ಕರ್ನಾಟಕದ 5 IAS ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ: ಒಂದೆ ವಾರದಲ್ಲಿ 3ನೇ ಟ್ರಾನ್ಸ್‌ಫರ್‌ ಲಿಸ್ಟ್‌

ರಾಜ್ಯ

ಬೆಂಗಳೂರು: ಕರ್ನಾಟಕ ಸರ್ಕಾರವು 5 ಜನ ಐಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿ ಮಹತ್ವದ ಆದೇಶ ಹೊರಡಿಸಿದೆ. ಕಳೆದ ಒಂದು ವಾರದಲ್ಲಿ ಮೂರನೇ ಬಾರಿ ವರ್ಗಾವಣೆ ಆದೇಶ ಹೊರಬಿದ್ದಿದೆ. ಸೋಮವಾರ ಹೊರಡಿಸಿರುವ ಆದೇಶದಂತೆ ಪಂಚಾಯತ್‌ರಾಜ್‌ ಇಲಾಖೆ ಕಾರ್ಯದರ್ಶಿಯಾಗಿದ್ದ ಡಿ.ರಂದೀಪ್‌ ಅವರಿಗೆ ಹೆಚ್ಚುವರಿಯಾಗಿ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ.

ಎಂ.ಎಸ್‌ ದಿವಾಕರ್‌ ಅವರಿಗೆ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ನಿರ್ದೇಶಕ ಹುದ್ದೆಗೆ ಹೆಚ್ಚುವರಿಯಾಗಿ ಅಟಲ್‌ ಜನ ಸ್ನೇಹಿ ಕೇಂದ್ರದ ನಿರ್ದೇಶಕ ಹುದ್ದೆ ನೀಡಲಾಗಿದೆ.

ನಿತೇಶ್‌ ಪಾಟೀಲ ಅವರಿಗೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ, ಆರ್‌.ರಾಮಚಂದ್ರನ್‌ಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕ, ಡಾ. ಬಿಸಿ ಸತೀಶ ಅವರಿಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ನಿರ್ದೇಶಕ ಹುದ್ದೆಗೆ ಸರ್ಕಾರವು ವರ್ಗಾವಣೆ ಮಾಡಿದೆ.

ವಾರದಲ್ಲಿ 3ನೇ ಬಾರಿ ವರ್ಗಾವಣೆ
ಸರ್ಕಾರವು ಈ ಹಿಂದೆ ಅ.5 ರಂದು ಮತ್ತು ಅ.10 ರಂದು ಐಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿತ್ತು. ಒಂದು ವಾರದಲ್ಲಿ ಸತತ 3ನೇ ಬಾರಿ ಅಧಿಕಾರಿಗಳ ವರ್ಗಾವಣೆಯಾಗಿದೆ.

ವರ್ಗಾವಣೆಯಾದ ಐಎಎಸ್‌ ಅಧಿಕಾರಿಗಳು

  • ಡಿ.ರಂದೀಪ್‌ – ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ (ಹೆಚ್ಚುವರಿ ಹುದ್ದೆ)
  • ಎಂಎಸ್‌ ದಿವಾಕರ್‌ – ಕೆಎಸ್‌ಎನ್‌ಡಿಎಂಸಿ, ಅಟಲ್‌ ಜನ ಸ್ನೇಹಿ ಕೇಂದ್ರದ ನಿರ್ದೇಶಕ (ಹೆಚ್ಚುವರಿ ಹುದ್ದೆ)
  • ನಿತೇಶ್‌ ಪಾಟೀಲ – ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ.
  • ಆರ್‌.ರಾಮಚಂದ್ರನ್‌ – ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕ
  • ಡಾ ಬಿಸಿ ಸತೀಶ – ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ನಿರ್ದೇಶಕ

ವಾರದಿಂದೀಚೆಗೆ ವರ್ಗಾವಣೆಯಾದ ಇತರೆ ಐಎಎಸ್‌ ಅಧಿಕಾರಿಗಳು ಯಾರು ?

  • ಡಾ. ಕೆವಿ ತ್ರಿಲೋಕಚಂದ್ರ – ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ
  • ಸಲ್ಮಾ ಕೆ. ಫಾಹಿಂ – ಹುದ್ದೆ ನಿಯೋಜನೆಗೊಂಡಿಲ್ಲ.
  • ಕೆಬಿ ಶಿವಕುಮಾರ್ – ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು.
  • ಸುರಲ್ಕರ್ ವಿಕಾಸ್ ಕಿಶೋರ್ – ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ
  • ರೋಹಿಣಿ ಸಿಂಧೂರಿ – ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಎಂಎಸ್‌ಎಂಇ ಮತ್ತು ಗಣಿ ವಿಭಾಗದ ಕಾರ್ಯದರ್ಶಿ
  • ಸಮೀರ್‌ ಶುಕ್ಲಾ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕಾರ್ಯದರ್ಶಿ, ದಿಲ್ಲಿಯಲ್ಲಿರುವ ಕರ್ನಾಟಕ ಭವನದ ಕಾರ್ಯದರ್ಶಿ (ಸಮನ್ವಯ)

Leave a Reply

Your email address will not be published. Required fields are marked *