ಜಪಾನ್‌ ಕರಾವಳಿಗೆ ಅಪ್ಪಳಿಸಿದ ಅವಳಿ ಭೂಕಂಪ: ಭಾರಿ ಸುನಾಮಿ ಎಚ್ಚರಿಕೆ

ಟೋಕಿಯೊ: ಜಪಾನ್‌ನ ಉತ್ತರ ಕರಾವಳಿಯಲ್ಲಿಂದು ಅವಳಿ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ವರದಿ ಮಾಡಿದೆ. ಮೊದಲ ಭೂಕಂಪ 7.6 ತೀವ್ರತೆಯಿದ್ದು, ಪೂರ್ವ-ಈಶಾನ್ಯಕ್ಕೆ 84 ಕಿ.ಮೀ ದೂರದಲ್ಲಿ ಸಂಭವಿಸಿದ್ದು, 53.1 ಕಿ.ಮೀ ಆಳದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ. 2ನೇ ಭೂಕಂಪವು 5.5 ತೀವ್ರತೆ ಹೊಂದಿದ್ದು, ಹಚಿನೋಹೆಯ ಪೂರ್ವ-ಈಶಾನ್ಯಕ್ಕೆ 96 ಕಿ.ಮೀ ದೂರದಲ್ಲಿ ಸಂಭವಿಸಿದೆ. ಕರಾವಳಿಯಿಂದ 44.3 ಕಿ.ಮೀ ಆಳದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ. ಈ ಬೆನ್ನಲ್ಲೆ ಜಪಾನ್‌ ಹವಾಮಾನ ಇಲಾಖೆ ಭಾರಿ ಸುಮಾನಿ ಎಚ್ಚರಿಕೆ ನೀಡಿದೆ. ಈಶಾನ್ಯ […]

Continue Reading

ಆದಾಯ ಮಿತಿ 8 ಲಕ್ಷ ರೂ ದಾಟಿದರೆ ಹಿಂದುಳಿದ ಮೀಸಲು ಅಲಭ್ಯ: ಹೈಕೋರ್ಟ್‌

ಬೆಂಗಳೂರು: ಪ್ರವರ್ಗ 2-ಎ (ಹಿಂದುಳಿದ ವರ್ಗ) ಅಡಿಯಲ್ಲಿ ಪೋಷಕರ ವಾರ್ಷಿಕ ಆದಾಯ ನಿಗದಿತ ಮಿತಿ ದಾಟಿದ್ದರೆ ಅಭ್ಯರ್ಥಿಯು ಕೆನೆ ಪದರ ವ್ಯಾಪ್ತಿಗೆ ಒಳಪಡುತ್ತಾರೆ. ಹೀಗಾಗಿ ಅವರು ಮೀಸಲಾತಿ ಪತ್ರ ಪಡೆಯಲು ಅನರ್ಹರಾಗುತ್ತಾರೆ ಎಂದು ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಾತಿ, ಆದಾಯ ಪರಿಶೀಲನಾ ಮೇಲ್ಮನವಿ ಪ್ರಾಧಿಕಾರ ಮತ್ತು ಧಾರವಾಡ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿ ಅಧ್ಯಕ್ಷರು ಸಲ್ಲಿಸಿದ್ದ ರಿಟ್‌ ಮೇಲ್ಮನವಿ ಮತ್ತು ನ್ಯಾಯಾಂಗ ನಿಂದನಾ ಅರ್ಜಿಗಳ (ಡಬ್ಲ್ಯು.ಎ 301/2025 […]

Continue Reading

ಎಲ್ಲಾ ಫೋನ್‌ಗಳಲ್ಲಿ ಸಂಚಾರ್ ಸಾಥಿ ಕಡ್ಡಾಯ: ಈ ಆ್ಯಪ್ ವಿಶೇಷತೆ ಏನು ?

ನವದೆಹಲಿ: ಭಾರತದಲ್ಲಿ ಮಾರಾಟವಾಗುವ ಎಲ್ಲಾ ಹೊಸ ಮೊಬೈಲ್ ಫೋನ್‌ಗಳಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್‌ ಕಡ್ಡಾಯವಾಗಿ ಇನ್‌ಸ್ಟಾಲ್‌ ಮಾಡಬೇಕೆಂದು ದೂರಸಂಪರ್ಕ ಇಲಾಖೆ ಹ್ಯಾಂಡ್‌ಸೆಟ್‌ ತಯಾರಕರಿಗೆ ಸೂಚಿಸಿದೆ. ಆ್ಯಪ್ ಇನ್‌ಸ್ಟಾಲ್ ಮಾಡಲು 90 ದಿನಗಳ ಗಡುವು ನೀಡಲಾಗಿದ್ದು ಅದನ್ನು ಅನ್‌ ಇನ್‌ಸ್ಟಾಲ್ ಮಾಡಲು ಆಯ್ಕೆ ನೀಡಬಾರದು. ಈಗಾಗಲೆ ಬಳಕೆಯಲ್ಲಿರುವ ಮೊಬೈಲ್‌ಗಳಿಗೆ ಸಾಫ್ಟ್‌ವೇರ್ ಅಪ್‌ಡೇಟ್‌ ನೀಡುವಾಗ ಈ ಆ್ಯಪ್ ಲಭ್ಯವಾಗುವಂತೆ ಮಾಡಬೇಕು ಎಂದು ಸೂಚಿಸಿದೆ. ಕೇಂದ್ರ ಸರ್ಕಾರ ಈ ಆದೇಶವನ್ನು ಸ್ಮಾರ್ಟ್‌ಫೋನ್ ತಯಾರಕರಿಗೆ ಖಾಸಗಿಯಾಗಿ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಏನಿದು ಪ್ರಿಲೋಡೆಡ್‌ […]

Continue Reading

ರಾವೂರ ಮಕ್ಕಳಿಂದ ಒಂದು ದಿನದ ಶಾಲಾ ಆಡಳಿತ

ಚಿತ್ತಾಪುರ: ಶಾಲಾ ಆಡಳಿತ ಎಂಬ ವಿಶಿಷ್ಟ ಪ್ರಯೋಗದ ಮೂಲಕ ಮಕ್ಕಳಲ್ಲಿ ಬೋಧನಾ ಸಾಮಾರ್ಥ್ಯ, ಕೌಶಲ್ಯ ತುಂಬುವ ಪ್ರಯತ್ನ ರಾವೂರ ಗ್ರಾಮದ ಸಚ್ಚಿದಾನಂದ ಪ್ರೌಢ ಶಾಲೆಯ ಶಿಕ್ಷಕರ ನೆರವಿನಿಂದ ಮಕ್ಕಳು ಅತ್ಯಂತ ಸಮರ್ಥವಾಗಿ ನಿರ್ವಹಿಸಿದರು. ಈ ಪ್ರಯೋಗದಲ್ಲಿ ಮಕ್ಕಳೆ ಶಿಕ್ಷಕರು, ಶಿಕ್ಷಕರೆ ಮಕ್ಕಳಾಗಿ ಒಂದು ದಿನದ ಮಟ್ಟಿಗೆ ಮಕ್ಕಳೆ ಮುಖ್ಯಗುರುಗಳಾಗಿ, ವರ್ಗಶಿಕ್ಷಕರಾಗಿ, ಶಿಕ್ಷಕರಾಗಿ, ದೈಹಿಕ ಶಿಕ್ಷಕರಾಗಿ ಉತ್ತಮ ರೀತಿಯಲ್ಲಿ ಪಾತ್ರ ನಿಭಾಯಿಸಿ ಶಿಕ್ಷಕರ ಮತ್ತು ಆಡಳಿತ ಮಂಡಳಿಯ ಮೆಚ್ಚುಗೆ ಪಡೆದರು. ಬಣ್ಣ ಬಣ್ಣದ ಸೀರೆಯುಟ್ಟ ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ […]

Continue Reading

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣ: ನಾಳೆ ಮೋದಿಯಿಂದ ಧಾರ್ಮಿಕ ಧ್ವಜಾರೋಹಣ

ಲಕ್ನೋ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿದ್ದ ಭವ್ಯ ರಾಮ ಮಂದಿರದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಈ ಹಿನ್ನೆಲೆ ನಾಳೆ ಧಾರ್ಮಿಕ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಲಿದ್ದಾರೆ. ಮಂಗಳವಾರ ಬೆಳಿಗ್ಗೆ ಸುಮಾರು 11:52 ರಿಂದ 12:35ರ ಶುಭ ಮುಹೂರ್ತದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. 191 ಅಡಿ ಎತ್ತರದ ರಾಮ ಮಂದಿರದ ಮೇಲ್ಭಾಗದಲ್ಲಿ 11 ಅಡಿ ಅಗಲ ಮತ್ತು 22 ಅಡಿ ಉದ್ದದ ತ್ರಿಕೋನಾಕಾರದ ಕೇಸರಿ ಧ್ವಜವನ್ನು ಹಾರಿಸಲಾಗುತ್ತಿದೆ. ದ್ವಜದ ಮೇಲೆ ಸೂರ್ಯವಂಶಿ ಮತ್ತು ತ್ರೇತಾಯುಗದ ಚಿಹ್ನೆಗಳನ್ನು […]

Continue Reading

ಬಿಟ್ಟು ಬಿಡದೆ ಕಾಡಿದ ತಪ್ಪಿತಸ್ಥ ಭಾವನೆ: ಅಶ್ವಿನಿ ಬಳಿ ಕ್ಷಮೆ ಕೇಳಿದ ಗಿಲ್ಲಿ

ಬಿಗ್ ಬಾಸ್​ನಲ್ಲಿ ಅಶ್ವಿನಿ ಗೌಡ vs ಗಿಲ್ಲಿ ಎಂಬಂತಾಗಿದೆ. ಯಾವುದೆ ಟಾಸ್ಕ್ ನೀಡಲಿ, ಮನೆಯಲ್ಲಿ ಯಾವುದಾದರೂ ವಿಷಯ ಚರ್ಚೆ ಆಗುತ್ತಿರಲಿ, ಗಿಲ್ಲಿ ಹಾಗೂ ಅಶ್ವಿನಿ ಮಧ್ಯೆ ಕಿರಿಕ್ ಆಗಿಯೇ ಆಗುತ್ತದೆ. ಇಬ್ಬರು ಎದುರು ಬದುರಾದಾಗ ನಗುತ್ತಾ ಮಾತನಾಡಿದ ದಾಖಲೆಯೆ ಇಲ್ಲ ಎಂದರೂ ತಪ್ಪಾಗಲಾರದು. ಇಬ್ಬರು ಹಿಡಿದ ಹಠ ಬಿಡೋದಿಲ್ಲ. ಹೀಗಿರುವಾಗಲೆ ಗಿಲ್ಲಿ ಅವರು ಅಶ್ವಿನಿ ಬಳಿ ಕ್ಷಮೆ ಕೇಳಿದ್ದಾರೆ. ಇದು ಸಾಕಷ್ಟು ಅಚ್ಚರಿ ಮೂಡಿಸಿದೆ. ಕ್ಯಾಪ್ಟನ್ಸಿ ರೇಸ್​ನಲ್ಲಿ ಅಭಿಷೇಕ್ ಹಾಗೂ ಅಶ್ವಿನಿ ಗೌಡ ಇದ್ದರು. ಇಬ್ಬರೂ ಸರದಿಯಲ್ಲಿ […]

Continue Reading

ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನಿಧನ: ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಸಂತಾಪ

ಸಾಲು ಮರದ ತಿಮ್ಮಕ್ಕ ಇಂದು (ನ.14) ನಿಧನ ಹೊಂದಿದ್ದಾರೆ. ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಾಲುಮರದ ತಿಮ್ಮಕ್ಕ ಇಹಲೋಕ ತ್ಯಜಿಸಿದ್ದಾರೆ. ವೃಕ್ಷಮಾತೆ ತಿಮ್ಮಕ್ಕ ಅವರ ಅಗಲಿಕೆಗೆ ಚಲನಚಿತ್ರ ರಂಗದ ಗಣ್ಯರು ಹಾಗೂ ರಾಜಕೀಯ ರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಆಂಧ್ರ ಡಿಸಿಎಂ ಹಾಗೂ ನಟ ಪವನ್ ಕಲ್ಯಾಣ್ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೃಕ್ಷಮಾತೆಗೆ ಸಂತಾಪ ಸೂಚಿಸಿದ್ದಾರೆ. ಮಕ್ಕಳಿಲ್ಲದ ನೋವನ್ನು ಮರೆತು ತಮ್ಮ ಜೀವಿತಾವಧಿಯಲ್ಲಿ 8,000ಕ್ಕೂ ಅಧಿಕ ಗಿಡಗಳನ್ನು ಬೆಳೆಸಿದ ಸಾಲು ಮರದ ತಿಮ್ಮಕ್ಕ ಅವರಿಗೆ […]

Continue Reading

ಮದುವೆ ಮಂಟಪದಲ್ಲಿ ವರನಿಗೆ ಚಾಕು ಇರಿತ: ಆರೋಪಿಯನ್ನು 2 ಕಿ.ಮೀ ವರೆಗೆ ಬೆನ್ನಟ್ಟಿದ ವೆಡ್ಡಿಂಗ್‌ ಡ್ರೋನ್‌

ಮುಂಬೈ: ಮದುವೆ ಮಂಟಪದಲ್ಲಿ ವರನಿಗೆ ಚಾಕುವಿನಿಂದ ಇರಿದು ಎಸ್ಕೇಪ್‌ ಆಗುತ್ತಿದ್ದ ವ್ಯಕ್ತಿಯನ್ನು ವೆಡ್ಡಿಂಗ್‌ ಡ್ರೋನ್‌ 2 ಕಿ.ಮೀ ವರೆಗೆ ಬೆನ್ನಟ್ಟಿದ ಪ್ರಸಂಗ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಅಮರಾವತಿಯಲ್ಲಿ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ರಾಘೋ ಜಿತೇಂದ್ರ ಬಕ್ಷಿ ಎಂಬಾತ ವೇದಿಕೆಯ ಮೇಲೆ ವರನಿಗೆ ಮೂರು ಬಾರಿ ಇರಿದು ಪರಾರಿಯಾಗಿದ್ದಾನೆ. ವೆಡ್ಡಿಂಗ್‌ ಚಿತ್ರೀಕರಿಸುತ್ತಿದ್ದ ವಿಡಿಯೋಗ್ರಾಫರ್ ತಕ್ಷಣವೇ ಕಾರ್ಯಪ್ರವೃತ್ತನಾಗಿ ತನ್ನ ಡ್ರೋನ್ ಮೂಲಕ ದಾಳಿಕೋರನನ್ನು ಬೆನ್ನಟ್ಟಿ, ದಾಳಿಕೋರ ಮತ್ತು ಇನ್ನೊಬ್ಬ ವ್ಯಕ್ತಿ ಬೈಕ್‌ನಲ್ಲಿ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ ಸುಮಾರು […]

Continue Reading

ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ

ಕಲಬುರಗಿ: ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ ಸಹಯೋಗದೊಂದಿಗೆ ಸೋಮವಾರ ಜರುಗಿದ “ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ”ಯಲ್ಲಿ ಕಾನೂನು ಪಾಲನೆಯ ಪ್ರತಿಜ್ಞೆ ವಿಧಿ ಸ್ವೀಕರಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಚಾರ್ಯ ರವೀಂದ್ರಕುಮಾರ ಸಿ. ಬಟಗೇರಿ, ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ ಪಾಟೀಲ್, ಉಪನ್ಯಾಸಕರಾದ ಅಸ್ಮಾ ಜಬೀನ್, ಸುವರ್ಣಲತಾ ಭಂಡಾರಿ, ಮಲ್ಲಿಕಾರ್ಜುನ ದೊಡ್ಡಮನಿ, ಲಿಂಗರಾಜ ಹಿರೇಗೌಡ, ಪ್ರದಸ ಪ್ರೇಮಾ ಸುರಪುರ, ಅತಿಥಿ ಉಪನ್ಯಾಸಕರಾದ ವೀರೇಶ ಸಾಹು ಗೋಗಿ, ನಾರಾಯಣಸ್ವಾಮಿ, ಅಲಿಯಾ ತಬಸ್ಸುಮ್, ಶಿವಶರಣಪ್ಪ […]

Continue Reading

ಫಿಟ್ಸ್ ಬಂದು ರಸ್ತೆಯಲ್ಲಿ ಒದ್ದಾಡುತ್ತಿದ್ದ ಬಾಲಕನನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಸಚಿವ ಖಂಡ್ರೆ

ಬೀದರ್: ಫಿಟ್ಸ್ ಬಂದು ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಬಾಲಕನನ್ನು ಆಸ್ಪತ್ರೆಗೆ ಸೇರಿಸಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಮಾನವೀಯತೆ ಮೆರೆದಿದ್ದಾರೆ. ಬೀದರ್‌ನ ಹೊರವಲಯದ ಶಾಪೂರ್ ಗೇಟ್ ಬಳಿ ಈ ಘಟನೆ ನಡೆದಿದೆ. ಸಚಿವ ಈಶ್ವರ್ ಖಂಡ್ರೆ ಹೈದರಾಬಾದ್ ಏರ್‌ಪೋರ್ಟ್‌ಗೆ ಹೋಗುತ್ತಿದ್ದರು, ಈ ವೇಳೆ ರಸ್ತೆಯಲ್ಲಿ ಫಿಟ್ಸ್ ಬಂದು ಬಾಲಕನೋರ್ವ ಸೈಕಲ್ ಮೇಲಿಂದ ಬಿದ್ದು ಒದ್ದಾಡುತ್ತಿದ್ದ. ಇದನ್ನು ಗಮನಿಸಿದ ಸಚಿವರು ಕಾರು ನಿಲ್ಲಿಸಿ, ಬಾಲಕನನ್ನು ಕೂಡಲೇ ಆಟೋದಲ್ಲಿ ಬ್ರೀಮ್ಸ್ ಆಸ್ಪತ್ರೆಗೆ ಕಳಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ […]

Continue Reading