ವಾಡಿ: ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಾಲತವಾಡ ವೀರೇಶ ಶರಣರ ಪುರಾಣ ಪ್ರಾರಂಭ

ಗ್ರಾಮೀಣ

ವಾಡಿ: ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ
ನಾಲತವಾಡ ವೀರೇಶ ಶರಣರ ಪುರಾಣ ಫೆ.12 ರಿಂದ 26 ರವರೆಗೆ ನೆರವೆರುವುದು ಎಂದು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣಗೌಡ ಪಾಟೀಲ ಚಾಮನೂರ ಹೇಳಿದ್ದಾರೆ.

ಈ ಪುರಾಣ ಕಾರ್ಯಕ್ರಮದಲ್ಲಿ ರಾವೂರಿನ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು.

ಪುರಾಣ, ಪ್ರವಚನಕಾರ ಶಿವಪೂರದ, ಶಿವಲಿಂಗೇಶ್ವರ ಸಂಸ್ಥಾನ ಮಠದ ಶಿವಲಿಂಗ ಮಹಾಸ್ವಾಮಿಗಳು, ಸಂಗೀತಕಾರ ಮಹೇಶ ನರಬೋಳ, ತಬಲಾವಾದಕ ತೋಟೇಂದ್ರ ಕರದಾಳ ಕಲ್ಲಾ ಭಾಗವಹಿಸುವರು.

ಪ್ರತಿದಿನ ಸಂಜೆ 7 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಪುರಾಣ ಕಾರ್ಯಕ್ರಮ ನಡೆಯುವುದು, ಫೆ.26ರ ಮಹಾ ಶಿವರಾತ್ರಿಯಂದು ಸಂಜೆ 6 ಗಂಟೆಗೆ ಪುರಾಣ ಕಾರ್ಯಕ್ರಮದ ಮಹಾ ಮಂಗಲ ಮತ್ತು ಲಕ್ಷ ದೀಪೋತ್ಸವ ಜರುಗುವುದು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *