ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ತೆರಳುತ್ತಿದ್ದ ಅಧಿಕಾರಿಗಳು ಮಧ್ಯದಲ್ಲೇ ಲಾಕ್

ವಿಜಯಪುರ: ಮಹಾರಾಷ್ಟ್ರದಲ್ಲಿ ಮಳೆ ಎಫೆಕ್ಟ್‌ ಹಿನ್ನೆಲೆ ಜಯಪುರದಲ್ಲಿ ಭೀಮಾನದಿ‌ ಪ್ರವಾಹ ಉಂಟಾಗಿದೆ. ಹೀಗಾಗಿ ಈ ಭಾಗದ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ತೆರಳುತ್ತಿದ್ದ ಅಧಿಕಾರಿಗಳು ಮಧ್ಯದಲ್ಲೇ ಲಾಕ್ ಆದ ಘಟನೆ ನಡೆದಿದೆ. ನೀರಿದ್ದ ಕಾರಣ ಸೇತುವೆ ಮೇಲೆ ವಾಹನ ಕೆಟ್ಟು ಅಧಿಕಾರಿಗಳು ಸಮಸ್ಯೆ ಅನುಭವಿಸಿದ್ದಾರೆ. ಪಿಡಬ್ಲ್ಯೂಡಿ ಅಧಿಕಾರಿಗಳು ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಿಂದ ಭೀಮಾ ನದಿ ಪಾತ್ರಕ್ಕೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಪ್ರವಾಹದಿಂದ ಅಧಿಕ ನೀರು ಬಂದಿದ್ದು, ರಸ್ತೆಯ ಮೇಲೆ ಸಂಚಾರ ಮಾಡುವಾಗ ವಾಹನ ಕೈಕೊಟ್ಟಿದೆ. ಕೊನೆಗೆ […]

Continue Reading

ಬಿಜೆಪಿ ಕಛೇರಿಯಲ್ಲಿ ಭಗತ್ ಸಿಂಗ್ ಸ್ಮರಣೆ

ವಾಡಿ: ಬಿಜೆಪಿ ಕಛೇರಿಯಲ್ಲಿ ಭಗತ್ ಸಿಂಗ್ ಅವರ 118ನೇ ಜಯಂತಿ ಪ್ರಯುಕ್ತ ಭಗತ್ ಸಿಂಗ್ ಭಾವಚಿತ್ರಕ್ಕೆ ಮುಖಂಡರು ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ದೇಶದ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯಲ್ಲಿ ಭಗತ್ ಸಿಂಗ್ ಅಚ್ಚಳಿಯದ ಹೆಸರು ಎಂದರು. ಅಸಾಧಾರಣ ಧೈರ್ಯದಿಂದ ಬ್ರಿಟಿಷರ ಎದೆ ನಡುಗಿಸಿದ ಕ್ರಾಂತಿಕಾರಿ. ಚಿಕ್ಕ ವಯಸ್ಸಿನಲ್ಲೇ ದೇಶ ಪ್ರೇಮದಿಂದ ಪ್ರೇರಿತರಾಗಿ, ಬ್ರಿಟಿಷ್ ಆಡಳಿತದ ವಿರುದ್ಧ ಸಕ್ರಿಯವಾಗಿ ತೊಡಗಿಸಿಕೊಂಡ ಅವರು, ರೈತರು ಮತ್ತು ಕಾರ್ಮಿಕರನ್ನು ಒಗ್ಗೂಡಿಸಲು ‘ನೌಜವಾನ್ ಭಾರತ್ […]

Continue Reading

ವೈದ್ಯಕೀಯ ಕ್ಷೇತ್ರದಲ್ಲಿ ಫಾರ್ಮಸಿಸ್ಟ್‌ ಪಾತ್ರ ಅನನ್ಯ

ಕಲಬುರಗಿ: ನಾಗರಿಕರ ಆರೋಗ್ಯದ ಬಗ್ಗೆ ಕಾಳಜಿ ಮತ್ತು ಸುರಕ್ಷತೆ ಜೊತೆಗೆ ಔಷಧಗಳ ಬಗ್ಗೆ ಸಲಹೆ-ಸೂಚನೆ ನೀಡುವ ಔಷಧ ತಜ್ಞರು ಆರೋಗ್ಯ ರಕ್ಷಕರಾಗಿ ಕಾರ್ಯನಿರ್ವಹಿಸುತ್ತಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಫಾರ್ಮಸಿಸ್ಟ್‌ ಕೊಡುಗೆ ಅನನ್ಯವಾಗಿದೆ ಎಂದು ಫಾರ್ಮಸಿಸ್ಟ್‌ ಶಿವರಾಜ ಲೋಹಾರ್ ಹೇಳಿದರು. ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ಬಸವಗಂಗಾ ಮೆಡಿಕಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ವಿಶ್ವ ಫಾರ್ಮಸಿಸ್ಟ್‌ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಕರೋನಾದ ಸಂದಿಗ್ಧ ಪರಿಸ್ಥಿಯಲ್ಲಿ ಕರೋನಾ ರೋಗಿಗಳು ಮತ್ತು ಸಾಮಾನ್ಯ […]

Continue Reading

ವಾಡಿ: ಬಿಜೆಪಿ ಕಛೇರಿಯಲ್ಲಿ 126ನೇ ಮನ್ ಕಿ ಬಾತ್ ವೀಕ್ಷಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 126ನೇ ಮನ್ ಕಿ ಬಾತ್ ಕಾರ್ಯಕ್ರಮ ಮುಖಂಡರು ವಿಕ್ಷೀಸಿದರು. ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಮೋದಿ ಅವರ ಮನ್ ಕಿ ಬಾತ್ ನಲ್ಲಿ ಭಗತ್ ಸಿಂಗ, ಎಸ್.ಎಲ್ ಭೈರಪ್ಪನವರ ಬಗ್ಗೆ ಯುವಕರು ಹೆಚ್ಚಾಗಿ ಅರಿತು ದೇಶಾಭಿಮಾನ ಮೈಗೂಡಿಸಿಕೊಳ್ಳುವಂತ ಅನೇಕ ವಿಷಯಗಳು ಮನ್ ಕಿ ಬಾತ್ ಮುಖಾಂತರ ನಮಗೆ ಧಾರೆಯೆರೆಯುತ್ತಿರುವುದು ನಮ್ಮ ದೇಶ ಸೇವೆಗೆ ಇನ್ನಷ್ಟು ಸ್ಪೂರ್ತಿ ಸಿಗುವಂತಾಗಿದೆ ಎಂದರು. ಈ ಸಂದರ್ಭದಲ್ಲಿ ಪುರಸಭೆ ಮಾಜಿ […]

Continue Reading

ವಾಡಿ: ನಿರಂತರ ಮಳೆಗೆ ಹಸು ಸಾವು

ವಾಡಿ: ಪಟ್ಟಣದ ವಾರ್ಡ್ ನಂ.15ರ ಮರಾಠಿ ಗಲ್ಲಿಯ ಸತೀಶ್ ಪಂಗಡವಾಲ ಅವರ ಹಸು ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಸಾವಿಗೀಡಾಗಿದೆ. ಮನೆಯ ಮುಂಭಾಗದಲ್ಲಿ ಕಟ್ಟಿದ್ದ ಹಸು ಮಳೆಯಿಂದ ತೀವ್ರ ಅಸ್ವಸ್ಥತಗೊಂಡಿತ್ತು. ತಕ್ಷಣ ಪಶು ವೈದ್ಯಾಧಿಕಾರಿಗೆ ಫೋನ್ ಮೂಲಕ ಸಂಪರ್ಕಿಸಿದಾಗ ಅವರು ಹೇಳಿದಂತೆ ಪ್ರಥಮ ಚಿಕಿತ್ಸೆಗೆ ಮುಂದಾಗುವ ಹೊತ್ತಿಗೆ ಹಸು ಸಾವನ್ನಪ್ಪಿದೆ. ಕಳೆದ ಒಂದು ವರ್ಷದ ಹಿಂದೆ ಈ ಹಸುವನ್ನು ಕುಟುಂಬದ ಉಪಜೀವನ ನಿರ್ವಹಿಸಲು 80 ಸಾವಿರ ಸಾಲ ಮಾಡಿ ಖರೀದಿಸಿದ್ದರು, ಈಗ ಸಂಭವಿಸಿದ ಈ ಅನಾಹುತದಿಂದ ದಿಕ್ಕೆ […]

Continue Reading

ಶಹಾಬಜಾರ: ಯುಪಿಎಚ್‌ಸಿಯಲ್ಲಿ ವಿಶ್ವ ರೇಬಿಸ್ ದಿನಾಚರಣೆ

ಕಲಬುರಗಿ: ನಗರದ ಶೇಖರೋಜಾದ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ‘ವಿಶ್ವ ರೇಬಿಸ್ ದಿನಾಚರಣೆ’ ಜರುಗಿತು. ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಮಾತನಾಡಿ, ರೇಬಿಸ್ ಕಾಯಿಲೆಯು ಪ್ರಾಣಿಗಳಿಂದ ಮಾನವರಿಗೆ ಬರುವ ಕಾಯಿಲೆಯಾಗಿದೆ. ಜ್ವರ, ಆಯಾಸ, ತುರಿಕೆ, ಕೆಮ್ಮು, ಗಂಟಲು ನೋವು, ನರಗಳಲ್ಲಿ ನೋವು, ವಾಂತಿ ಇವು ಕಾಯಿಲೆಯ ಲಕ್ಷಣಗಳಾಗಿವೆ. ಇದು ತೊಂದರೆ ಉಂಟುಮಾಡುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕು ಮತ್ತು ಮುಂಜಾಗ್ರತೆ ವಹಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ […]

Continue Reading

ರಾಷ್ಟ್ರದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರವಾಸೋದ್ಯಮದ ಪಾತ್ರ ಅನನ್ಯ: ಎಚ್.ಬಿ ಪಾಟೀಲ

ಕಲಬುರಗಿ: ದೇಶ ಸುತ್ತು, ಕೋಶ ಓದು ಎಂಬ ಮಾತಿನಂತೆ ಸುಕ್ಷೇತ್ರಗಳು, ಸ್ಮಾರಕಗಳು, ನೈಸರ್ಗಿಕ ತಾಣಗಳು, ಐತಿಹಾಸಿಕ ಸ್ಥಳಗಳಿಗೆ ತೆರಳಿ ವೀಕ್ಷಣೆ ಮಾಡುವುದರಿಂದ ನಮ್ಮ ಇತಿಹಾಸ, ಪರಂಪರೆ, ಕಲೆ, ಸಾಹಿತ್ಯ, ಸಂಸ್ಕೃತಿ ತಿಳಿಯುತ್ತದೆ. ಪ್ರವಾಸೋದ್ಯಮದಿಂದ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗಗಳನ್ನು ದೊರೆಯುತ್ತವೆ. ರಾಷ್ಟ್ರದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರವಾಸೋದ್ಯಮದ ಪಾತ್ರ ಮಹತ್ವದ್ದಾಗಿದೆ ಎಂದು ಅರ್ಥಶಾಸ್ತ್ರದ ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು. ನಗರದ ಶಹಾಬಜಾರ ನಾಕಾ ಸಮೀಪದ ಐತಿಹಾಸಿಕ ಹಾಗೂ ಬಹು ಪುರಾತನ ಸ್ಥಂಬ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ಸಮಾಜ ಸೇವಾ […]

Continue Reading

ಪ್ರವಾಹ ಪೀಡಿತ ಹಳೆ ಹೆಬ್ಬಾಳ ಗ್ರಾಮದ ಜನರ ಸಮಸ್ಯೆ ಆಲಿಸಿದ ಸಚಿವ ಪ್ರಿಯಾಂಕ್ ಖರ್ಗೆ

ಚಿತ್ತಾಪುರ: ಮಳೆ ಹಾಗೂ ಪ್ರವಾಹ ಪೀಡಿತ ಹಳೆ ಹೆಬ್ಬಾಳ ಗ್ರಾಮಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ನಿರಂತರ ಸುರಿವ ಮಳೆಯ ಮಧ್ಯೆಯೇ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ತಾಲೂಕಿನ ಹಳೆ ಹೆಬ್ಬಾಳ ಗ್ರಾಮದಲ್ಲಿ ಮಳೆಯಿಂದ ಬಿದ್ದ ಮನೆಯನ್ನು ಪರಿಶೀಲಿಸಿ ಹಾನಿಗೊಳಗಾದ ಮನೆಗಳ ಸರ್ವೆ ನಡೆಸಿ ತಕ್ಷಣ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹಳೆ ಹೆಬ್ಬಾಳ ಗ್ರಾಮವನ್ನು ಸ್ಥಳಾಂತರಿಸುವ ಬಗ್ಗೆ ಗ್ರಾಮಸ್ಥರು ಸಚಿವರ ಮುಂದೆ ಬೇಡಿಕೆ ಇರಿಸಿದರು. […]

Continue Reading

ಚಿತ್ತಾಪುರ: ಸಂತ್ರಸ್ತ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ವಿತರಣೆ

ಚಿತ್ತಾಪುರ: ಪಟ್ಟಣದ ಬಾಹರ್ ಪೇಟ್ ಮತ್ತು ಚಿತ್ತಾಪುರ ತಾಲೂಕಿನ ಗುಂಡಗುರ್ತಿ, ಬಳವಡಗಿ ಗ್ರಾಮಗಳಲ್ಲಿ ಮನೆಗಳಲ್ಲಿ ನೀರು ನುಗ್ಗಿದ ಸಂತ್ರಸ್ತ ಕುಟುಂಬಗಳಿಗೆ ಕಲಬುರಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರು ಕಳುಹಿಸಿರುವ 500 ಆಹಾರ ಧಾನ್ಯದ ಕಿಟ್’ಗಳನ್ನು ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್ ವಿತರಣೆ ಮಾಡಿದರು. ನಂತರ ಮಾತನಾಡಿದ ಅವರು, ಕಲಬುರಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರು ಸದಾ ಬಡವರ ಏಳಿಗೆಗಾಗಿ ಶ್ರಮಿಸುವ ನಾಯಕರಾಗಿದ್ದಾರೆ. ಬಡವರಿಗೆ ಏನೇ ತೊಂದರೆಯಾದರೆ ಕೂಡಲೆ ಅವರಿಗೆ ಪರಿಹಾರ ರೂಪದಲ್ಲಿ ಸಹಾಯ ಮಾಡುವ […]

Continue Reading

ಸುರಕ್ಷಿತ ಗರ್ಭನಿರೋಧಕ ಆಯ್ಕೆಗಳ ಬಗ್ಗೆ ಜಾಗೃತಿ ಅಗತ್ಯ: ಡಾ.ಅನುಪಮಾ ಕೇಶ್ವಾರ

ಕಲಬುರಗಿ: ಜನನ ನಿಯಂತ್ರಣದಲ್ಲಿ ಸುರಕ್ಷಿತ ಗರ್ಭನಿರೋಧಕ ಆಯ್ಕೆಗಳು ಮತ್ತು ವಿಧಾನಗಳ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು. ನಗರದ ಶೇಖರೋಜಾದಲ್ಲಿನ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಕೇಂದ್ರ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಜರುಗಿದ “ವಿಶ್ವ ಗರ್ಭನಿರೋಧಕ/ಜನನ ನಿಯಂತ್ರಣ ದಿನಾಚರಣೆ”ಯಲ್ಲಿ ಮಾತನಾಡಿದ ಅವರು,ಜನಸಂಖ್ಯಾ ಸ್ಪೋಟದಿಂದ ತತ್ತರಿಸಿರುವ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಜನನ ನಿಯಂತ್ರಣ, ಕುಟುಂಬ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಅಗತ್ಯವಾಗಿದೆ ಎಂದರು‌. ಅನಪೇಕ್ಷಿತ ಗರ್ಭಧಾರಣೆಗಳನ್ನು […]

Continue Reading