ಯಡ್ರಾಮಿ: ತಾಲೂಕಿನ ಕಾಖಂಡಕಿ ಗ್ರಾಮದ ಮಲ್ಲಾರಾಧ್ಯರ ಹಾಗೂ ಕೋರಿಸಿದ್ದೇಶ್ವರ ಶಿವಯೋಗಿಗಳ ಭಕ್ತರು ಸುರಿಯುತ್ತಿರುವ ಭಾರಿ ಮಳೆಯ ನಡುವೆಯೂ ರಥವನ್ನು ಎಳೆದರು.
ಬುಧವಾರ ಸಂಜೆ ನಡೆಯಬೇಕಿದ್ದ ರಥೋತ್ಸವವು ಮಳೆಯ ಕಾರಣದಿಂದ ಮುಂದೂಡಲಾಗಿತ್ತು. ಮಳೆ ನಿಲ್ಲುವ ಯಾವ ಲಕ್ಷಣವೂ ಕಾಣದಿದ್ದಾಗ ಭಕ್ತರು ನಾಲವಾರ ಹಾಗೂ ಕಾಖಂಡಕಿ ಮಠಗಳ ಪೀಠಾಧಿಪತಿ ಸಿದ್ಧತೋಟೇಂದ್ರ ಶಿವಾಚಾರ್ಯರ ಅಪ್ಪಣೆ ಪಡೆದು ಸದ್ಗುರು ಮಲ್ಲಾರಾಧ್ಯರ ಹಾಗೂ ಕೋರಿಸಿದ್ದೇಶ್ವರ ಶಿವಯೋಗಿಗಳ, ಸಿದ್ಧತೋಟೇಂದ್ರ ಶಿವಾಚಾರ್ಯರ ಜೈಕಾರ ಹಾಕುತ್ತಾ ಮಧ್ಯರಾತ್ರಿ ಸುರಿಯುತ್ತಿರುವ ಭಾರಿ ಮಳೆಯಲ್ಲಿಯೇ ರಥವನ್ನು ಎಳೆದರು. ನಡೆದಾಡಲು ಕಷ್ಟವಾಗಿರುವ ಕೆಸರು ಗದ್ದೆಯಂತಾದ ನೆಲದಲ್ಲಿ ತೇರನ್ನು ಎಳೆದು ಸಂಭ್ರಮಿಸಿದರು.
ಕಳೆದ ವರ್ಷವು ಮಳೆಯಿಂದ ಕೆಸರು ಗದ್ದೆಯಂತಾದ ಜಮೀನಿನಲ್ಲಿ ಭಕ್ತರು ರಥವನ್ನು ಎಳೆದಿದ್ದರು.