ವಿಜಯಪುರ: ಮಹಾರಾಷ್ಟ್ರದಲ್ಲಿ ಮಳೆ ಎಫೆಕ್ಟ್ ಹಿನ್ನೆಲೆ ಜಯಪುರದಲ್ಲಿ ಭೀಮಾನದಿ ಪ್ರವಾಹ ಉಂಟಾಗಿದೆ. ಹೀಗಾಗಿ ಈ ಭಾಗದ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ತೆರಳುತ್ತಿದ್ದ ಅಧಿಕಾರಿಗಳು ಮಧ್ಯದಲ್ಲೇ ಲಾಕ್ ಆದ ಘಟನೆ ನಡೆದಿದೆ.
ನೀರಿದ್ದ ಕಾರಣ ಸೇತುವೆ ಮೇಲೆ ವಾಹನ ಕೆಟ್ಟು ಅಧಿಕಾರಿಗಳು ಸಮಸ್ಯೆ ಅನುಭವಿಸಿದ್ದಾರೆ. ಪಿಡಬ್ಲ್ಯೂಡಿ ಅಧಿಕಾರಿಗಳು ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಿಂದ ಭೀಮಾ ನದಿ ಪಾತ್ರಕ್ಕೆ ತೆರಳುತ್ತಿದ್ದಾಗ ಘಟನೆ ನಡೆದಿದೆ.
ಪ್ರವಾಹದಿಂದ ಅಧಿಕ ನೀರು ಬಂದಿದ್ದು, ರಸ್ತೆಯ ಮೇಲೆ ಸಂಚಾರ ಮಾಡುವಾಗ ವಾಹನ ಕೈಕೊಟ್ಟಿದೆ. ಕೊನೆಗೆ ನೀರಿನಲ್ಲೆ ನಡೆದುಕೊಂಡು ಅಧಿಕಾರಿಗಳು ಸಾಗಿದ್ದಾರೆ.