ಹಾಸನಾಂಬೆ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ: ಒಂದೆ ದಿನಕ್ಕೆ 1 ಕೋಟಿ ಆದಾಯ

ಜಿಲ್ಲೆ

ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆ ದೇವಿಯ ದರ್ಶನಕ್ಕೆ 2ನೇ ದಿನವಾದ ಇಂದು ಸಾವಿರಾರು ಭಕ್ತರು ಮುಂಜಾನೆ 4 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಪಾವನರಾದರು.

ಕೆಲವರು ಮಧ್ಯರಾತ್ರಿಯಿಂದಲೇ ಸರತಿ ಸಾಲಿನಲ್ಲಿ ಕಾದು ನಿಂತಿದ್ದರು. ವೀಕೆಂಡ್ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಸಹಜವಾಗಿಯೇ ಹೆಚ್ಚುಗಿತ್ತು. 1 ಸಾವಿರ ಟಿಕಟ್‌ನ ಸಾಲು ಖಾಲಿ ಇದ್ದರೆ, 300 ರೂ. ವಿಶೇಷ ದರ್ಶನದ ಸರತಿ ಸಾಲು ಸಂಪೂರ್ಣ ಭರ್ತಿಯಾಗಿದ್ದವು.

ಸಚಿವ ಶಿವರಾಜ್ ತಂಗಡಗಿ, ಶಾಸಕ ಅರವಿಂದ್ ಬೆಲ್ಲದ್, ಸಂಸದ ಸುನೀಲ್ ಬೋಸ್, ನ್ಯಾಯಾಧೀಶರು ದೇವಿ ದರ್ಶನ ಪಡೆದರು. ಹಾಸನಾಂಬ ದೇವಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಭೇಟಿ ನೀಡಿ ಧರ್ಮ ದರ್ಶನದ ಸಾಲು, 300 ರೂ ವಿಶೇಷ ದರ್ಶನದ ಸಾಲುಗಳನ್ನ ಪರಿಶೀಲಿಸಿದರು. ದೇವಿ ದರ್ಶನಕ್ಕೆ ನಿಂತಿದ್ದ ಭಕ್ತರ ಬಳಿ ವ್ಯವಸ್ಥೆ ಬಗ್ಗೆ ವಿಚಾರಿಸಿದರು.

ಅ.15 ರಂದು ಸಿಎಂ, ಡಿಸಿಎಂ ದರ್ಶನಕ್ಕೆ ಆಗಮಿಸುವ ಬಗ್ಗೆ ಮಾಹಿತಿ ಕೊಟ್ಟರು. ಈ ಮಧ್ಯೆ, ಒಂದೇ ದಿನಕ್ಕೆ 1 ಕೋಟಿ ಆದಾಯ ಬಂದಿದೆ.

Leave a Reply

Your email address will not be published. Required fields are marked *