ಎಲ್​ಟಿಟಿ ಮತ್ತು ಕೋನಾರ್ಕ್ ರೈಲು ನಿಲ್ಲಿಸುವಂತೆ ಬ್ಲಾಕ್ ಕಾಂಗ್ರೆಸ್ ಮುಖಂಡರಿಂದ ಡಿಆರ್‌ಎಂಗೆ ಮನವಿ

ಪಟ್ಟಣ

ಚಿತ್ತಾಪುರ: ರೈಲು ನಿಲ್ದಾಣದಲ್ಲಿ ಇನ್ನೂ ಕೆಲವು ರೈಲುಗಳು
ನಿಲ್ಲಿಸಬೇಕು, ಒಂಟಿ ಕಮಾನ್ ಬಳಿ ಕಬ್ಬಿಣದ ಗೇಟ್ ಎತ್ತುವುದು, ಪ್ಲಾಟ್ ಫಾರ್ಮ್ ಸಂಖ್ಯೆ 3 ರೈಲು ನಿಲ್ದಾಣದಲ್ಲಿ ಟಿಕೆಟ್ ಬುಕಿಂಗ್ ಕೌಂಟರ್ ತೆರೆಯಬೇಕು, ಒಂಟಿ ಕಮಾನ್’ನಿಂದ ನಿಲ್ದಾಣಕ್ಕೆ ರಸ್ತೆ ದುರಸ್ತಿ ಮಾಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಮತ್ತು ಮುಖಂಡರು ಸಿಕಂದರಾಬಾದ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ಡಾ. ಆರ್ ಗೋಪಾಲಕೃಷ್ಣನ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಚಿತ್ತಾಪುರ ರೈಲು ನಿಲ್ದಾಣಕ್ಕೆ ಬುಧವಾರ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿದ ಮುಖಂಡರು, 18519/18520- ಲೋಕಮಾನ್ಯ ತಿಲಕ್ ಟರ್ಮಿನಸ್ (LTT), 11019,11020- ಕೋನಾರ್ಕ್, 210915 -210916-ಲಿಂಗಂಪಲ್ಲಿಯಿಂದ ಇಂದೋರ್ ಎಕ್ಸ್‌ಪ್ರೆಸ್‌ವರೆಗಿನ ರೈಲುಗಳು ಚಿತ್ತಾಪುರ ರೈಲು ನಿಲ್ದಾಣದಲ್ಲಿ ನಿಲ್ಲುತ್ತಿಲ್ಲ. ಕಾರಣ ಅನೇಕ ಪ್ರಯಾಣಿಕರು, ಉದ್ಯಮಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಹೊಸ ಸಿಮೆಂಟ್ ಕಂಪನಿ ಸ್ಥಾಪನೆಯಾದ ಕಾರಣ ವಿವಿಧ ರಾಜ್ಯಗಳಿಂದ ಪ್ರಯಾಣಿಕರು, ಉದ್ಯೋಗಿಗಳು ಆಗಮಿಸುತ್ತಾರೆ, ಇದು ಮತ್ತಷ್ಟು ಅನಾನುಕೂಲತೆ ಉಂಟುಮಾಡುತ್ತಿದೆ ಎಂದರು.

ರೈಲುಗಳು ನಿಲ್ಲಿಸುವಂತೆ ಈಗಾಗಲೆ ಹಲವು ಬಾರಿ ರೈಲು ವಿಭಾಗೀಯ ಜನರಲ್ ಮ್ಯಾನೇಜರ್‌ಗೆ ವಿನಂತಿ ಮಾಡಿದ್ದೆವೆ. ಚಿತ್ತಾಪುರದಿಂದ ವ್ಯಾಪಾರ ಮತ್ತು ಇತರ ಕೆಲಸಕ್ಕಾಗಿ ಪ್ರತಿದಿನ ಬಾಂಬೆ, ಸೋಲಾಪುರ, ಪುಣೆಗೆ ಹೋಗುತ್ತಾರೆ. ಆದರೆ ರೈಲುಗಳು ನಿಲ್ಲುವುದಿಲ್ಲ ಇದರಿಂದ ತಾಲೂಕಿನ ಜನರಿಗೆ ಅನಾನುಕೂಲವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆರೋಗ್ಯ ಚಿಕಿತ್ಸೆಗಾಗಿ ಸೋಲಾಪುರಕ್ಕೆ ಹೋಗುತ್ತಾರೆ, ರೈಲುಗಳು ನಿಲ್ಲಿಸದ ಕಾರಣ ಮತ್ತು ಬೆಳಿಗ್ಗೆ – ಸಂಜೆ ರೈಲುಗಳ ಕೊರತೆಯಿಂದಾಗಿ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ಒಂಟಿ ಕಮಾನ್ ಬಳಿ ಕಬ್ಬಿಣದ ಗೇಟ್ ಎತ್ತರಿಸಿ, ಒಂಟಿ ಕಮಾನ್’ನಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆ ದುರಸ್ತಿ ಮಾಡಿಸಿ ಮತ್ತು ಬುಕಿಂಗ್ ಕೌಂಟರ್ ತೆರೆಯಬೇಕು ಎಂಬ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು. ಎಲ್ಲಾ ಬೇಡಿಕೆಗಳು ಹಂತ ಹಂತವಾಗಿ ಕಾರ್ಯಗತಗೊಳಿಸಲಾಗುವುದು ಎಂದು ಡಿಆರ್‌ಎಂ ಪ್ರತಿಕ್ರಿಯೆ ನೀಡಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ
ಕಲ್ಲಕ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಚವ್ಹಾಣ, ಸದಸ್ಯರಾದ ಶೀಲಾ ಕಾಶಿ, ಸಂತೋಷ ಚೌದರಿ, ಮಾಜಿ ಅಧ್ಯಕ್ಷ ಶಿವಕಾಂತ ಬೆಣ್ಣೂರಕರ್, ಯುವ ಅಧ್ಯಕ್ಷ ದೇವು ಯಾಬಾಳ್ ಮುಖಂಡರಾದ ನಾಗರೆಡ್ಡಿ ಗೋಪಸೇನ್, ಲಕ್ಷ್ಮಿಕಾಂತ ಸಾಲಿ, ಸುಭಾಷ್ ಜಾಧವ, ಸಂಜು ಬುಳ್ಕರ್, ಸೂರ್ಯಕಾಂತ ಪೂಜಾರಿ, ಸುರೇಶ್ ಗುತ್ತೇದಾರ, ಪ್ರಭು ಹಲಕರ್ಟಿ, ಕರಣಕುಮಾರ ಅಲ್ಲೂರ, ರಾಜು ಮುದ್ನಾಳ, ಮಲ್ಲಿಕಾರ್ಜುನ ಸಂಗಾವಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *