ಸಮನ್ವಯತೆಯ ಸಾಕಾರ ಮೂರ್ತಿ ಸಂತ ಶಿಶುನಾಳ ಶರೀಫ್

ಜಿಲ್ಲೆ

ಕಲಬುರಗಿ: ಯಾವುದೆ ಜಾತಿ, ಧರ್ಮ, ಪ್ರದೇಶ ದೊಡ್ಡದಲ್ಲ. ಬದಲಿಗೆ ಮಾನವೀಯತೆಯಿಂದ ಬದುಕುವದೆ ಶ್ರೇಷ್ಠ ಜೀವನವಾಗುತ್ತದೆಯೆಂದು ಪ್ರತಿಯೊಬ್ಬರಲ್ಲಿ ಸೌಹಾರ್ಧತೆಯುತವಾದ ಬದುಕುವ ಕಲೆಯನ್ನು ಸಾರಿದ ಸಂತ ಶಿಶುನಾಳ ಶರೀಫರು ಸಮನ್ವಯತೆಯ ಸಾಕಾರ ಮೂರ್ತಿಯಾಗಿ ಕಂಡುಬರುತ್ತಾರೆ ಎಂದು ಉಪನ್ಯಾಸ, ಚಿಂತಕ ಎಚ್.ಬಿ ಪಾಟೀಲ ಹೇಳಿದರು.

ನಗರದ ಆಳಂದ ರಸ್ತೆಯ ಜೆ.ಆರ್ ನಗರದ ಖಾದ್ರಿ ಚೌಕ್‌ನಲ್ಲಿರುವ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಸಂಜೆ ಏರ್ಪಡಿಸಿದ್ದ ‘ಶ್ರೇಷ್ಠ ಸಂತ ಶಿಶುನಾಳ ಶರೀಫ್‌ರ 206ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಕೋಮು ಸಂಘರ್ಷಗಳುಂಟಾಗಿ ವಿಷಮಯ ವಾತವಾರಣದ ಪ್ರಸ್ತುತ ಪರಿಸ್ಥಿತಿಯಲ್ಲಿ ಶರೀಫರ ತತ್ವಗಳು ಔಷಧದಂತೆ ಕಾರ್ಯನಿರ್ವಹಿಸುತ್ತವೆ. ಇವರನ್ನು ‘ಕರ್ನಾಟಕದ ಕಬೀರ’, ‘ಜಾನಪದ ಸಂತ ಕವಿ’, ‘ಭಾವೈಕ್ಯತೆಯ ಹರಿಕಾರ’ ಎಂಬ ಮುಂತಾದ ಹೆಸರುಗಳಿಂದ ಕರೆಯುವದನ್ನು ಗಮನಿಸಿದರೆ, ಅವರ ಮೇರು ವ್ಯಕ್ತಿತ್ವ ನಮಗೆ ಕಂಡುಬರುತ್ತದೆ.ಕನ್ನಡ ಜಾನಪದ ಕೇತ್ರಕ್ಕೆ ಇವರು ನೀಡಿರುವ ಕೊಡುಗೆ ಅವಿಸ್ಮರಣೀಯ ಎಂದರು‌.

ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ಶರೀಫರು ಬಹು ಮೌಲ್ಯಯುತವಾದ, ತಮ್ಮ ಅನುಭವದ ಮೂಟೆಯನ್ನು ಒಳಗೊಂಡ ಪದ್ಯಗಳನ್ನು ರಚಿಸಿ, ಕನ್ನಡ ಸಾರಸತ್ವ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿಯರಾದ ಪೂಜಾ ಹೂಗಾರ, ಕಾವೇರಿ ಹೌದೆ, ಮುಸ್ಕಾನ್ ಶೇಖ್, ಪ್ರಮುಖರಾದ ರಾಚಣ್ಣ, ಅಲೋಕ ಕುಮಾರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು

Leave a Reply

Your email address will not be published. Required fields are marked *