ನಾಡಿನ ಇತಿಹಾಸ ಸಾರುವ ಚಿಂಚನಸೂರಿನ ಮಹೇಶ್ವರ ದೇವಾಲಯ: ಮುಡಬಿ ಗುಂಡೇರಾವ

ಜಿಲ್ಲೆ

ಕಲಬುರಗಿ: ಅಪರೂಪದ ವಾಸ್ತುಶಿಲ್ಪ ಶೈಲಿಯುಳ್ಳ, ಕಲೆ-ಸಾಹಿತ್ಯ, ಸಂಸ್ಕೃತಿ, ಭವ್ಯ ಪರಂಪರೆಯನ್ನು ಸಾರುವ ಚಿಂಚನಸೂರಿನ ಮಹೇಶ್ವರ ದೇವಾಲಯದ ಇತಿಹಾಸ ಅದಮ್ಯ ಹಾಗೂ ಅದ್ಭುತವಾಗಿದೆ. ಎಳು ಊರುಗಳಿಂದ ಕೂಡಿರುವ ಮತ್ತು ನಾಡಿನ ರಕ್ಷಣೆ ಮಾಡಿದ ವೀರ-ಶೂರರ ಇತಿಹಾಸವುಳ್ಳದಾಗಿದೆ. ಇಂತಹ ಸ್ಮಾರಕಗಳ ರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ ಅಭಿಪ್ರಾಯಪಟ್ಟರು.

ಚಿಂಚನಸೂರ್‌ನ ಗ್ರಾಮದ ಐತಿಹಾಸಿಕ ಹಾಗೂ ಪ್ರಾಚೀನ ಮಹೇಶ್ವರ ದೇವಾಲಯದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-5ರಲ್ಲಿ ಮಾತನಾಡಿದ ಅವರು, ಕಲ್ಯಾಣಿ ಚಾಲುಕ್ಯ ಹಾಗೂ ಕಲಿಚೂರರ ವಾಸ್ತುಶಿಲ್ಪ ಶೈಲಿಯುಳ್ಳ ಈ ದೇವಾಲಯವು, ಕಲಾತ್ಮಕವಾಗಿದೆ. ದೇವಾಲಯದ ಹೊರಗೊಡೆಯ ಸುತ್ತಲು ಮದನಿಕೆಯರ ಶಿಲ್ಪಗಳು ತುಂಬಾ ಅದ್ಬುತವಾಗಿವೆ. ಜಲಸಂಗ್ವಿಯಲ್ಲಿರುವಂತೆ ಚಿಂಚನಸೂರನ ಮಹೇಶ್ವರ ದೇವಾಲಯದ ಗೋಡೆಯ ಮೇಲೆ ಒಬ್ಬ ಮಹಿಳೆಯು ಲೇಖನಿ ಬರೆಯುವ ಶಿಲ್ಪ, ಡೋಲು ವಾದ್ಯ ನುಡಿಸುವುದು, ನೃತ್ಯ ಮಾಡುವುದು ಸೇರಿದಂತೆ ಇನ್ನಿತರ ಭಂಗಿಯಲ್ಲಿರುವ ಶಿಲ್ಪಗಳು ನಯನ ಮನೋಹರವಾಗಿವೆ. ನೋಡುವ ಸಂವೇದನಶೀಲವುಳ್ಳವರಿಗೆ ಈ ಕಲಾತ್ಮ ದೇಗುಲ ಬೇಲೂರು-ಹಳೆಬೀಡಿನಂತೆ ಕಾಣುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಸುಧಾಕರ ಸುತಾರ, ಇಷಾಕ್ ಮುಲಗೆ, ಅನಿಲ್ ಸಿಂಗಾರ, ಮಹೇಶ ಚಿಕ್ಕನಾಗಾಂವ, ಮೆಹಬೂಬ ಅಂಬಲಗಾ, ಹಬೀಬ್ ಶಮನ್, ಮುರುಗೇಂದ್ರಯ್ಯ ಹಿರೇಮಠ, ಚಂದ್ರಕಾAತ ಸುತಾರ, ಅಸ್ಲಾಂ ಮುಲಗೆ, ಸುಧಾಕರ ಪತ್ತಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *