ಯೋಗದ ಮೂಲಕ ದೇಹದ ಜೊತೆಗೆ ಮನಸ್ಸನ್ನು ಮಣಿಸೋಣ: ಸಿದ್ದಲಿಂಗ ಶ್ರೀ

ಗ್ರಾಮೀಣ

ಚಿತ್ತಾಪುರ: ನಿತ್ಯ ಯೋಗ ಮಾಡುವ ಮೂಲಕ ದೇಹದ ಜೊತೆಗೆ ಮನಸ್ಸನ್ನು ಮಣಿಸೋಣ ಎಂದು ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.

ಸಮೀಪದ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ವಿವಿಧ ಪ್ರಕಲ್ಪಗಳ ಅಡಿಯಲ್ಲಿ ನಡೆದ ವಿಶ್ವ ಯೋಗ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಮುಲ್ಯವಾದ ದೇಹವನ್ನು ನಾವುಗಳು ಒತ್ತಡದ ಜೀವನ, ಕಲುಷಿತ ಪರಿಸರ ಮತ್ತು ವಿಷಯುಕ್ತ ಆಹಾರ ಪದ್ಧತಿಯಿಂದ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೆವೆ. ಇದೆಲ್ಲದಕ್ಕೂ ಪರಿಹಾರವೆಂದರೆ ಯೋಗ ಮಾತ್ರ. “ಯೋಗಿ ನಿರೋಗಿ” ಎನ್ನುವ ಹಾಗೆ ಯೋಗ, ಧ್ಯಾನ, ವ್ಯಾಯಾಮಗಳನ್ನು ನಿತ್ಯವೂ ನಮ್ಮ ಜೀವನದಲ್ಲಿ ರೂಢಿಸಿಕೊಳ್ಳುವ ಮೂಲಕ ಆಸ್ಪತ್ರೆ ಹಾಕುವ ಅಪಾರ ಹಣವನ್ನು ಉಳಿಸಬಹುದು. ಆಸ್ಪತ್ರೆಗೆ ಹೋದರೆ ನಮಗೆ ಆರೋಗ್ಯದ ಮಹತ್ವ ಗೊತ್ತಾಗುತ್ತದೆ ಆದ್ದರಿಂದ ಯೋಗ ದಿನದ ಮೂಲಕ ನಾವುಗಳು ಈ ದೇಶದ ಉತ್ತಮ ಮಾನವ ಸಂಪನ್ಮೂಲವಾಗಲು ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.

ಎನ್’ಸಿಸಿ ಅಧಿಕಾರಿ ಶರಣು ಸಜ್ಜನ್ ಯೋಗ ತರಬೇತಿ ನೀಡಿದರು.

ಈ ಸಂದರ್ಭದಲ್ಲಿ ಯೋಗ ಶಿಕ್ಷಕ ವಿರೂಪಾಕ್ಷ ಪಸಾರ, ದೈಹಿಕ ಶಿಕ್ಷಕರಾದ ಭೀಮಾಶಂಕರ ಬಮ್ಮನಳ್ಳಿ, ಶಿವಕುಮಾರ ಸರಡಗಿ, ರೋಹಿತ್ ರಾವೂಕರ್, ಅಭಿಜೀತ್ ಪಾಟೀಲ, ಮುಖ್ಯಗುರು ವಿದ್ಯಾಧರ ಖಂಡಳ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.

ಶಿಕ್ಷಕ ಈರಣ್ಣ ಹಳ್ಳಿ ಮತ್ತು ಶಿಕ್ಷಕ ಸಿದ್ದಲಿಂಗ ಬಾಳಿ ಯೋಗ ಕಾರ್ಯಕ್ರಮ ನಡೆಸಿಕೊಟ್ಟರು.

Leave a Reply

Your email address will not be published. Required fields are marked *