ಅಕೌಂಟ್​ಗೆ ಅಚಾನಕ್​ ದುಡ್ಡು ಬಂದರೆ ಕೂಡಲೆ ಬ್ಯಾಲೆನ್ಸ್​ ಚೆಕ್​ ಮಾಡಬೇಡಿ, ಇದು ಹೊಸ ಸ್ಕ್ಯಾಮ್

ಸುದ್ದಿ ಸಂಗ್ರಹ ವಿಶೇಷ

ಈಗ ಹೊಸ ಹೊಸ ಡಿಟಿಜಲ್​ ಸ್ಕ್ಯಾಮ್​ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಜನರನ್ನು ಮರುಳು ಮಾಡಿ, ಕುಳಿತಲ್ಲಿಯೇ ಅವರಿಗೆ ಟೋಪಿ ಹಾಕಬಹುದು ಎಂದು ತಿಳಿದುಕೊಳ್ಳುವ ದೊಡ್ಡ ಗ್ಯಾಂಗ್​ ಕೆಲಸ ಮಾಡುತ್ತಿದೆ. ಜನರು ಒಂದು ಸ್ಕ್ಯಾಮ್​ ಬಗ್ಗೆ ಹೆಚ್ಚು ಜಾಗೃತರಾಗುತ್ತಿದ್ದಂತೆಯೇ ಮತ್ತೊಂದು ಹೊಸ ಸ್ಕ್ಯಾಮ್​ ತೆರೆದುಕೊಳ್ಳುತ್ತದೆ.

ನಿಮ್ಮ ಅರಿವಿಗೆ ಬಾರದೆ ನಿಮ್ಮ ಬ್ಯಾಂಕ್ ಖಾತೆ ಕ್ಷಣಾರ್ಧದಲ್ಲಿ ಖಾಲಿಯಾಗುತ್ತದೆ. ಇದಾಗಲೇ ಅದೆಷ್ಟೋ ರೀತಿಯ ಸೈಬರ್​ ಕ್ರೈಮ್​, ಡಿಜಿಟಲ್​ ಅರೆಸ್ಟ್​ ಸೇರಿದಂತೆ ಅದೆಷ್ಟು ಬಂದಿವೆಯೋ ಲೆಕ್ಕಕ್ಕಿಲ್ಲ. ಈಗ ಹೊಸ ಸೇರ್ಪಡೆ Jumped deposit scam. ನೀವು ನಿಮ್ಮ ಅಕೌಂಟ್​ಗೆ ಹೆಚ್ಚು ಹಣ ಕ್ರೆಡಿಟ್​ ಆಗಿದೆ ಎನ್ನುವ ಮೆಸೇಜ್​ ಬಂದ ತಕ್ಷಣ ಬ್ಯಾಂಕ್​ ಬ್ಯಾಲೆನ್ಸ್​ ನೋಡಲು ಹೋಗುವುದೇ ಈ ಖದೀಮರಿಗೆ ಇರುವ ಬಂಡವಾಳ.

ಇದು ಹೇಗೆ ಕೆಲಸ ಮಾಡುತ್ತೆ ಎಂದರೆ, ಈ ಖದೀಮರು ಮೊದಲು ನಿಮ್ಮ ಅಕೌಂಟ್’ಗೆ​ ಚಿಕ್ಕ ಮೊತ್ತದ ಹಣ (200, 300) ಹಾಕುತ್ತಾರೆ. ಆಗ ನಿಮಗೆ ಮೆಸೇಜ್​ ಬಂದ ತಕ್ಷಣ, ನೀವು ಯುಪಿಐ, ಫೋನ್​ಪೇ, ಪೇಟಿಎಂ ಇವುಗಳ ಮೂಲಕ ಚೆಕ್​ ಮಾಡುತ್ತಿರಿ ಎನ್ನುವದು ಅವರಿಗೆ ಗೊತ್ತಿರುತ್ತೆ. ನೀವು ಬ್ಯಾಲೆನ್ಸ್​ ಚೆಕ್​ ಮಾಡಿದ್ದು ಗೊತ್ತಾದ ತಕ್ಷಣ, ನಿಮಗೊಂದು ಮೆಸೇಜ್​ ಬರುತ್ತದೆ. ಬೈ ಮಿಸ್ಟೆಕ್​ ನಿಮ್ಮ ಅಕೌಂಟ್​ಗೆ ದುಡ್ಡು ಹಾಕಿಬಿಟ್ಟಿದ್ದೆನೆ. ದಯವಿಟ್ಟು ಅದನ್ನು ರಿಟರ್ನ್​ ಮಾಡಿ ಎಂದು ಮೆಸೇಜ್ ಬರುತ್ತೆ.

ಇಷ್ಟೇ ಆಗಿದ್ದರೆ ಪರವಾಗಿಲ್ಲ. ಆದರೆ ನಿಮ್ಮನ್ನು ಮಾತಿನಲ್ಲಿಯೇ ಮರಳು ಮಾಡುವ ಅವರು, ನಾನು ಅಮೌಂಟ್​ ಕಳಿಸುತ್ತೆನೆ. ಅದನ್ನೆ ರಿಟರ್ನ್​ ಮಾಡಿ ಎನ್ನುತ್ತಾರೆ. ನೀವು ಅಯ್ಯೋ ಪಾಪ ಯಾರೋ ತಪ್ಪಾಗಿ ಕಳುಹಿಸಿದ್ದಾರೆ ಎಂದುಕೊಂಡು ಅವರು ಕಳಿಸಿದ ಕಲೆಕ್ಷನ್​ ರಿಕ್ವೆಸ್ಟ್​ ಅನ್ನು ಸರಿಯಾಗಿ ನೋಡದೆ ಪೇ ಮಾಡಿಬಿಡುತ್ತಿರಾ. ಅಲ್ಲೇ ಮೋಸ ಹೋಗುವುದು. ಅವರು ನಿಮಗೆ 200 ಕಳುಹಿಸಿದ್ದರೆ, ಬರೆಯುವಾಗಿ 2000 ಎಂದು ಬರೆದಿರುತ್ತಾರೆ. ಅದನ್ನು ನೀವು ಗಮನಿಸುವುದೇ ಇಲ್ಲ. ಮಾತಿನಲ್ಲಿ ಮರುಳು ಮಾಡುವ ಅವರು ನಿಮ್ಮನ್ನು ಸುಲಭವಾಗಿ ವಂಚಿಸುತ್ತಾರೆ. ಇಷ್ಟೆ ಅಲ್ಲದೆ ಅವರು ಕಲೆಕ್ಷನ್​ ರಿಕ್ವೆಸ್ಟ್​ ಕಳುಹಿಸಿದ ನಂತರ ಒಂದು OTP ಬರುತ್ತದೆ. ಅದನ್ನು ಹೇಳಲು ನಿಮಗೆ ಹೇಳುತ್ತಾರೆ. ಆಗ ನೀವು ಅಯ್ಯೋ ಪಾಪ ಎಂದುಕೊಂಡು ಆ ಓಟಿಪಿ ಹೇಳಿದರೆ, ನಿಮ್ಮ ಬ್ಯಾಂಕ್​ನಲ್ಲಿ ಇರುವ ಎಲ್ಲಾ ಹಣ ಗುಳುಂ ಆಗಿಬಿಡುತ್ತದೆ.

ಈ ರೀತಿ ಮಾಡುವುದನ್ನು Jumped deposit scam ಎಂದು ಹೆಸರಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿಮಗೆ ಯಾವುದೋ ದುಡ್ಡು ಕ್ರೆಡಿಟ್​ ಆಗಿರುವ ಮೆಸೇಜ್​ ಬಂದರೆ, ಕೂಡಲೇ ಬ್ಯಾಂಕ್​ ಬ್ಯಾಲೆನ್ಸ್​ ಚೆಕ್​ ಮಾಡಲು ಹೋಗಬೇಡಿ. 15-20 ನಿಮಿಷದ ಒಳಗೆ ಆ ಖದೀಮರು ಕಳುಹಿಸಿರುವ ಓಟಿಪಿ ಅವಧಿ ಮುಗಿಯುತ್ತದೆ. ನೀವು ಬ್ಯಾಲೆನ್ಸ್​ ಚೆಕ್​ ಮಾಡಲು ಹೋದರೆ, ಸುಲಭವಾಗಿ ನಿಮ್ಮನ್ನು ವಂಚಿಸಿಬಿಡುತ್ತಾರೆ. ಒಂದು ವೇಳೆ ಬ್ಯಾಲೆನ್ಸ್​ ಚೆಕ್​ ಮಾಡೇ ಬಿಟ್ಟಿರಿ ಎಂದುಕೊಳ್ಳಿ. ಆಗ ಅವರು ಕಳುಹಿಸುವ ಕಲೆಕ್ಷನ್​ ರಿಕ್ವೆಸ್ಟ್​ನಲ್ಲಿ ಇರುವ ಹಣ ಚೆನ್ನಾಗಿ ನೋಡಿ, ಓಟಿಪಿ ಯಾವುದೇ ಕಾರಣಕ್ಕೂ ಹೇಳಲೇಬೇಡಿ. ಮಾತಿನಲ್ಲಿ ಅವರು ಮರಳು ಮಾಡಲು ಶುರು ಮಾಡಿದರೆ, ಅವರಿಗೆ ರಿಪ್ಲೈ ಮಾಡಲು ಹೋಗಲೇಬೇಡಿ. ಇದಾಗಲೇ ಹಲವು ಸುಶಿಕ್ಷಿತರೆ ಈ ವಂಚನೆಗೆ ಬಲಿಯಾಗಿದ್ದಾರೆ. ಒಮ್ಮೆ ಹಣ ಹೋದರೆ ಮರಳಿ ಬರುವುದು ಎಷ್ಟು ಕಷ್ಟ ಎನ್ನುವುದು ನಿಮಗೆ ಗೊತ್ತೆ ಇದೆ.

Leave a Reply

Your email address will not be published. Required fields are marked *