ಪಪ್ಪಾಯಿ ಹಣ್ಣು ಆರೋಗ್ಯಕರ ಮತ್ತು ಲಾಭದಾಯಕ ಕೃಷಿ

ಪಟ್ಟಣ

ಸುದ್ದಿ ಸಂಗ್ರಹ ಕಾಳಗಿ
ಪಪ್ಪಾಯಿ ಹಣ್ಣು ಕೃಷಿಗೆ ಶ್ರಮದಾಯಕ ಅಗತ್ಯ. ಸೂಕ್ತ ಕಾಲಕ್ಕೆ ಬೆಳೆ ನಿರ್ವಹಣೆ ಮಾಡಬೇಕು. ಇದರ ಸೇವನೆ ಆರೋಗ್ಯಕರ ಮತ್ತು ರೈತರಿಗೆ ಲಾಭದಾಯಕ ಎಂದು ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್. ಬಿರಾದಾರ ಹೇಳಿದರು.

ತಾಲೂಕಿನ ಹೆಬ್ಬಾಳ ಸಮೀಪದ ದೇಸಾಯಿಯವರ ಪಪ್ಪಾಯಿ ತೋಟದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ರವಿವಾರ ಜರುಗಿದ ‘ತೋಟಗಾರಿಕೆ ಕ್ಷೇತ್ರಕ್ಕೆ ಭೇಟಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಉಪನ್ಯಾಸಕ ಎಚ್.ಬಿ ಪಾಟೀಲ ಮಾತನಾಡಿ, ಪಪ್ಪಾಯಿ ಹಣ್ಣು ಜೀರ್ಣಾಂಗದ ಆರೋಗ್ಯ ಸುಧಾರಿಸುತ್ತದೆ. ವಿಟಮಿನ್ (ಸಿ) ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಹೃದಯದ ಆರೋಗ್ಯ ಸುಧಾರಿಸುತ್ತದೆ. ಚರ್ಮದ ಆರೋಗ್ಯ ಕಾಪಾಡುತ್ತದೆ, ಉರಿಯೂತ ಕಡಿಮೆ ಮಾಡುತ್ತದೆ. ಇದಲ್ಲದೆ, ಮಾಗಿದ ಪಪ್ಪಾಯಿಯನ್ನು ಸಲಾಡ್‌ಗಳಲ್ಲಿ, ರಸಗಳಲ್ಲಿ ಮತ್ತು ಸಿಹಿ ಪದಾರ್ಥಗಳಲ್ಲಿ ಬಳಸಲಾಗುತ್ತದೆ. ಬಲಿಯದ ಪಪ್ಪಾಯಿಯನ್ನು ತರಕಾರಿಯಾಗಿ ಬಳಸಲಾಗುತ್ತದೆ ಮತ್ತು ಪಪೇಯಿ ಎಂಬ ಕಿಣ್ವವು ಮಾಂಸವನ್ನು ಮೃದುಗೊಳಿಸಲು ಮತ್ತು ಅಡುಗೆಯಲ್ಲಿ ಬಳಸಲ್ಪಡುತ್ತದೆ ಎಂದರು.

ಈ ಸಂದರ್ಭದಲ್ಲಿ ಬಸವರಾಜ ದೇಸಾಯಿ, ಸಂಗಣ್ಣ ಚಂಡ್ರಾಸಿ, ಶರಣಬಸವಪ್ಪ ಸೇರಿದಂತೆ ರೈತರು ಇದ್ದರು.

Leave a Reply

Your email address will not be published. Required fields are marked *