ಮಾನವನಿಂದ ಮಾನವನ ಶೋಷಣೆ ತಪ್ಪಿಸಲು ಜೆ.ವಿ ಸ್ಟಾಲಿನ್ ವಿಚಾರಗಳು ಅಗತ್ಯ

ತಾಲೂಕು

ಸುದ್ದಿ ಸಂಗ್ರಹ ಶಹಾಬಾದ

ವಿಶ್ವದಲ್ಲಿ ಬಂಡವಾಳಶಾಹಿಗಳ ಹಾಗೂ ಸಾಮ್ರಾಜ್ಯಶಾಹಿಗಳ ಮಾರುಕಟ್ಟೆಗಾಗಿ ಯುದ್ಧವನ್ನು ಪ್ರಚೋದಿಸುತ್ತಿದ್ದು ಮಾನವ ಕುಲವನ್ನು ವಿನಾಶದ ಅಂಚಿಗೆ ತಳ್ಳುತ್ತಿರುವದು ಒಂದು ಕಡೆಯಾದರೆ, ಮಾನವನ ಶ್ರಮ ನಿರಂತರವಾಗಿ ಶೋಷಣೆ ಮಾಡುತ್ತಿರುವದು ಮತ್ತೊಂದೆಡೆ ಕಾಣಬಹುದು ಎಂದು ಎಸ್’ಯುಸಿಐ (ಸಿ) ಶಹಾಬಾದ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಕಾಮ್ರೇಡ್ ಗಣಪತರಾವ ಕೆ ಮಾನೆ ಹೇಳಿದರು.

ಹನುಮಾನ ನಗರದಲ್ಲಿ ಕಾರ್ಮಿಕ ವರ್ಗದ ಮಹಾನ್ ನಾಯಕ ಕಾಮ್ರೇಡ್ ಜೆ.ವಿ ಸ್ಟಾಲಿನ್ ಅವರ 72ನೇ ಸ್ಮರಣ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದುಡಿಯುವ ಕಾರ್ಮಿಕ‌ ವರ್ಗಕ್ಕೆ ಕನಿಷ್ಟ ಮಟ್ಟದ ಸೌಲಭ್ಯ ನೀಡದೆ ಗರಿಷ್ಟ ಮಟ್ಟದ ಲಾಭ ಮಾಡಿಕೊಳ್ಳುತ್ತಿವೆ. ಇದು ಶ್ರೀಮಂತರ ಮತ್ತು ಬಡವರ ನಡುವಿನ ಅಂತರ ಹೆಚ್ಚಿಸುತ್ತಿದೆ. ದಾರಿದ್ರ್ಯ ಜೀವನ ನಡೆಸುತ್ತಿರುವ ಕಾರ್ಮಿಕ ವರ್ಗವು ಇಂದು ನಡೆಯುಯತ್ತಿರುವ ಶೋಷಣೆಯನ್ನು ತಡೆಗಟ್ಟಬೇಕಾದರೆ ಜೆ.ವಿ ಸ್ಟಾಲಿನ್ ಅವರ ವಿಚಾರ ಮೈಗೂಡಿಸಿಕೊಂಡು ಹೋರಾಟಕ್ಕೆ ಧುಮಕಬೇಕು ಎಂದರು.

ನಮ್ಮ ದೇಶದ ಮಾರ್ಕ್ಸ್’ವೆದಿ ಚಿಂತಕ ಕಾಮ್ರೇಡ್ ಶಿವದಾಸ ಘೋಷರವರ ಚಿಂತನೆಯ ಆಧಾರದ ಮೇಲೆ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯನ್ನು ನೇರವೇರಿಸಲು ಹೋರಾಡಲು ಮುಂದೆ ಬರಬೇಕೆಂದು ಕರೆ ನೀಡಿ, ಆ ಮೂಲಕ ದೇಶದಲ್ಲಿ ಸಮಾನತೆಯ ಸಮಾಜ ಸ್ಥಾಪಿಸಬಹುದು ಎಂದರು.

ಕ್ರಾರ್ಯಕ್ರಮದಲ್ಲಿ ಪಕ್ಷದ ಸ್ಥಳೀಯ ಸಮಿತಿಯ ಸದಸ್ಯರಾದ ರಾಜೇಂದ್ರ ಆತ್ನೂರ್, ಗುಂಡಮ್ಮ ಮಡಿವಾಳ, ನೀಲಕಂಠ ಎಮ್. ಹುಲಿ, ರಮೇಶ ದೇವಕರ್ ಮತ್ತು ವಿವಿಧ ಸಂಘಟನೆಗಳ ನಾಯಕರಾದ ಮಹಾದೇವಿ ಮಾನೆ, ರಘು ಪವಾರ, ಅಜಯ ಗುರಜಾಲಕರ್, ಕಿರಣ ಮಾನೆ, ರಾಧಿಕ ಚೌದ್ರಿ, ಮಹಾದೇವಿ ಆತ್ನೂರ್, ರಂಗನಾಥ ಮಾನೆ, ಅಮರೇಶ, ಚಂದ್ರಕಾಂತ ದೇವಕರ್, ಬೃಂದಾ ಗುರಜಾಲ್ ಮುಂತಾದವರು ಭಾಗವಹಿಸಿದ್ದರು.                      

Leave a Reply

Your email address will not be published. Required fields are marked *