ಬೆಂಗಳೂರಿನಲ್ಲಿ ಕೊರೋನಾಗೆ ಮೊದಲ ಬಲಿ

ಬೆಂಗಳೂರು: ಜಗತ್ತನ್ನೇ ತಲೆಕೆಳಗೆ ಮಾಡಿಬಿಟ್ಟಿದ್ದ ಕೊರೋನಾ ಮತ್ತೆ ಎಂಟ್ರಿ ಕೊಟ್ಟಿದೆ, ಮತ್ತೆ ಆತಂಕ ಮನೆ ಮಾಡಿದೆ. ಇದೀಗ ಕೋವಿಡ್ ಸೋಂಕಿಗೆ ತುತ್ತಾಗಿ ವೃದ್ಧ ಬಲಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ವೈಟ್‌ಫೀಲ್ಡ್‌ ಮೂಲದ 84 ವರ್ಷದ ವೃದ್ಧ ಉಸಿರಾಟದ ಸಮಸ್ಯೆ ಹಾಗೂ ಅಂಗಾಂಗ ವೈಫಲ್ಯ ಖಾಯಿಲೆಗಳಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಸಹ ಕೋವಿಡ್‌ಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೇ.17 ರಂದು ಕೋವಿಡ್‌ಗೆ ವೃದ್ಧ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇಂದು 108 ಜನರಿಗೆ ಕೋವಿಡ್ ಟೆಸ್ಟ್ […]

Continue Reading

ಕರ್ನಾಟಕದಲ್ಲಿ ಕೊರೊನಾ ಹೆಚ್ಚಳ: ಇನ್ನುಮುಂದೆ ಕೋವಿಡ್ ಟೆಸ್ಟ್ ಕಡ್ಡಾಯ

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಉಸಿರಾಟ ಸಮಸ್ಯೆ ಮತ್ತು ಹೃದಯಸಂಬಂಧಿ ಕಾಯಿಲೆ ಇರುವವರಿಗೆ ಕಡ್ಡಾಯವಾಗಿ ಕೋವಿಡ್​ ಟೆಸ್ಟ್​ ಮಾಡುವಂತೆ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಚಿವ ದಿನೇಶ್​ ಗುಂಡೂರಾವ್​, ಒಂದು ತಿಂಗಳಿಗಾಗುವಷ್ಟು ಟೆಸ್ಟ್ ಕಿಟ್ ತೆಗೆದಿಡುವಂತೆ ಸೂಚನೆ ಎಲ್ಲಾ ಆಸ್ಪತ್ರೆಗಳಿಗೆ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಒಟ್ಟು 35 ಸಕ್ರಿಯ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ, ಅವುಗಳಲ್ಲಿ 32 ಬೆಂಗಳೂರಿನಲ್ಲಿ ದೃಢಪಟ್ಟಿವೆ. […]

Continue Reading

ಎಲ್ಲರಲ್ಲಿ ಸಹೋದರತ್ವ, ಏಕತಾ ಮನೋಭಾವನೆ ಬೆಳೆಯಲಿ

ಕಲಬುರಗಿ: ಪರಸ್ಪರ ಸಹೋದರತ್ವ, ಎಲ್ಲರು ಒಂದೆ ಎಂಬ ಐಕ್ಯತೆ ಮನೋಭಾವ ಮೂಡಿದಾಗ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಿ, ದೇಶದ ಪ್ರಗತಿ ಸಾಧ್ಯ ಎಂದು ಉಪನ್ಯಾಸಕ, ಸಾಮಾಜಿಕ ಚಿಂತಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು. ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಜರುಗಿದ ‘ರಾಷ್ಟ್ರೀಯ ಸಹೋದರರ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಜಾತಿ, ಧರ್ಮ, ಭಾಷೆ, ಪ್ರದೇಶ ಸೇರಿದಂತೆ […]

Continue Reading

ನಾಡಿನ ಪ್ರಾಚೀನ ಪ್ರಮುಖ ವಾಣಿಜ್ಯ, ಶೈಕ್ಷಣಿಕ ಕೇಂದ್ರ ನಿಂಬರ್ಗಾ: ಮುಡುಬಿ ಗುಂಡೆರಾವ

ಕಲಬುರಗಿ: ಆಳಂದ ಸಾಸಿರ ನಾಡಿನ ವ್ಯಾಪ್ತಿಗೆ ಒಳಪಟ್ಟ ನಿಂಬರ್ಗಾ ಗ್ರಾಮವು ನಾಡಿನ ಪ್ರಾಚೀನ ಪ್ರಮುಖ ವಾಣಿಜ್ಯ, ಶೈಕ್ಷಣಿಕ ಕೇಂದ್ರವಾಗಿತ್ತು. ಇಲ್ಲಿ ಉತ್ಪಾದಿಸಿದ ಎಲೆ, ಅಡಕೆ, ದಾಲ್ಚಿನ್ನಿ, ಸಾಂಬಾರು ಪದಾರ್ಥ, ತೋಟಗಾರಿಕೆ ಬೆಳೆಗಳು, ಖರ್ಜೂರ, ಹೂವುಗಳು ನಾಡಿನ ವಿವಿಧ ಭಾಗಗಳಿಗೆ ರಫ್ತಾಗುತ್ತಿದ್ದವು ಎಂದು ಸಂಶೋಧಕ-ಸಾಹಿತಿ ಮುಡುಬಿ ಗುಂಡೆರಾವ ಅಭಿಮತ ವ್ಯಕ್ತಪಡಿಸಿದರು. ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದ ಮಹಾದೇವ ದೇವಾಲಯದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗುತ್ತಿರುವ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-18ರಲ್ಲಿ ಶುಕ್ರವಾರ […]

Continue Reading

ತಾಳಿ ಕಟ್ಟುವಾಗ ಮದುವೆ ಬೇಡ ಎಂದ ವಧು, ಮದುಮಗ ಕಣ್ಣೀರು

ಹಾಸನ: ತಾಳಿ ಕಟ್ಟುವಾಗ ವಧು ನನಗೆ ಈ ಮದುವೆ ಬೇಡ ಎಂದ ಘಟನೆ ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ. ತಾಳಿ ಕಟ್ಟುವ ಮುಹೂರ್ತಕ್ಕೂ ಮುನ್ನ ಯುವತಿಗೆ ಒಂದು ಫೋನ್ ಕರೆ ಬಂದಿದೆ. ಆಗ ವಧು ತಕ್ಷಣವೆ ನನಗೆ ಈ ಮದುವೆ ಬೇಡ ಎಂದು ವಧು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೆತ್ತವರು, ಸಂಬಂಧಿಕರು ಯಾರು ಏನೇ ಹೇಳಿದರು ಕೇಳದ ವಧು ರೂಂಗೆ ಹೋಗಿ ಮದುವೆ ಬೇಡವೇ ಬೇಡ ಎಂದು ಹಠ ಹಿಡಿದಿದ್ದಾರೆ. ತಾಳಿ ಕೈಯಲ್ಲಿ ಹಿಡಿದು ಮಧುಮಗ […]

Continue Reading

ನಮ್ಮ ನೆಲವೆ ನಮಗೆ ಪ್ರೇರಣೆ: ಮುಡುಬಿ ಗುಂಡೆರಾವ

ಚಿತ್ತಾಪುರ: ಕನ್ನಡ ಸಾರಸ್ವತ ಲೋಕಕ್ಕೆ ಪ್ರಥಮ ಕೃತಿ ‘ಕವಿರಾಜ ಮಾರ್ಗ’ ನೀಡಿದ ಹೆಗ್ಗಳಿಕೆ, ಕಾವೇರಿಯಿಂದ ಗೋದಾವರಿವರೆಗೆ ಕನ್ನಡ ಸಾಮ್ರಾಜ್ಯ ಕಟ್ಟಿದ ರಾಷ್ಟ್ರಕೂಟರ ರಾಜಧಾನಿ ಮಾನ್ಯಖೇಟ, ಹೀಗೆ ಹತ್ತು ಹಲವಾರು ಸಾಧನೆಗೆಳಿಗೆ ಮುನ್ನುಡಿ ಬರೆದವರು ಕಲಬುರಗಿ ನೆಲದವರು ಎಂಬ ಅಭಿಮಾನ ನಮಗಿದೆ. ನಮ್ಮ ನೆಲವೆ ನಮಗೆ ಪ್ರೇರಣೆ ಎಂದು ಸಂಶೋಧಕ-ಸಾಹಿತಿ ಮುಡುಬಿ ಗುಂಡೆರಾವ ಅಭಿಮತ ವ್ಯಕ್ತಪಡಿಸಿದರು. ತಾಲೂಕಿನ ಪೇಠಶಿರೂರ ಗ್ರಾಮದ ಮಲ್ಲಿಕಾರ್ಜುನ ದೇವಾಲಯದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗುತ್ತಿರುವ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯಾತ್ಮಕ […]

Continue Reading

ಸರ್ವೆ ಮಾಡುವಾಗ ಮೊಬೈಲ್ ಸ್ಪೋಟ, ಜಾತಿಗಣತಿ ಕಾರ್ಯಕ್ಕೆ ಅಡೆತಡೆ

ಚಿತ್ತಾಪುರ: ಜಾತಿಗಣತಿ ಮಾಡುವಾಗ ಏಕಾಏಕಿ ಮೊಬೈಲ್ ಸ್ಪೋಟಗೊಂಡಿರುವ ಘಟನೆ ದಂಡೋತಿ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ದಂಡೋತಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ 9.36ಕ್ಕೆ 42 ps ನಲ್ಲಿ ಶಿಕ್ಷಕ ಜಗನ್ನಾಥ ರಾಠೋಡ ಜಾತಿಗಣತಿ ಕಾರ್ಯ ಮಾಡುವಾಗ ಅವರು ಬಳಸುತ್ತಿದ್ದ ಮೊಬೈಲ್ ಫೋನ್ ಸ್ಫೋಟಗೊಂಡ ಪರಿಣಾಮ ಮೊಬೈಲ್’ಗೆ ಬೆಂಕಿ ತಗುಲಿದೆ. ಬೆಂಕಿ ನಂದಿಸಲು ನಾನಾ ಪ್ರಯತ್ನ ಮಾಡಿದರು ಮೊಬೈಲ್ ಫೋನ್ ಸುಟ್ಟು ಕರಕಲಾಗಿದೆ ಎಂದು ಶಿಕ್ಷಕ ಜಗನ್ನಾಥ ರಾಠೋಡ ಹೇಳಿದ್ದಾರೆ. ಶಿಕ್ಷಕ, ಜಾತಿಣತಿದಾರ ಜಗನ್ನಾಥ ರಾಠೋಡ ಅವರು, ಜಾತಿಗಣತಿ ಕಾರ್ಯ […]

Continue Reading

ಪಶು ಆಸ್ಪತ್ರೆಗೆ ಬಂದು ವೈದ್ಯನ ಬಳಿ ತನ್ನ ಬಾಧೆ ತೋಡಿಕೊಂಡ ಮಂಗ

ಬಾಗಲಕೋಟೆ: ಮನುಷ್ಯರಿಗೆ ಆರೋಗ್ಯ ಸಮಸ್ಯೆಯಾದರೆ ಕೂಡಲೆ ಆಸ್ಪತ್ರೆಗೆ ಹೋಗುತ್ತಾರೆ. ವೈದ್ಯರಿಗೆ ಸಮಸ್ಯೆ ಬಗ್ಗೆ ಹೇಳಿ ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಅದೆ ರೀತಿ ಇಲ್ಲೊಂದು ಮಂಗ ನೇರವಾಗಿ ಪಶು ಆಸ್ಪತ್ರೆಗೆ ಹೋಗಿದೆ. ತನಗಾದ ಸಮಸ್ಯೆಯ ಬಗ್ಗೆ ವೈದ್ಯರಿಗೆ ತಾನೆ ಸನ್ನೆ ಮೂಲಕ ತೋರಿಸಿದೆ. ಬಳಿಕ ಚಿಕಿತ್ಸೆ ಪಡೆದುಕೊಂಡು ಹೋಗಿದೆ. ಸದ್ಯ ಈ ಘಟನೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಮಂಗಗಳು ಮನುಷ್ಯರಷ್ಟೆ ಬುದ್ದಿ ಜೀವಿಗಳು ಅನ್ನೊದಕ್ಕೆ ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನ ಗಡೂರು ಗ್ರಾಮದ ಪಶು ಆಸ್ಪತ್ರೆಯಲ್ಲಿ ನಡೆದ ಈ […]

Continue Reading

ಸತ್ತಂತೆ ನಟಿಸಿ ಚಿರತೆಯನ್ನೆ ಯಾಮಾರಿಸಿದ ಸಾಕು ನಾಯಿ

ತೀರ್ಥಹಳ್ಳಿ: ಚಿರತೆ ದಾಳಿಯಿಂದ ಪವಾಡ ಸದೃಶದಂತೆ ನಾಯಿಯೊಂದು ಬದುಕಿದ ಘಟನೆ ಹೊದಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಳಾಪುರ ಗ್ರಾಮದ ಮನೆಯ ಮುಂದೆ ನಡೆದಿದೆ. ತಾಲೂಕಿನ ಹೊದಲ ಅರಳಾಪುರ ಗ್ರಾಮದ ಅಂತೋಣಿ ಎಂಬುವರ ಮನೆ ಮುಂದೆ ಕಟ್ಟಿ ಹಾಕಿದ್ದ ನಾಯಿಯನ್ನು ಚಿರತೆ ತಿನ್ನಲು ಬಂದಿತ್ತು. ಮನೆ ಮುಂದೆ ಕಟ್ಟಿ ಹಾಕಿದ್ದ ನಾಯಿಯ ಕುತ್ತಿಗೆಗೆ ಚಿರತೆ ಬಾಯಿ ಹಾಕಿದೆ. ಆಗ ಜೀವ ಹೋಗುವ ಭಯವಾದರೂ ನಾಯಿ ಸತ್ತಂತೆ ಮಲಗಿದೆ, ಅದನ್ನು ನೋಡಿದ ಚಿರತೆ ನಾಯಿ ಸತ್ತು ಹೋಗಿದೆ ಎಂದು ಭಾವಿಸಿ […]

Continue Reading

ಪರಿಸರ ಸಮತೋಲನೆಗೆ ಜೀವ ವೈವಿಧ್ಯತೆಯ ರಕ್ಷಣೆ ಅಗತ್ಯ: ಎಚ್.ಬಿ ಪಾಟೀಲ

ಕಲಬುರಗಿ: ಪರಿಸರದ ಮೇಲಿನ ಮಾನವನ ದಬ್ಬಾಳಿಕೆಯಿಂದ ಅನೇಕ ಗಿಡ-ಮರಗಳು, ಸಸ್ಯ ಸಂಪತ್ತು, ಪ್ರಾಣಿ-ಪಕ್ಷಿಗಳ ನಾಶವಾಗುವ ಮೂಲಕ ಪರಿಸರದ ಅಸಮತೋಲನವಾಗುತ್ತಿದೆ. ಜೀವ ವೈವಿಧ್ಯತೆ ಮತ್ತು ಆಹಾರ ಸರಪಳಿ ಪರಸ್ಪರ ಪೂರಕ ಸಂಬಂಧಿ, ಜೀವ ವೈವಿಧ್ಯತೆ ರಕ್ಷಣೆ ಮಾಡುವುದು ಅಗತ್ಯವಾಗಿದೆ, ಇದರಿಂದ ಪರಿಸರ ಸಮಲೋಲನೆ ಸಾಧ್ಯವಿದೆ ಎಂದು ಉಪನ್ಯಾಸಕ, ಪರಿಸರ ಪ್ರೇಮಿ ಎಚ್.ಬಿ ಪಾಟೀಲ ಹೇಳಿದರು. ನಗರದ ಶಹಾಬಜಾರ ಮಹಾದೇವ ನಗರದ ಶಿವಾ ವಿದ್ಯಾ ಮಂದಿರ ಮತ್ತು ಸ್ವಾತಿ ಪ್ರೌಢಶಾಲೆಯಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಜರುಗಿದ […]

Continue Reading