ಬಳ್ಳಾರಿ: ಮಧ್ಯರಾತ್ರಿ ಎಟಿಎಂ ದರೋಡೆ ಮಾಡುತ್ತಿದ್ದ ಖದೀಮನನ್ನ ಬಳ್ಳಾರಿಯ ಗಸ್ತು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದು ಹೆಡೆಮುರಿ ಕಟ್ಟಿದ್ದಾರೆ.
ಕಳ್ಳನನ್ನು ಹಿಡಿದ ಪೊಲೀಸ್ ಅಧಿಕಾರಿಯ ಸಾಹಸದ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮೈ ಜುಮ್ಮೆನಿಸುತ್ತದೆ. ಎಎಸ್ಐ ಮಲ್ಲಿಕಾರ್ಜುನ ಖದೀಮನನ್ನ ಬಂಧಿಸಿದ್ದಾರೆ. ಆಂಧ್ರದ ಅನಂತಪುರದ ವೆಂಕಟೇಶ್ ಬಂಧಿತ ಆರೋಪಿ.
ಕಳ್ಳನನ್ನು ಹಿಡಿಯುವಾಗ ಸ್ವಲ್ಪ ಯಾಮಾರಿದರೂ ಎಎಸ್ಐ ಮೇಲೆ ದರೋಡೆಕೋರ ಭಯಾನಕ ದಾಳಿ ಮಾಡುತ್ತಿದ್ದ. ಹೀಗಾಗಿ ಸರ್ಕಸ್ ಮಾಡಿ ಖದೀಮನನ್ನು ಹೆಡೆಮುರಿ ಕಟ್ಟುವಲ್ಲಿ ಎಎಸ್ಐ ಯಶಸ್ವಿಯಾಗಿದ್ದಾರೆ.
ಖದೀಮ ಎಟಿಎಂ ಬಾಕ್ಸ್ ಹೊತ್ತೊಯ್ಯುಗಾಲೇ, ಖಚಿತ ಮಾಹಿತಿ ಮೇರೆಗೆ ರೆಡ್ ಹ್ಯಾಂಡ್ ಆಗಿ ಲಾಕ್ ಮಾಡಿದ್ದಾರೆ. ಬೀಟ್ ನಲ್ಲಿದ್ದಾಗ ಎಎಸ್ಐ ಮಲ್ಲಿಕಾರ್ಜುನ ದರೋಡೆಕೋರನನ್ನು ಹಿಡಿದಿದ್ದರು.
ಆರೋಪಿ ಎಎಸ್ಐ ಮಲ್ಲಿಕಾರ್ಜುನ ಮೇಲೆ ಅಟ್ಯಾಕ್ ಮಾಡಲು ಮುಂದಾದಾಗ ಕೂಡಲೇ ಮತ್ತಷ್ಟು ಬೀಟ್ ಸಿಬ್ಬಂದಿ ಕರೆಯಿಸಿಕೊಂಡಿದ್ದಾರೆ. ಆಗ ಮತ್ತೊರ್ವ ಕಾನ್ಸ್ಟೇಬಲ್ ನಿಂಗಪ್ಪ ಸಹಾಯಕ್ಕೆ ಧಾವಿಸಿದರು.
ಬಳ್ಳಾರಿಯ ಕಾಳಮ್ಮ ಸರ್ಕಲ್ ಬಳಿ ಇರುವ ಆಕ್ಸಿಸ್ ಬ್ಯಾಂಕ್ ಎಟಿಎಂ ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿಯನ್ನು ಸೆರೆಹಿಡಿದ ಪೊಲೀಸರ ಕಾರ್ಯಕ್ಕೆ ಮೆಚ್ಚಿ ಎಸ್ಪಿ ಡಾ.ಶೋಭಾರಣಿ ಸನ್ಮಾನಿಸಿ, ಅಭಿನಂದಿಸಿದ್ದಾರೆ.