ಕೌನ್ ಬನೇಗಾ ಕರೋಡ್​ಪತಿಯಲ್ಲಿ 50 ಲಕ್ಷ ಗೆದ್ದ ಬಾಗಲಕೋಟೆಯ ಬಡ ಯುವಕ

ಜ್ಞಾನವೇ ಎಲ್ಲದಕ್ಕಿಂತ ಮಿಗಿಲಾದ ಐಶ್ವರ್ಯಾ ಎಂಬ ಮಾತಿದೆ. ಕೇವಲ ಜ್ಞಾನದಿಂದಲೇ ಬಡ ಕಾರ್ಮಿಕನ ಮಗನೊಬ್ಬ ಈಗ ಬರೋಬ್ಬರಿ 50 ಲಕ್ಷ ರೂ ಗೆದ್ದಿದ್ದಾನೆ. ತನ್ನ ಕುಟುಂಬಕ್ಕೆ ಆಧಾರವಾಗಿದ್ದಾನೆ. ಬಡ ವೆಲ್ಡರ್ ಕಾರ್ಮಿಕನ ಮಗನೊಬ್ಬ ಭಾರತದ ಜನಪ್ರಿಯ ಟಿವಿ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್​ಪತಿಯಲ್ಲಿ ಬರೋಬ್ಬರಿ 50 ಲಕ್ಷ ರೂ ಗೆದ್ದಿದ್ದಾನೆ. ಅಷ್ಟಕ್ಕೂ ಈ ಯುವಕ ಬೇರೆ ಯಾವುದೋ ರಾಜ್ಯದವನಲ್ಲ. ನಮ್ಮದೆ ಕರ್ನಾಟಕದ ಬಾಗಲಕೋಟೆಯವನು. ಬಾಗಲಕೋಟೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದ ಯುವಕ ರಮ್​ಜಾನ್ ಮಲಿಕ್ […]

Continue Reading

ಕೇವಲ 1.50 ಪೈಸೆಗಾಗಿ ಗ್ಯಾಸ್‌ ಏಜೆನ್ಸಿ ವಿರುದ್ಧ 7 ವರ್ಷ ಹೋರಾಟ ಮಾಡಿ ಯಶಸ್ಸು ಕಂಡ ಗ್ರಾಹಕ

ಭೋಪಾಲ್‌: ಈಗಿನ ಬ್ಯುಸಿ ಜಗತ್ತಿನಲ್ಲಿ ಒಂದೂವರೆ ರೂಪಾಯಿ ಬಗ್ಗೆ ಯಾರೂ ಗಮನ ನೀಡೋದೇ ಇಲ್ಲ. ಹಾಗೆನಾದರೂ ಬಸ್‌ನಲ್ಲಿ, ಟ್ರೇನ್‌ನಲ್ಲಿ ಟಿಕೆಟ್‌ಕೊಳ್ಳುವಾಗ ಒಂದೂವರೆ ರೂಪಾಯಿ ಹಣ ಚಿಲ್ಲರೆ ಇಲ್ಲದಿದ್ದಾಗ ರೌಂಡ್‌ಆಫ್‌ ಕೂಡ ಮಾಡ್ತಾರೆ. ಆದರೆ ಮಧ್ಯಪ್ರದೇಶದ ಸಾಗರ್‌ ಜಿಲ್ಲೆಯ ಚಕ್ರೇಶ್‌ ಜೈನ್‌ ಎನ್ನುವ ವ್ಯಕ್ತಿ ಕೇವಲ 1.50 ರೂಪಾಯಿಗಾಗಿ ಬರೋಬ್ಬರಿ 7 ವರ್ಷಗಳ ಕಾಲ ಗ್ಯಾಸ್‌ ಏಜೆನ್ಸಿ ವಿರುದ್ಧ ಹೋರಾಟ ಮಾಡಿದ್ದಾರೆ. ಇದು ಸಣ್ಣ ಅಮೌಂಟ್‌ ಆಗಿರಬಹುದು. ಆದರೆ ಗ್ರಾಹಕರ ಹಕ್ಕುಗಳ ವಿಚಾರದಲ್ಲಿ ಇದು ದೊಡ್ಡ ಗೆಲುವು ಎಂದಿದ್ದಾರೆ. […]

Continue Reading

ಇನ್ಮುಂದೆ ಡಾಕ್ಯುಮೆಂಟ್ ಸ್ಕ್ಯಾನ್ ವ್ಯಾಟ್ಸಾಪ್‌ನಲ್ಲಿ ಮಾಡಿ, ಹೊಸ ಫೀಚರ್

ನವದೆಹಲಿ: ಡಾಕ್ಯುಮೆಂಟ್ ಸ್ಕ್ಯಾನ್ ಮಾಡಲು ಹಲವರು ಬೇರೆ ಬೇರೆ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿರುತ್ತಾರೆ. ಅಥವಾ ಅಗತ್ಯವಿದ್ದಾಗ ಡೌನ್ಲೋಡ್ ಮಾಡಿ ಬಳಿಕ ಡಿಲೀಟ್ ಮಾಡುತ್ತಾರೆ. ಬಳಕೆ ಮಾಡದ ಹಲವಾರು ಆಯಪ್‌ಗಳಿಂದ ಫೋನ್ ಸ್ಟೋರೇಜ್ ತುಂಬಿಹೋಗುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆಗೆ ಈಗ ವ್ಯಾಟ್ಸಾಪ್ ಉತ್ತರ ನೀಡಿದೆ. ವ್ಯಾಟ್ಸಾಪ್ ತನ್ನ ಬಳಕೆದಾರರಿಗೆ ಮತ್ತೊಂದು ಫೀಚರ್ ಪರಿಚಯಿಸಿದೆ. ಡಾಕ್ಯುಮೆಂಟ್ ಸ್ಕ್ಯಾನ್ ಫೀಚರ್. ಇನ್ಮುಂದೆ ಗ್ರಾಹಕರು ಬೇರೆ ಬೇರೆ ಆ್ಯಪ್‌ ಬಳಸುವ ಅಗತ್ಯವಿಲ್ಲ. ವ್ಯಾಟ್ಸಾಪ್ ಮೂಲಕವೇ ಎಲ್ಲವೂ ಸಾಧ್ಯ. ವ್ಯಾಟ್ಸಾಪ್ ಹೊಸ ಅಪ್‌ಡೇಟ್ […]

Continue Reading

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಆಸ್ಪತ್ರೆಯ ಮಾಹಿತಿ

ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಇಂದು ಉದ್ಘಾಟನೆಗೊಳ್ಳಲಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಆಸ್ಪತ್ರೆಯ ಒಂದಷ್ಟು ಮಾಹಿತಿ. ಕಲ್ಯಾಣ ಕರ್ನಾಟಕದ ಕೇಂದ್ರ ಕಲಬುರಗಿಯಲ್ಲಿ ಕೆಕೆಆರ್’ಡಿಬಿಯ 302 ಕೋಟಿ ರೂ ಸೇರಿದಂತೆ ಸರ್ಕಾರದ ವಿಶೇಷ ಅನುದಾನ ಸೇರಿ ಒಟ್ಟು 327.17 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ 371 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಆಸ್ಪತ್ರೆ ಕಲಬುರಗಿ ಶಾಖಾ ಆಸ್ಪತ್ರೆಯ ಲೋಕಾರ್ಪಣೆಗೊಳ್ಳಲಿದೆ. ಖಾಸಗಿ ಕಾರ್ಪೊರೇಟ್ ಆಸ್ಪತ್ರೆ ಮೀರಿಸುವ ಗುಣಮಟ್ಟದ ಸೇವೆ ಸಾರ್ವಜನಿಕರಿಗೆ ಲಭ್ಯವಿದೆ, […]

Continue Reading

ಯಶಸ್ವಿನಿ ಯೋಜನೆ: 5 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ, ಹೊಸ ಸದಸ್ಯರ ನೊಂದಣಿ ಪ್ರಾರಂಭ

ಬೆಂಗಳೂರು: ಪ್ರಸಕ್ತ ಸಾಲಿನ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಜಾರಿಗೊಳಿಸಲು ಮತ್ತು ಈ ಯೋಜನೆಯಡಿ ಹೊಸ ಸದಸ್ಯರ ನೊಂದಣೆಗೆ ರಾಜ್ಯ ಸರಕಾರದಿಂದ ಹೊಸ ಆದೇಶ ಪ್ರಕಟಿಸಲಾಗಿದೆ. ಯಶಸ್ವಿನಿ ಯೋಜನೆಯು ಸಹಕಾರಿ ಸಂಘಗಳ ಸದಸ್ಯರ ಅನುಕೂಲಕ್ಕಾಗಿ ಸರಕಾರವು ಜಾರಿಗೊಳಿಸಿರುವ ಪ್ರತಿಷ್ಠಿತ ವಿಶಿಷ್ಟ ಯೋಜನೆಯಾಗಿದೆ, ಈ ಯೋಜನೆಯನ್ನು ಅನುಷ್ಥಾನ ಮಾಡಲು ಈ ವರ್ಷದ ಅಧಿಕೃತ ಮಾರ್ಗಸೂಚಿ ಹೊರಡಿಸಲಾಗಿದೆ. ಯಶಸ್ವಿನಿ ಯೋಜನೆಯಡಿ ಪ್ರಯೋಜನ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು ? ಅರ್ಜಿ ಎಲ್ಲಿ ಸಲ್ಲಿಸಬೇಕು ? ಅರ್ಜಿ ಸಲ್ಲಿಸಲು ಅಗತ್ಯ […]

Continue Reading

ಬಾಟಲ್‌ ನೀರು ತುಂಬಾ ಡೇಂಜರ್‌ ಎಂದ FSSAI

ನವದೆಹಲಿ: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಪ್ಯಾಕೇಜ್‌ ಮಾಡಲಾದ ಕುಡಿಯುವ ಮತ್ತು ಮಿನರಲ್‌ ವಾಟರ್‌ ವಿಭಾಗವನ್ನು ಹೆಚ್ಚಿನ ಅಪಾಯದ ಆಹಾರ ವರ್ಗ ಎಂದು ಪರಿಗಣಿಸಲು ನಿರ್ಧರಿಸಿದೆ ಮತ್ತು ಅದನ್ನು ಕಡ್ಡಾಯ ತಪಾಸಣೆ ಮತ್ತು ಮೂರನೇ ವ್ಯಕ್ತಿಯ ಆಡಿಟ್ ಮಾನದಂಡಗಳಿಗೆ ಒಳಪಡಿಸಿದೆ. ಪ್ಯಾಕ್ ಮಾಡಲಾದ ಕುಡಿಯುವ ಮತ್ತು ಖನಿಜಯುಕ್ತ ನೀರಿನ ಉದ್ಯಮಕ್ಕಾಗಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್‌ನಿಂದ ಪ್ರಮಾಣಿಕರಣ ಪಡೆಯಬೇಕಾದ ಕಡ್ಡಾಯ ಷರತ್ತನ್ನು ತೆಗೆದು ಹಾಕಲು ಸರ್ಕಾರ ತೀರ್ಮಾನ ಮಾಡಿದ ಬೆನ್ನಲ್ಲಿಯೇ FSSAI ಈ […]

Continue Reading

ಪತ್ನಿಗೆ ಚಿನ್ನದ ಸರ ಖರೀದಿಸಿದ ಬೆನ್ನಲ್ಲೇ 8 ಕೋಟಿ ಮನೆಗೆ ಎಂಟ್ರಿ ಮಾಡಿಸಿದ ಅದೃಷ್ಟ ಲಕ್ಷ್ಮಿ

ಅದೃಷ್ಟ ಯಾರಿಗೆ, ಯಾವಾಗ, ಯಾವ ರೂಪದಲ್ಲಿ ಒಲಿದು ಬರುತ್ತದೆ ಎಂಬುದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವದನ್ನು ನೋಡಿ ನಮಗ್ಯಾಕೆ ಇಂತಹ ಅದೃಷ್ಟ ಬರಬಾರದು ಎಂದು ಅಂದುಕೊಂಡಿರುತ್ತೆವೆ. ಆದರೆ ಅದೆಲ್ಲ ಕಾಲದ ಮಹಿಮೆಯಷ್ಟೆ.‌ ಇಂತಹ ಮಹಿಮೆ ಈಗ ಸಿಂಗಾಪೂರ್​ನಲ್ಲಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದೆ. ಈ ಸ್ಟೋರಿ ಓದಿದರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೆ ಇರಲಾರರು. ಭಾರತೀಯ ಮೂಲದ ವ್ಯಕ್ತಿ ತನ್ನ ಹೆಂಡತಿಯ ಮಾತು ಕೇಳಿದ್ದಕ್ಕೆ ಈಗ 8 ಕೋಟಿ ರೂ. ಮೌಲ್ಯದ […]

Continue Reading

ರಾಜ್ಯದ 254 ನಗರ ಕ್ಷೇಮ ಕೇಂದ್ರದಲ್ಲಿ ಮತ್ತು 39 ಬಸ್ ನಿಲ್ದಾಣಗಳಲ್ಲಿ ನಮ್ಮ ಕ್ಲಿನಿಕ್ ಸ್ಥಾಪನೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 254 ನಗರ ಕ್ಷೇಮ ಕೇಂದ್ರಗಳಲ್ಲಿ ನಮ್ಮ ಕ್ಲಿನಿಕ್ ಸ್ಥಾಪನೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಗುರುವಾರ ನಡೆದ ಸಂಪುಟ ಸಭೆಯಲ್ಲಿ 108.36 ಕೋಟಿ ವೆಚ್ಚದಲ್ಲಿ ನಗರ ಆರೋಗ್ಯ ಕ್ಷೇಮ ಕೇಂದ್ರಗಳಲ್ಲಿ 254 ಹಾಗೂ KSRTC ಬಸ್ ನಿಲ್ದಾಣಗಳಲ್ಲಿ 39 ನಮ್ಮ ಕ್ಲಿನಿಕ್ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. 39.37 ಕೋಟಿ ವೆಚ್ಚದಲ್ಲಿ ಉಡುಪಿ ಹಾಗೂ ದಾವಣಗೆರೆ ಜಿಲ್ಲಾ ಆಸ್ಪತ್ರೆಗಳಲ್ಲಿ […]

Continue Reading

ಮಹಿಪಾಲರೆಡ್ಡಿ ನಟನೆಯ ತಮಟೆ ಸಿನಿಮಾ ನಾಳೆ ಬಿಡುಗಡೆ

ಕಲಬುರಗಿ: ಹಿರಿಯ ಚಿತ್ರನಟ ಮದನ್ ಪಟೇಲ್ ಅವರು ನಾಯಕ ನಟರಾಗಿರುವ ಕಾದಂಬರಿ ಆಧಾರಿತ `ತಮಟೆ’ ಸಿನಿಮಾ ನ.29 ರಂದು ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಪ್ರಖ್ಯಾತ ಸಿನಿಮಾ ನಾಯಕ ನಟ ಮಯೂರ್ ಪಟೇಲ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾವನ್ನು ವಂದನಾ ಎಂ ನಿರ್ಮಾಣ ಮಾಡಿದ್ದು, ಸ್ವತಃ ಮದನ್ ಪಟೇಲ್ ಅವರೇ ಸಂಗೀತ ನಿರ್ದೇಶನ ಮಾಡಿದ್ದಾರೆ. ಮೀಡಿಯಾ ಇಂಟರನ್ಯಾಷನಲ್ ಅರ್ಪಿಸುವ ಮತ್ತು ಶ್ರೀ ರೇಣುಕಾ ಯಲ್ಲಮ್ಮ ದೇವಿ ಕ್ರಿಯೇಷನ್ ರವರ `ತಮಟೆ’ ಸಿನಿಮಾವು ರಾಜ್ಯದ ಎಲ್ಲಾ ಜಿಲ್ಲೆಗಳ ಚಿತ್ರಮಂದಿರದಲ್ಲಿ ಬಿಡುಗಡೆ […]

Continue Reading

ಯಾವ ದಾಖಲೆ ಇಲ್ಲದೆ ನಿಮಿಷಗಳಲ್ಲಿ ನೀಡುತ್ತಿದೆ Google Pay ಸಾಲ

ಗೂಗಲ್ ಇಂಡಿಯಾ ಸಣ್ಣ ವ್ಯಾಪಾರಿಗಳಿಗೆ ಸಹಾಯ ಮಾಡಲು Google Pay ಅಪ್ಲಿಕೇಶನ್ ಮೂಲಕ ಸಾಲ ನೀಡುವ ಸೌಲಭ್ಯವನ್ನು ಪ್ರಾರಂಭಿಸಿದೆ. ಭಾರತದಲ್ಲಿನ ವ್ಯಾಪಾರಿಗಳಿಗೆ ಸಾಮಾನ್ಯವಾಗಿ ಸಣ್ಣ ಸಾಲಗಳು ಬೇಕಾಗುತ್ತವೆ ಎಂದು ಗೂಗಲ್ ಇಂಡಿಯಾ ಹೇಳಿದೆ. ಇದರ ಅಡಿಯಲ್ಲಿ, Google Pay ನಿಂದ ವ್ಯಾಪಾರಿಗಳಿಗೆ 15 ಸಾವಿರ ರೂ.ವರೆಗಿನ ಸಣ್ಣ ಸಾಲ ನೀಡಲಾಗುತ್ತಿದೆ. ಈ ಸಾಲಕ್ಕೆ, ಮರುಪಾವತಿ ಮಾಡಬೇಕಾದ ಕನಿಷ್ಠ ಮೊತ್ತವು 111 ರೂ. ಆಗಿರುತ್ತದೆ. ಇದರ ಅಡಿಯಲ್ಲಿ, 1 ಲಕ್ಷದವರೆಗೆ ಸಾಲವನ್ನು ಪಡೆಯಬಹುದು. ಇದನ್ನು 7 ದಿನಗಳಿಂದ 12 […]

Continue Reading