ಸುದ್ದಿ ಸಂಗ್ರಹ ಶಹಾಬಾದ
ಎಸ್’ಎಸ್ ಮರಗೋಳ ಕಾಲೇಜಿನಲ್ಲಿ ರಾಣಿ ಅಬ್ಬಕ್ಕ ದೇವಿರವರ 500ನೇ ಜನ್ಮ ಶತಾಬ್ದಿ, ಅಹಲ್ಯಾಬಾಯಿ ಹೋಳ್ಕರ್ ರವರ 300ನೇ ಜನ್ಮ ದಿನಾಚರಣೆ ಮತ್ತು ಕಿತ್ತೂರ ರಾಣಿ ಚೆನ್ನಮ್ಮ ರವರ 200ನೇ ಜಯಂತೋತ್ಸವ ನಿಮಿತ್ಯ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.
ಪಟ್ಟಣದ ಎಸ್’ಎಸ್ ಮರಗೋಳ ಕಾಲೇಜಿನಲ್ಲಿ ಎಸ್’ಎಸ್ ಮರಗೋಳ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮವನ್ನು ಕೇಂದ್ರಿಯ ವಿಶ್ವವಿದ್ಯಾಲಯ ಸಹಾಯ ಪ್ರಾಧ್ಯಾಪಕ ಡಾ.ಸುರೇಶ ಹನಗುಂಟಿ ಉದ್ಘಾಟಿಸಿ ಮಾತನಾಡಿದ ಅವರು, ಈ ಮೂವರು ಮಾಡಿದ ಸಾಧನೆ, ಹೋರಾಟಗಳು ಇಂದಿನ ಮಹಿಳೆಯರಿಗೆ ಪ್ರೇರಣದಾಯಿಯಾಗುತ್ತಾರೆ. ವಿದ್ಯಾರ್ಥಿನಿಯರು ಇಂತಹ ಮಹಾನ್ ವೀರರಾಣಿಯರನ್ನು ತಮ್ಮ ಜೀವನದ ಆದರ್ಶರನ್ನಾಗಿ ಇಟ್ಟುಕೊಂಡು ನಿಶ್ಚಿತ ಗುರಿಯೊಂದಿಗೆ ಸಾಧನೆ ಮಾಡಲು ಧೈರ್ಯದಿಂದ ಮುನ್ನುಗ್ಗಬೇಕು ಎಂದರು.
ಎಸ್’ಎಸ್ ಮರಗೋಳ ಕಾಲೇಜಿನ ಪ್ರಾಂಶುಪಾಲ ಡಾ.ಬಸವರಾಜ ಹಿರೇಮಠ, ಡಾ.ಲಕ್ಷ್ಮಣ ರಾಠೋಡ, ಡಾ.ಜಿ.ಆರ್ ಸ್ಥಾವರಮಠ, ಡಾ.ಹನುಮಂತಪ್ಪ ಸೇಡಂಕರ್, ಡಾ.ವೇಂಕಟರಾಜಪ್ಪ, ಡಾ.ಹನುಮಂತಪ್ಪ ಸೇಡಂಕರ್, ರಾಮಣ್ಣ ಎಸ್ ಇಬ್ರಾಹಿಂಪೂರ, ಪ್ರತಿಮ, ಎಮ್.ಎಚ್ ಸಿದ್ರಾಮಪ್ಪ, ಎಂ. ಬಮಶೆಟ್ಟಿ, ಶಿವಶಂಕರ ಹಿರೇಮಠ ವೇದಿಕೆ ಮೇಲೆ ಇದ್ದರು.
ಈ ಸಂದರ್ಭದಲ್ಲಿ ಡಾ.ಸುರೇಖ ನಾಟೇಕರ್ ಸೇರಿದಂತೆ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.