ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಲಂಬಾಣಿ ಎಂದು ಬರೆಯಿಸಲು ಬಂಜಾರ ಸಮಾಜ ಮನವಿ

ತಾಲೂಕು

ಚಿತ್ತಾಪುರ: ಪರಿಶಿಷ್ಟ ಜಾತಿಗಳ ಸಮೀಕ್ಷೆಯಲ್ಲಿ
ಪ್ರತಿಯೊಂದು ಕುಟುಂಬ ಭಾಗವಹಿಸುವ ಮೂಲಕ
ಲಂಬಾಣಿ ಎಂದು ಬರೆಯಿಸಬೇಕು ಎಂದು ಬಂಜಾರ
ಸಮಾಜದ ತಾಲೂಕು ಅಧ್ಯಕ್ಷ ಭೀಮಸಿಂಗ್ ಚವ್ಹಾಣ ಮತ್ತು
ತಾಲೂಕು ಯುವ ಅಧ್ಯಕ್ಷ ಜಗದೀಶ ಚವ್ಹಾಣ ಮನವಿ ಮಾಡಿದ್ದಾರೆ.

1 ಜುಲೈ 2024 ರಂದು ಸುಪ್ರೀಂಕೋರ್ಟ್ ತೀರ್ಪಿನಂತೆ ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಜಾರಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನದಾಸ್ ಏಕ ಸದಸ್ಯ ವಿಚಾರಣೆ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಮೇ.5 ರಿಂದ 17 ರವರೆಗೆ ನಡೆಯಲಿದೆ. ಆದ್ದರಿಂದ ಲಂಬಾಣಿ ಸಮಾಜದ ಎಲ್ಲರೂ ತಪ್ಪದೆ ಭಾಗವಹಿಸಿ ಲಂಬಾಣಿ ಎಂದು ಬರೆಯಿಸಬೇಕು ಎಂದು ಹೇಳಿದ್ದಾರೆ.

ಎಸ್.ಸಿ ಲಂಬಾಣಿ ಜನಾಂಗದ ಹಿರಿಯರು, ಮಹಿಳೆಯರು, ವಿದ್ಯಾರ್ಥಿಗಳು, ಯುವಕ-ಯುವತಿಯರು, ಕಾರ್ಮಿಕರು ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಸಮುದಾಯದವರು ಭಾರತ ನಿರ್ಮಾಣ ಕಾರ್ಯದಲ್ಲಿ ಹಲವರು ಕೊಡುಗೆ ನೀಡಿದ್ದಾರೆ, ಇಂತಹ ಮಹಾನ್ ದೇಶಪ್ರೇಮಿಗಳು ನಮ್ಮ ಸಮಾಜದವರು, ಆದ್ದರಿಂದ ಜಾತಿಗಣತಿ ಮಾಡುವ ಸಂದರ್ಭದಲ್ಲಿ ಜಾತಿ ಕಾಲಂನಲ್ಲಿ ಲಂಬಾಣಿ ಎಂದೆ ಬರೆಯಿಸಬೇಕು ಎಂದು ಮನವಿ ಮಾಡಿದ್ದಾರೆ.

ಲಂಬಾಣಿ ಸಮುದಾಯದವರು ಜಾತಿ ಪ್ರಮಾಣಪತ್ರದಲ್ಲಿ ನಮೂದಿಸಿದಂತೆ ಲಂಬಾಣಿ ಸಮಾಜದ ವಿದ್ಯಾವಂತರು ಮನೆ, ಊರು, ನಗರ, ತಾಂಡಾ, ಬಡಾವಣೆಗಳಲ್ಲಿರುವ ಮತ್ತು ಇತರರಿಗೂ ಜಾಗೃತಿ ಮೂಡಿಸಿ, ಇದು ನಮ್ಮ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಆದ್ದರಿಂದ ಜಾತಿ ಗಣತಿಯ ಸಂದರ್ಭದಲ್ಲಿ ಕಡ್ಡಾಯವಾಗಿ ಲಂಬಾಣಿ ಎಂದು ನಮೂದಿಸಿ ಎಂದು ಕೋರಿದ್ದಾರೆ.

ನಮ್ಮ ಸಮಾಜದ ಬಂಧುಗಳು ಜಾತಿ ಗಣತಿಯ ಸಮಯದಲ್ಲಿ ತಾವು ಎಲ್ಲೆ ಇದ್ದರೂ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಆ ದಿನ ಕಡ್ಡಾಯವಾಗಿ ಜಾತಿ ಗಣತಿಯಲ್ಲಿ ಲಂಬಾಣಿ ಎಂದು ಬರೆಯಿಸಿ, ಇದು ನಮ್ಮ ಮಕ್ಕಳ ಭವಿಷ್ಯದ ಪ್ರಶ್ನೆಯಾಗಿದೆ, ಇಂತಹ ಸಂದರ್ಭಗಳಲ್ಲಿ ನಾವು
ನಿರ್ಲಕ್ಷ್ಯಿಸಿದರೆ ಜಾತಿಗಣತಿಯಲ್ಲಿ ನಮ್ಮ ಜನಸಂಖ್ಯೆಯು ಕಡಿಮೆಯಾದರೆ ನಮಗೆ ಸಿಗುವ ಮೀಸಲಾತಿ ಕಡಿಮೆಯಾಗಿ ಉನ್ನತ ಮಟ್ಟದ ಶಿಕ್ಷಣದ ಆಸೆ ಆಕಾಂಕ್ಷೆಗಳು ಜೊತೆಗೆ ಡಾಕ್ಟರ್, ಇಂಜಿನಿಯರ್, ಅಧಿಕಾರಿಗಳು, ಶಿಕ್ಷಕರು, ಪೊಲೀಸ್, ಸಿಪಾಯಿ ಸೇರಿದಂತೆ ಇತ್ಯಾದಿಗಳು ಕನಸಿನ ಮಾತೆ ಸರಿ ಇದರ ಪರಿಣಾಮವಾಗಿ ನಾವು ಅಭಿವೃದ್ಧಿಯಲ್ಲಿ ಮತ್ತೆ ನೂರು ವರ್ಷ ಹಿಂದೆ ಹೋಗುತ್ತೆವೆ.

ಸಮುದಾಯದ ಅಧೀನದಲ್ಲಿ ನಾವು ಹಲವಾರು ಶೋಷಣೆಗಳಿಗೆ ಒಳಗಾಗಿ ನಮ್ಮ ಮಕ್ಕಳು ಕೂಲಿ ಕೆಲಸ, ಒತ್ತಡ, ದೌರ್ಜನ್ಯದ ಅಧೀನದಲ್ಲಿ ಜೀವಿಸಬೇಕಾಗುತ್ತದೆ ಅದರ ಕಷ್ಟ ನಮ್ಮ ಹಿರಿಯರು ಅನುಭವಿಸಿದ್ದು ಸಾಕು, ಇದು ನಮ್ಮ ಮಕ್ಕಳು ಅನುಭವಿಸುವುದು ಬೇಡ, ನಮ್ಮ ಸಮಾಜದ ಪ್ರತಿಯೊಬ್ಬ ಸ್ವಾಭಿಮಾನಿ ಲಂಬಾಣಿ ಬಂಧುಗಳು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದ್ದಾರೆ.

Leave a Reply

Your email address will not be published. Required fields are marked *