ಕಲಬುರಗಿ: ಮಹಾಗಾಂವ ಕ್ರಾಸ್ ಸಮೀಪದ ಚಿಗುರು ನಿರ್ಗತಿಕ ಮತ್ತು ಅನಾಥ ಮಕ್ಕಳ ನಿಲಯದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಭಾನುವಾರ ಜರುಗಿದ ‘ಮಹಾಲಯ ಅಮವಾಸ್ಯೆ’ಯ ಕಾರ್ಯಕ್ರಮದ ಪ್ರಯುಕ್ತ ಅನಾಥ ಮಕ್ಕಳು ಪಾಲಕರ ಮಣ್ಣಿನ ಮೂರ್ತಿಯನ್ನು ರಚಿಸಿ, ಪೂಜಿಸಿ ಸ್ಮರಿಸಿದ ಅಪರೂಪದ ಘಟನೆ ಜರುಗಿತು.
ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಮಾತನಾಡಿ, ಏಕಲವ್ಯ ಮತ್ತು ದ್ರೋಣಾಚಾರ್ಯರ ಮೂರ್ತಿ ಸ್ಥಾಪಿಸಿ ಬಿಲ್ವವಿದ್ಯೆ ಕಲಿತಿದ್ದು ನಾವು ತಿಳಿದಿದ್ದೆವೆ. ಪ್ರಸ್ತುತವಾಗಿ ಇಲ್ಲಿನ ಅನಾಥ ಮಕ್ಕಳು ತಮ್ಮ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥ ಬದುಕು ಸಾಗಿಸುತ್ತಿದ್ದಾರೆ. ಮಹಾಲಯ ಅಮವಾಸ್ಯೆ ಪ್ರಯುಕ್ತ ಮಕ್ಕಳು ಅವರ ಪಾಲಕರ ಮೂರ್ತಿ ಮಾಡಿ, ಸ್ಮರಿಸುವ ಮೂಲಕ ನೈತಿಕ ಮೌಲ್ಯ ಮೆರೆದಿದ್ದಾರೆ. ಸಂಸ್ಥೆಯ ಮುಖ್ಯಸ್ಥ ಶರಣು ಎ.ಕಮಠಾಣ ಅವರು ಅನಾಥ ಮಕ್ಕಳಿಗೆ ತಂದೆಯ ಸ್ಥಾನದಲ್ಲಿ ನಿಂತು ಮಕ್ಕಳ ಭವಿಷ್ಯ ಕಟ್ಟಿಕೊಡುವ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಶರಣು ಎ.ಕಮಠಾಣ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ರಾಜಣ್ಣ ಪೂಜಾರಿ, ಕಾಮಣ್ಣ ಮದಗುಣಕಿ, ಸಿದ್ದಪ್ಪ ಪೂಜಾರಿ, ಕಾಶಿನಾಥ ಗೋಗಿ, ಶಿವಪುತ್ರ ಬೆಣ್ಣೂರ್ ಸೇರಿದಂತೆ ಅನೇಕರು ಇದ್ದರು.