗೆ ಸೇರುವುದು. ನೀವು ಈ ಕಾರ್ಯಕ್ರಮಕ್ಕೆ ಸೇರಿದ ನಂತರ, ವೀಡಿಯೊಗಳಲ್ಲಿ ಜಾಹೀರಾತು ಪ್ರದರ್ಶಿಸಲಾಗುತ್ತದೆ ಮತ್ತು ಅಲ್ಲಿಂದ ಗಳಿಕೆ ಪ್ರಾರಂಭವಾಗುತ್ತದೆ. ಕೆಲವು ಅವಶ್ಯಕತೆಗಳನ್ನು ಪೂರೈಸಬೇಕು.
ಯೂಟ್ಯೂಬ್ ತನ್ನ ಪ್ಲಾಟ್ಫಾರ್ಮ್ನಲ್ಲಿ ಹಣ ಗಳಿಸಲು ಕೆಲವು ಮಾನದಂಡಗಳು ನಿಗದಿಪಡಿಸಿದೆ. ನೀವು Shorts ಅಥವಾ ದೀರ್ಘ ವೀಡಿಯೊಗಳು ಅಪ್ಲೋಡ್ ಮಾಡಿದರೆ, ಈ ಕೆಳಗಿನ ಅವಶ್ಯಕತೆಗಳಲ್ಲಿ ಒಂದನ್ನು ಪೂರೈಸಬೇಕು:
12 ತಿಂಗಳುಗಳಲ್ಲಿ 1,000 ಚಂದಾದಾರರು ಮತ್ತು 4,000 ಗಂಟೆಗಳ ವೀಕ್ಷಣೆ ಸಮಯ, ಅಥವಾ ಕಳೆದ 90 ದಿನಗಳಲ್ಲಿ 1,000 ಚಂದಾದಾರರು ಮತ್ತು 10 ಮಿಲಿಯನ್ Shorts ವೀಕ್ಷಣೆಗಳು. ಈ ಮಾನದಂಡಗಳಲ್ಲಿ ಒಂದನ್ನು ನೀವು ಪೂರೈಸಿದ ನಂತರ, ಯೂಟ್ಯೂಬ್ ಪಾಲುದಾರ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು.
YPP ಗೆ ಅರ್ಜಿ ಸಲ್ಲಿಸಿದಾಗ, ಯೂಟ್ಯೂಬ್ ನಿಮ್ಮ ಚಾನಲ್ ಅನ್ನು ಪರಿಶೀಲಿಸುತ್ತದೆ. ಈ ಪ್ರಕ್ರಿಯೆಯು ಸಾಮಾನ್ಯವಾಗಿ 2 ರಿಂದ 4 ವಾರಗಳು ತೆಗೆದುಕೊಳ್ಳುತ್ತದೆ. ಈ ಸಮಯದಲ್ಲಿ ನಿಮ್ಮ ವೀಡಿಯೊಗಳು ಹಕ್ಕುಸ್ವಾಮ್ಯ ಅಥವಾ ಸ್ಪ್ಯಾಮ್ ವಿಷಯದಂತಹ ಯಾವುದೆ ನೀತಿಗಳನ್ನು ಉಲ್ಲಂಘಿಸುತ್ತಿದೆಯೆ ಎಂದು ಯೂಟ್ಯೂಬ್ ಪರಿಶೀಲಿಸುತ್ತದೆ.
ನಿಮ್ಮ ಚಾನಲ್ ಮಾನದಂಡಗಳು ಪೂರೈಸಿದರೆ, ನೀವು ಹಣಗಳಿಕೆಯ ಅನುಮೋದನೆ ಪಡೆಯುತ್ತಿರಿ. ಇದರ ನಂತರ ನಿಮ್ಮ ವೀಡಿಯೊಗಳಲ್ಲಿ ಜಾಹೀರಾತು ಕಾಣಿಸಿಕೊಳ್ಳುತ್ತವೆ ಮತ್ತು ಅಲ್ಲಿಂದ ನಿಮ್ಮ ಗಳಿಕೆ ಪ್ರಾರಂಭವಾಗುತ್ತದೆ.
ಎಲ್ಲಾ ಯೂಟ್ಯೂಬ್ ಗಳಿಕೆಗಳು ನಿಮ್ಮ Google AdSense ಖಾತೆಗೆ ಹೋಗುತ್ತವೆ. ನಿಮ್ಮ ಒಟ್ಟು ಗಳಿಕೆಯು $100 (ಸರಿಸುಮಾರು ರೂ. 8,000) ಮೀರಿದಾಗ ಮಾತ್ರ ನಿಮ್ಮ AdSense ಖಾತೆಯು ಸಕ್ರಿಯಗೊಳ್ಳುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಪ್ರತಿ ತಿಂಗಳ 21 ರಿಂದ 26ನೇ ತಾರೀಖಿನ ನಡುವೆ ನಿಮ್ಮ ಬ್ಯಾಂಕ್ ಖಾತೆಗೆ ಗಳಿಕೆ ವರ್ಗಾಯಿಸಲಾಗುತ್ತದೆ.
ನೀವು ನಿಯಮಿತವಾಗಿ ಗುಣಮಟ್ಟದ ಕಂಟೆಂಟ್ ಅಪ್ಲೋಡ್ ಮಾಡಿದರೆ, ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡರೆ ಮತ್ತು ಯೂಟ್ಯೂಬ್’ನ ಮಾರ್ಗಸೂಚಿಗಳನ್ನು ಅನುಸರಿಸಿದರೆ, ನಿಮ್ಮ ಚಾನಲ್ ಸರಾಸರಿ 3 ರಿಂದ 6 ತಿಂಗಳೊಳಗೆ ಹಣಗಳಿಕೆಯನ್ನು ಸಾಧಿಸಬಹುದು.
ಗಳಿಕೆಯ ಗುಣಮಟ್ಟ ಕಠಿಣ ಪರಿಶ್ರಮ, ವಿಷಯದ ಗುಣಮಟ್ಟ ಮತ್ತು ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಅವಲಂಬಿಸಿರುತ್ತದೆ.