ಗಣಿತಶಾಸ್ತ್ರ ಮಹತ್ವದ ಸ್ಥಿರ ಚಿಹ್ನೆ π : ಎಚ್.ಬಿ ಪಾಟೀಲ

ಜಿಲ್ಲೆ

ಕಲಬುರಗಿ: ಪೈ(π) ಗಣಿತಶಾಸ್ತ್ರ ಮಹತ್ವದ ಸ್ಥಿರ ಚಿಹ್ನೆಯಾಗಿದ್ದು, ಅದರ ಮೊತ್ತ 3.142 ಇದು ವೃತ್ತದ ಸುತ್ತಳತೆ ಮತ್ತು ವ್ಯಾಸದ ಅನುಪಾತವಾಗಿದೆ. ಇದನ್ನು ಗಣಿತಶಾಸ್ತ್ರಜ್ಞ ವಿಲಿಯಂಜೋನ್ಸ್ ವ್ಯಾಪಕವಾಗಿ ಬಳಸಿ, ಪ್ರಸಿದ್ಧಗೊಳಿಸಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು.

ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನ ಸಕ್ಸಸ್ ಕಂಪಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಜರುಗಿದ ‘ಪೈ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಗಣಿತಶಾಸ್ತ್ರ ಕೇವಲ ಅದೊಂದು ವಿಷಯವಾಗಿರದೆ,ಜೀವನಕ್ಕೆ ತುಂಬಾ ಹತ್ತಿರವಾಗಿದೆ. ಲೆಕ್ಕಾಚಾರವಿಲ್ಲದ ಬದುಕು ಪರಿಪೂರ್ಣವಾಗಲಾರದು. ಗಣಿತ ಅಧ್ಯಯನ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಕಾರ್ಯಮಾಡುತ್ತದೆ ಎಂದರು.

ಗಣಿತ ಎನ್ನುವದು ಕಬ್ಬಿಣದ ಕಡಲೆಯಲ್ಲ. ಅದನ್ನು ತುಂಬಾ ಆಸಕ್ತಿಯಿಂದ ಅಧ್ಯಯನ ಮಾಡಿದರೆ ಸರಳವಾಗಿದೆ. ಇದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಮೂಡಿರುವ ಭಯವನ್ನು ಶಿಕ್ಷಕರು ಮತ್ತು ಪಾಲಕರು ಹೋಗಲಾಡಿಸಬೇಕು. ಗಣಿತದಿಂದ ತಾರ್ಕಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ. ‘ಪೈ’ನ ಮೊತ್ತ3.14 ಆಗಿರುವುದರಿಂದ ‘3’ನ್ನು ಮಾರ್ಚ್ ತಿಂಗಳಾಗಿ, ‘14’ನ್ನು ದಿನಾಂಕವನ್ನಾಗಿ ಪರಿಗಣಿಸಿ ಈ ದಿನವನ್ನು ‘ಮಾರ್ಚ-14’ ರಂದು ಆಚರಿಸಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಪ್ರಮುಖರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಮಹಾದೇವಪ್ಪ ಎಚ್.ಬಿರಾದಾರ, ಓಂಕಾರ ವಠಾರ, ಬಸವರಾಜ ಎಸ್.ಪುರಾಣೆ, ಸಿದ್ದಾರೂಡ ಬಿರಾದಾರ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *