ಕಲಬುರಗಿ: ನಾಗಾವಿ ಯಲ್ಲಮ್ಮ ದೇವಸ್ಥಾನ ಹುಂಡಿಯಲ್ಲಿ ಮಲೇಷ್ಯಾ ಕರೆನ್ಸಿ

ಸುದ್ದಿ ಸಂಗ್ರಹ ಚಿತ್ತಾಪುರ ಪಟ್ಟಣದ ಹೊರವಲಯದ ನಾಗಾವಿಯ ಮುಜರಾಯಿ ಇಲಾಖೆಯ ಯಲ್ಲಮ್ಮದೇವಿ ದೇವಸ್ಥಾನದ ಹುಂಡಿ ತೆರೆದು ಹಣ ಎಣಿಸುವಾಗ ಮಲೇಷ್ಯಾ ದೇಶದ ಕರೆನ್ಸಿ ಪತ್ತೆಯಾಗಿದೆ. ತಹಸೀಲ್ದಾರ್ ನಾಗಯ್ಯ ಹಿರೇಮಠ ನೇತೃತ್ವದಲ್ಲಿ ಶನಿವಾರ ಹುಂಡಿ ಹಣ ಎಣಿಕೆಯಲ್ಲಿ ಮಲೇಷ್ಯಾದ 18 ನೋಟು ಮತ್ತು 2 ನಾಣ್ಯಗಳು ದೊರೆತಿವೆ. ಒಂದು ರಿಂಗಿತ್‌ಗೆ ಭಾರತದ ರೂ.23.26 ಪೈಸೆ ಮೌಲ್ಯವಾಗುತ್ತದೆ ಎಂದು ಹೇಳಿದ್ದಾರೆ. ಹುಂಡಿಯಲ್ಲಿ 500 ರೂ ಮುಖಬೆಲೆಯ 556 ನೋಟು, 200 ರೂ ಮುಖಬೆಲೆಯ 455 ನೋಟು, 100 ರೂ ಮುಖಬೆಲೆಯ […]

Continue Reading

ಬಾಗಲಕೋಟೆ ಬಳಿಕ ಕಲಬುರಗಿಯಲ್ಲೂ ಶಿವಾಜಿ ಜಯಂತಿ ವೇಳೆ ಮಾರಾಮಾರಿ

ಸುದ್ದಿ ಸಂಗ್ರಹ ಕಲಬುರಗಿ ಬಾಗಲಕೋಟೆ ಬಳಿಕ ಕಲಬುರಗಿಯಲ್ಲೂ ಶಿವಾಜಿ ಜಯಂತಿ ವೇಳೆ ಎರಡು ಸಮುದಾಯದ ನಡುವೆ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ ಮೂರ್ನಾಲ್ಕು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದಲ್ಲಿ ಘಟನೆ ನಡೆದಿದೆ. ರಾವೂರ ಗ್ರಾಮದ ಗೋಕುಲ ನಗರದ ಗಣೇಶ್ ಕಟ್ಟೆಯ ಮೇಲೆ ಶಿವಾಜಿ ಮಹಾರಾಜರ ಫೋಟೋ ಇಟ್ಟು ಶಿವಾಜಿ ಜಯಂತಿ ಆಚರಣೆ ಮಾಡಲಾಗುತ್ತಿತ್ತು. ಡಿಜೆ ಹಾಕಿ ಡ್ಯಾನ್ಸ್ ಮಾಡುವ ವೇಲೆ ಮತ್ತೊಂದು ಸಮುದಾಯ ಕಿರಿಕಿರಿ ಮಾಡಿದೆ. ಸೌಂಡ್ ಕಡಿಮೆ ಮಾಡುವಂತೆ ಕಿರಿಕ್ […]

Continue Reading

ಸಂಸ್ಕಾರ ರೂಪಿಸಲು ಧಾರ್ಮಿಕ ಕಾರ್ಯಕ್ರಮ ಅಗತ್ಯ: ಟೆಂಗಳಿ ಶ್ರೀ

ಸುದ್ದಿ ಸಂಗ್ರಹ ಕಾಳಗಿಮನುಷ್ಯತ್ವ, ಸಂಸ್ಕಾರ ರೂಪಿಸಲು ಶಾಲೆಗಳಿಂದ ಸಾಧ್ಯವಿಲ್ಲ, ಧಾರ್ಮಿಕ ಚಟುವಟಿಕೆಗಳು ಸಹ ಸೌಹಾರ್ದತೆ ಮೂಡಿಸಿ ಬಲವಾದ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿವೆ ಎಂದು ಟೆಂಗಳಿ- ಮಂಗಲಗಿಯ ಶಾಂತೇಶ್ವರ ಹಿರೇಮಠದ ಧರ್ಮಾಧಿಕಾರಿ ಡಾ.ಶಾಂತಸೋಮನಾಥ ಶಿವಾಚಾರ್ಯರು ಹೇಳಿದರು. ತಾಲೂಕಿನ ಟೆಂಗಳಿ ಗ್ರಾಮದ ಶಾಂತೇಶ್ವರ ಹಿರೇಮಠದಲ್ಲಿ ಬುಧವಾರ ರಾತ್ರಿ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ ನಿಮಿತ್ಯ, ಶ್ರೀ ಶಾಂತವೀರ ಶಿವಾಚಾರ್ಯರ ದರ್ಶನಂ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾತೃ ದೇವೋ ಭವ, ಪಿತೃ ದೇವೋ ಭವ, ಗುರು ದೇವೋ ಭವ, […]

Continue Reading

ಕೋರವಾರ: ಅಣಿವೀರಭದ್ರೇಶ್ವರ ಅದ್ಧೂರಿ ರಥೋತ್ಸವ

ಸುದ್ದಿ ಸಂಗ್ರಹ ಕಾಳಗಿಶಿವರಾತ್ರಿ ವೇಳೆ ರಾತ್ರಿಯಲ್ಲೆ ಜರುಗುವ ಐತಿಹಾಸಿಕ ದೇವಾಲಯ ಕೋರವಾರ ಹೊರವಲಯದ ಅಣಿವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ತಡರಾತ್ರಿ ದೇವಸ್ಥಾನದ ಮೈದಾನದಲ್ಲಿ ರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಹಲಗೆ, ಡೊಳ್ಳು, ಬಾಜಾ ಭಜಂತ್ರಿ, ವಾದ್ಯಮೇಳಗಳ ಝೇಂಕಾರ, ಪುರವಂತರ ಕುಣಿತ, ಮದ್ದು ಸುಡುವ ಆಕರ್ಷಕ ನೋಟದ ಸದ್ದಿನ ನಡುವೆ ಭಕ್ತರು ತೇರು ಎಳೆದು ಸಂಭ್ರಮಿಸಿದರು. ನೆರೆದಿದ್ದ ರಾಜ್ಯ ಹೊರ ರಾಜ್ಯಗಳ ಅಸಂಖ್ಯಾತ ಭಕ್ತರು ಫಲಪುಷ್ಪ, ನಾಣ್ಯ ತೇರಿನ ಮೇಲೆ ತೂರಿ ಜೈಕಾರ ಹಾಕಿ ಕೈಮುಗಿದು ನಮಿಸಿದರು. […]

Continue Reading

ಶಾಲಾ ವಾರ್ಷಿಕೋತ್ಸವವು ಮಕ್ಕಳ ಪ್ರತಿಭೆ ಅರಳಿಸುವ ವೇದಿಕೆಯಾಗಿದೆ: ಜಯಶ್ರೀ ಮತ್ತಿಮೂಡ

ಸುದ್ದಿ ಸಂಗ್ರಹ ಶಹಾಬಾದ್ಶಾಲಾ ವಾರ್ಷಿಕೋತ್ಸವವು ಮಕ್ಕಳ ಪ್ರತಿಭೆ ಅರಳಿಸುವ ವೇದಿಕೆಯಾಗಿದ್ದು, ಶಿಸ್ತು, ಸಂಸ್ಕಾರ, ಸ್ವದೇಶಿ ಸಂಸ್ಕೃತಿ, ಭಾಷಾಭಿಮಾನ ಮತ್ತು ಸಮಾಜ ಪರಿವರ್ತನೆ ಶಾಲೆಯ ಮುಖ್ಯ ಗುರಿಯಾಗಿದೆ ಎಂದು ಸಮಾಜ ಸೇವಕಿ ಜಯಶ್ರೀ ಬಸವರಾಜ ಮತ್ತಿಮೂಡ ಹೇಳಿದರು. ತಾಲೂಕಿನ ತೋನಸನಹಳ್ಳಿ (ಎಸ್) ಗ್ರಾಮದ ಶರಣ ಗ್ರಾಮೀಣಾಬಿವೃದ್ದಿ ಶಿಕ್ಷಣ ಸಂಸ್ಥೆಯ ಕೋತಲಪ್ಪ ಮುತ್ಯಾ ಪ್ರೌಢ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮೊಬೈಲ್ ಮತ್ತು ಟಿವಿ ಕೇವಲ ವೀಕ್ಷಣೆ ಬಳಸದೆ, ಅವುಗಳಿಂದ ಜ್ಞಾನ ವಿಕಾಸದ ಪೂರಕವಾಗಿ ಬಳಸಬೇಕು […]

Continue Reading

ಈ ವರ್ಷದ ಮೊದಲ ʻಕಂಕಣ ಸೂರ್ಯಗ್ರಹಣʼ ನಾಳೆ

ಸುದ್ದಿ ಸಂಗ್ರಹ ನವದೆಹಲಿಈ ವರ್ಷದ ಮೊದಲ ಸೂರ್ಯಗ್ರಹಣ ಫೆ.17 ಮಂಗಳವಾರ ಗೋಚರವಾಗಲಿದೆ. ಇದನ್ನು ʻರಿಂಗ್ ಆಫ್ ಫೈರ್ʼ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಕಂಕಣ ಸೂರ್ಯಗ್ರಹಣ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಮಂಗಳವಾರ ಮಧ್ಯಾಹ್ನ 3:26ರ ವೇಳೆಗೆ ಗ್ರಹಣ ಪ್ರಾರಂಭವಾಗಿ ಸಂಜೆ 7:57ಕ್ಕೆ ಕೊನೆಗೊಳ್ಳಲಿದೆ. ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, 2 ನಿಮಿಷ 20 ಸೆಕೆಂಡು ಇರಲಿದೆ. ಸಂಪೂರ್ಣ ಸೂರ್ಯಗ್ರಹಣದ ವೇಳೆ ಸೂರ್ಯನ ಕೇಂದ್ರದ 96% ರಷ್ಟನ್ನು ಚಂದ್ರ ಆವರಿಸಲಿದೆ. ಆದರೆ ಈ ಗ್ರಹಣ ಭಾರತದಲ್ಲಿ ಗೋಚರವಾಗುವುದಿಲ್ಲ. ಎಲ್ಲೆಲ್ಲಿ ಗೋಚರ ?ಅಂಟಾರ್ಟಿಕಾ, […]

Continue Reading

ಗೂಗಲ್‌ ಮ್ಯಾಪ್‌ ನಂಬಿ ಕೆಟ್ಟ ಕೇರಳದ ಪ್ರವಾಸಿಗರು: ಉಪ್ಲಾಡಿ ಹೊಳೆಯತ್ತ ಸಾಗಿದ ಕಾರು

ಸುದ್ದಿ ಸಂಗ್ರಹ ಕೋಟಗೂಗಲ್‌ ಮ್ಯಾಪ್‌ ಎಡವಟ್ಟಿನಿಂದ ಕಾರೊಂದು ಹೊಳೆಗೆ ಬೀಳುವ ಸ್ಥಿತಿಗೆ ತಲುಪಿದ ಘಟನೆ ಶುಕ್ರವಾರ ರಾತ್ರಿ ಕೋಟ ಸಾೖಬ್ರಕಟ್ಟೆ ಮುಖ್ಯ ರಸ್ತೆಯ ಉಪ್ಲಾಡಿ ಹೊಳೆ ಬದಿಯಲ್ಲಿ ಸಂಭವಿಸಿದೆ. ಕೇರಳ ಮೂಲದ ಕುಟುಂಬವೊಂದು ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕಾಗಿ ಪ್ರಯಾಣಿಸುತ್ತಿದ್ದರು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚರಿಸುತ್ತಿದ್ದ ವೇಳೆ ಗೂಗಲ್‌ ಮ್ಯಾಪ್‌ನಲ್ಲಿ ತೋರಿದ ಡೈವರ್ಶನ್‌ ಅನುಸರಿಸಿ ಬ್ರಹ್ಮಾವರ ಬಳಿ ಬಾರಕೂರು ಮಾರ್ಗವಾಗಿ ಸಾೖಬ್ರಕಟ್ಟೆ ಮೂಲಕ ಕೋಟದತ್ತ ಸಾಗಿತ್ತು. ಉಪ್ಲಾಡಿ ಹೊಳೆ ಸಮೀಪ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್‌ […]

Continue Reading

ವಿದೇಶದಲ್ಲೆ ಕುಳಿತು ಮಂಗಳೂರು ಯುವತಿಯರಿಗೆ ಗಾಳ: ಗಂಡನ ಪ್ರಣಯದಾಟ ಬಿಚ್ಚಿಟ್ಟ ಪತ್ನಿ

ಸುದ್ದಿ ಸಂಗ್ರಹ ಮಂಗಳೂರು ಮ್ಯಾಟ್ರಿಮೋನಿಯಲ್ಲಿ ಪರಿಚಯ ಮಾಡಿಕೊಂಡು ಮದ್ವೆಯಾಗಿ ನಂಬಿಸಿ ಹಣ ವಂಚಿಸಿದ್ದ ಪ್ರಕರಣ ಮಾಸುವ ಮುನ್ನವೆ ಮತ್ತೊಬ್ಬ ʻಮಂಗಳೂರು ಮನ್ಮಥʼನ ಪ್ರಕರಣ ಬೆಳಕಿಗೆ ಬಂದಿದೆ. ಈತ ವಿದೇಶದಲ್ಲೆ ಕುಳಿತು ಮಂಗಳೂರು ಯುವತಿಯರಿಗೆ ಗಾಳ ಹಾಕುತ್ತಿದ್ದ ಎನ್ನುವುದು ಗೊತ್ತಾಗಿದೆ. ಗಂಡನ ಪ್ರೀತಿ, ಪ್ರೇಮ, ಪ್ರಣಯದಾಟವನ್ನು ಸ್ವತಃ ಪತ್ನಿಯೆ ಬಟಾಬಯಲು ಮಾಡಿದ್ದು, ಬಜೆಪೆ ನಿವಾಸಿ ಮನೀಶ್ ವಿರುದ್ಧ ಪತ್ನಿ ಪ್ರೀತಿ ಮಂಗಳೂರು ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರೀತಿಯನ್ನು ಪ್ರೀತಿಸಿ ಮದ್ವೆಯಾಗಿದ್ದು ಹೇಗೆ ?ಸಂತ್ರಸ್ತೆ ಪ್ರೀತಿ ಎಂಬಾಕೆಗೆ […]

Continue Reading

ಕನ್ನಡ ಶಾಲೆ ಉಳಿಸಿ- ಬೆಳೆಸಿ ಅಭಿಯಾನದ ಚಿತ್ತಾಪುರ ನಗರಾಧ್ಯಕ್ಷರಾಗಿ ಕುಮಾರ ಜಾಧವ ನೇಮಕ

ಸುದ್ದಿ ಸಂಗ್ರಹ ಕಲಬುರಗಿಕನ್ನಡ ಭಾಷೆ, ಸಂಸ್ಕೃತಿ ಹಾಗೂ ಸರ್ಕಾರಿ ಶಾಲೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ರಾಜ್ಯಾದ್ಯಂತ ನಡೆಯುತ್ತಿರುವ ‘ಕನ್ನಡ ಶಾಲೆ ಉಳಿಸಿ- ಬೆಳೆಸಿ ಅಭಿಯಾನ’ ಸಂಘಟನೆಯ ಚಿತ್ತಾಪುರ ನಗರಾಧ್ಯಕ್ಷರಾಗಿ ಕುಮಾರ ಜಾಧವರನ್ನು ನೇಮಕ ಮಾಡಲಾಗಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಅಣ್ಣಾರಾಯ ವಿ ಇವಣಿ ಹೇಳಿದರು. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಿಮಗೆ ವಹಿಸಲಾದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿ, ತಾಲೂಕಿನಲ್ಲಿ ಸಂಘಟನೆ ಇನ್ನಷ್ಟು ಬಲಿಷ್ಠಗೊಳಿಸಬೇಕು. ವಿದ್ಯಾರ್ಥಿಗಳಿಗೆ ಅಭಿಯಾನದ ಉದ್ದೇಶ ತಿಳಿಸಿ, ಕನ್ನಡ ವಿಷಯದಲ್ಲಿ 100ಕ್ಕೆ 100ರಷ್ಟು […]

Continue Reading

ಪುಣ್ಯ ಆತ ನನಗೆ ತಾಳಿ ಕಟ್ಟಲಿಲ್ಲ, ಅವನಿಂದ ಅವಕಾಶಗಳೆ ಹೋಯಿತು: ಅಣ್ಣಯ್ಯ ನಟಿಯಿಂದ ಶಾಕಿಂಗ್ ಹೇಳಿಕೆ

ಸುದ್ದಿ ಸಂಗ್ರಹ ಮುಂಬೈ ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್​ ವಿ ರವಿಚಂದ್ರನ್​ ಅಭಿನಯದ ಸೂಪರ್​ಹಿಟ್​ ಚಿತ್ರ ಅಣ್ಣಯ್ಯ ಬಹುತೇಕರಿಗೆ ಗೊತ್ತೆಯಿದೆ. ಸಿನಿಮಾದಲ್ಲಿ ರವಿಚಂದ್ರನ್ ಪಾತ್ರಕ್ಕಿಂತ ಹೆಚ್ಚಾಗಿ​ ಅವರ ತಾಯಿಯ ಪಾತ್ರದಲ್ಲಿ ಮಿಂಚಿದ ನಟಿಯನ್ನೆ ಹಲವರು ಬಹುಬೇಗನೆ ನೆನಪಿಸಿಕೊಳ್ಳುತ್ತಾರೆ. ಕಾರಣ ಆ ಮಟ್ಟಿಗಿನ ಅಮೋಘ ಅಭಿನಯ. ನಾಗವೇಣಿ ಪಾತ್ರದಲ್ಲಿ ವಿಷಕಾರಿ ಹೆಣ್ಣಾಗಿ ನಟಿಸುವ ಮೂಲಕ ಇಂದಿಗೂ ಕನ್ನಡ ಸಿನಿಪ್ರಿಯರ ನೆನಪಿನಲ್ಲಿ ಉಳಿದಿರುವ ಬಾಲಿವುಡ್​ನ ಹಿರಿಯ ನಟಿ ಅರುಣಾ ಇರಾನಿ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಕೆಲವು ಅಚ್ಚರಿ ಸಂಗತಿ ಬಿಚ್ಚಿಟ್ಟಿದ್ದಾರೆ. […]

Continue Reading