ತಿಂಡಿ ತಿನ್ನಲೂ ಒಂದು ಗಂಟೆ ಬೇಕಿತ್ತು, ಆತ್ಮಹತ್ಯೆ ಯೋಚನೆ ಬಂದಿತ್ತು: ಜೀವನದಲ್ಲಿ ಕಾಡಿದ ನರರೋಗದ ಬಗ್ಗೆ ಸಲ್ಮಾನ್ ಖಾನ್ ಮಾತು

ರಾಷ್ಟೀಯ

ತಿಂಡಿ ತಿನ್ನಲೂ ನನಗೆ ಗಂಟೆಗಳ ಅವಧಿ ಬೇಕಿತ್ತು, ಆತ್ಮಹತ್ಯೆ ಯೋಚನೆಗಳು ಬಂದಿದ್ದವು ಎಂದು ಜೀವನದಲ್ಲಿ ಅನುಭವಿಸಿದ ನರರೋಗದ ನರಕಯಾತನೆ ಬಗ್ಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಮಾತನಾಡಿದ್ದಾರೆ.

‘ಟು ಮಚ್’ ಎಂಬ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನರದ ಅಸ್ವಸ್ಥತೆಯಿಂದಾಗಿ ಉಂಟಾಗಿದ್ದ ಟ್ರೈಜಿಮಿನಲ್ ನರರೋಗದ ಬಗ್ಗೆ, ತಾವು ಅನುಭವಿಸಿದ ಯಾತನೆ ಬಗ್ಗೆ ಹೇಳಿಕೊಂಡಿದ್ದಾರೆ. ಇದು ಸಾಮಾನ್ಯ ಜೀವನದ ಮೇಲೆಯೂ ತೀವ್ರವಾಗಿ ಪರಿಣಾಮ ಬೀರಿತ್ತು. ತಿನ್ನುವದರಿಂದ ಹಿಡಿದು ಎಲ್ಲವನ್ನೂ ಕಷ್ಟವನ್ನಾಗಿಸಿತ್ತು ಎಂದು ತಿಳಿಸಿದ್ದಾರೆ.

2007ರಲ್ಲಿ `ಪಾರ್ಟ್ನರ್’ ಸಿನಿಮಾದ ಸೆಟ್‌ನಲ್ಲಿ ಈ ರೋಗದ ಮೊದಲ ಲಕ್ಷಣ ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ ನಟ ಲಾರಾ ದತ್ತ ಅವರು ನನ್ನ ಮುಖದಿಂದ ಕೂದಲೆಳೆಯನ್ನು ಕಿತ್ತಿದ್ದಾಗ ತೀವ್ರವಾಗಿ ನೋವಾಗಿತ್ತು. ಆಗ ನಾನು ಅದನ್ನು ಹಲ್ಲಿನ ಸಮಸ್ಯೆ ಎಂದುಕೊಂಡಿದ್ದೆ. ಆದರೆ ಬಳಿಕ ಆಸ್ಪತ್ರೆಗೆ ತೆರಳಿದಾಗ ಇದು ನರಗಳಿಗೆ ಸಂಬಂಧಿಸಿದ್ದು ಎಂದು ತಿಳಿಯಿತು. ಆದರೆ ಅದರ ನೋವು ಎಷ್ಟಿರುತ್ತದೆ ಎಂದರೆ ನಿಮ್ಮ ಶತ್ರುವಿಗೂ ಹಾಗಾಗಬಾರದು ಎಂದುಕೊಳ್ಳುವಷ್ಟು ತೀವ್ರವಾಗಿ ನೋವಾಗುತ್ತದೆ. ಇಂತಹ ನೋವಿನಿಂದ ಹೆಚ್ಚು ಆತ್ಮಹತ್ಯೆಗಳು ಸಂಭವಿಸುತ್ತವೆ. ನನಗೂ ಕೂಡ ಅಂತಹ ಯೋಚನೆಗಳು ಬಂದಿದ್ದವು. ಆದರೆ ನಾನು ಈ ನೋವನ್ನು ಏಳೂವರೆ ವರ್ಷಗಳ ಕಾಲ ಅನುಭವಿಸಿದ್ದೆನೆ ಎಂದಿದ್ದಾರೆ.

ಈ ನೋವು ನನ್ನ ದೈನಂದಿನ ಜೀವನದ ಮೇಲೆ ತೀವ್ರವಾಗಿ ಪರಿಣಾಮ ಬೀರಿತು. ಪ್ರತಿ 4-5 ನಿಮಿಷಗಳಿಗೊಮ್ಮೆ ನೋವಾಗುತ್ತಿತ್ತು. ತಿಂಡಿ ತಿನ್ನಬೇಕೆಂದರೆ ನನಗೆ ಒಂದು ಗಂಟೆಗೂ ಅಧಿಕ ಸಮಯಬೇಕಿತ್ತು. ಅಗಿಯಲು ಆಗುತ್ತಿರಲಿಲ್ಲ. ಇದೆಲ್ಲದರ ನಂತರ ನಾನು ಗಾಮಾ ನೈಫ್ ಶಸ್ತ್ರಚಿಕಿತ್ಸೆಗೆ ಒಳಗಾದೆ. ಇದು 8 ಗಂಟೆಗಳ ಕಾಲ ನಡೆದಿತ್ತು. ಅದಾದ ಬಳಿಕ ನೋವು ಕಡಿಮೆ ಆಯ್ತು ಎಂದು ಹೇಳಿಕೊಂಡಿದ್ದಾರೆ.

ಇದೆಲ್ಲದರ ಮಧ್ಯೆಯೂ ಸಲ್ಮಾನ್ ಖಾನ್ ಸಿನಿಮಾಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಲಿಲ್ಲ. ಸದ್ಯ `ಬ್ಯಾಟಲ್ ಆಫ್ ಗಾಲ್ವಾನ್’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *