ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಪ್ರಧಾನಿ ಮೋದಿಯವರ ಈ ವರ್ಷದ ಮೊದಲ ಮನ್ ಕಿ ಬಾತ್ ರೆಡಿಯೊ ಕಾರ್ಯಕ್ರಮದ 118ನೇ ಸಂಚಿಕೆ ಆಲಿಸಿದ ಮುಖಂಡರು.
ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಪ್ರಧಾನಿ ಮೋದಿ ಅವರು ಜನವರಿ 23 ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ‘ಪರಾಕ್ರಮ್ ದಿವಸ್’ ಎಂದು ಆಚರಿಸಿ ಅವರ ಶೌರ್ಯವನ್ನು ಯುವಕರು ಇನ್ನಷ್ಟು ಅರಿಯಬೇಕು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಂದ ಸ್ಫೂರ್ತಿ ಪಡೆಯಬೇಕು ಎಂದರು.
2025ರ ಮೊದಲ ಮನ್ ಕಿ ಬಾತ್ 118ನೇ ಸಂಚಿಕೆಯಲ್ಲಿ ಪ್ರಧಾನಿ ಮೋದಿ ಹೇಳಿದರು. ಪ್ರಧಾನ ಮಂತ್ರಿಯವರ ಮಾಸಿಕ ರೇಡಿಯೋ ಕಾರ್ಯಕ್ರಮವು ಪ್ರತಿ ತಿಂಗಳ ಕೊನೆಯ ಭಾನುವಾರದಂದು ಪ್ರಸಾರವಾಗುತ್ತದೆ, ಆದರೆ ಮುಂದಿನ ವಾರ ಭಾನುವಾರದಂದು ಬರುವ ಗಣರಾಜ್ಯೋತ್ಸವದ ಆಚರಣೆಯಿಂದಾಗಿ ಈ ತಿಂಗಳ ಮೂರನೇ ಭಾನುವಾರದಂದು ಪ್ರಸಾರವಾಯಿತು ಎಂದರು.
ವಿವಿಧತೆಯಲ್ಲಿ ಏಕತೆಯ ಹಬ್ಬದಂತಹ ವಾತಾವರಣ ಪ್ರಯಾಗರಾಜ್‌ನಲ್ಲಿ ಮಹಾಕುಂಭ ಆರಂಭವಾಗಿದೆ. ಮರೆಯಲಾಗದ ಮಾನವೀಯತೆಯ ಸಮುದ್ರದಂತೆ ಕಾಣುತ್ತದೆ, ನಂಬಲಾಗದ ದೃಶ್ಯಗಳು ಮತ್ತು ಸಮಾನತೆ ಮತ್ತು ಸಾಮರಸ್ಯದ ಅಸಾಧಾರಣ ಸಂಗಮವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಈ ಸಂಚಿಕೆಯಲ್ಲಿ ವಿವರಿಸಿದರು ಎಂದರು.
ಈ ಸಂದರ್ಭದಲ್ಲಿ ಯುವ ಮುಖಂಡ ವಿಠಲ ವಾಲ್ಮೀಕ ನಾಯಕ, ಎಸ್ ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್ ಮುಖಂಡರಾದ ಗಿರಿಮಲ್ಲಪ್ಪ ಕಟ್ಟಿಮನಿ, ಪ್ರಮೋದ್ ಚೊಪಡೆ, ರಾಜು ಕೊಲಿ, ಮಲ್ಲಿಕಾರ್ಜುನ ಕಟ್ಟಿಮನಿ, ಆನಂದ ಶಿರವಾಳ ಸೇರಿದಂತೆ ಅನೇಕರು ಇದ್ದರು.