ಮುಖಾಮುಖಿ ಡಿಕ್ಕಿಯಾಗಿ ಧಗಧಗನೆ ಹೊತ್ತಿಯುರಿದ ಖಾಸಗಿ ಬಸ್‌, ಕಾರು: 6 ಮಂದಿ ಸಜೀವ ದಹನ

ಸುದ್ದಿ ಸಂಗ್ರಹ ಯಾದಗಿರಿಮುಖಾಮುಖಿ ಡಿಕ್ಕಿಯಾಗಿ ಕಾರು ಮತ್ತು ಖಾಸಗಿ ಬಸ್ ಹೊತ್ತಿಯುರಿದಿದ್ದು, 6 ಮಂದಿ ಸಜೀವ ದಹನವಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಬಳಿ ನಡೆದಿದೆ. ಕಾರಿನಲ್ಲಿದ್ದ ಆರು ಜನ ಬೆಂಕಿಯಲ್ಲಿ ಸುಟ್ಟುಹೋಗಿದ್ದಾರೆ ಎನ್ನಲಾಗಿದೆ. ಕಾರು ಯಾದಗಿರಿಯಿಂದ ರಾಯಚೂರ ಕಡೆ ಹೊರಟಿತ್ತು. ಇದೆ ವೇಳೆ ಖಾಸಗಿ ಬಸ್ ಬೆಂಗಳೂರಿನಿಂದ ಕಲಬುರಗಿ ಕಡೆ ಬರುತ್ತಿತ್ತು. ಆವಾಗ ಎರಡು ವಾಹನ ಮುಖಾಮುಖಿ ಡಿಕ್ಕಿಯಾಗಿದ್ದು, ಕಾರು ಹಾಗೂ ಬಸ್ಸಿಗೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. […]

Continue Reading

ರಾಜ್ಯದಲ್ಲೇ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ ದಾಖಲು: ಆರೆಂಜ್ ಅಲರ್ಟ್ ಘೋಷಣೆ

ಸುದ್ದಿ ಸಂಗ್ರಹ ಕಲಬುರಗಿ ಬುಧವಾರ ರಾಜ್ಯದಲ್ಲಿಯೆ ಅತಿ ಹೆಚ್ಚು ಉಷ್ಣಾಂಶ ಕಲಬುರಗಿ ಜಿಲ್ಲೆಯಲ್ಲಿ ದಾಖಲಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ತಾಪಮಾನ ತೀವ್ರ ಏರಿಕೆಯಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕಲಬುರಗಿ ತಾಲೂಕಿನ ಔರಾದ್‌ನಲ್ಲಿ ಗರಿಷ್ಠ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ, ಚಿಂಚೋಳಿ ಹಾಗೂ ಅಫಜಲಪುರ ತಾಲೂಕುಗಳಲ್ಲಿ ತಲಾ 44.03 ಡಿಗ್ರಿ ಸೆಲ್ಸಿಯಸ್, ಆಳಂದ ತಾಲೂಕಿನಲ್ಲಿ 44.01 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ವಿಶೇಷವಾಗಿ ಕಲಬುರಗಿ ತಾಲೂಕಿನ ಔರಾದ್ ಗ್ರಾಮದಲ್ಲಿ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿರುವುದು […]

Continue Reading

ಕುಡುಕ ಗಂಡನ ಬಿಟ್ಟು ಪ್ರೀತಿಸಿದವನ ಜೊತೆ ಹೋದ ಮಹಿಳೆಗೆ ವಿಷ ಕುಡಿಸಿ ಕೊಂದ ಪೋಷಕರು

ಸುದ್ದಿ ಸಂಗ್ರಹ ಚಿಕ್ಕೋಡಿ ಹುಕ್ಕೇರಿ ತಾಲೂಕಿನ ನದಿಗುಡಿಕೇತರ ಗ್ರಾಮದಲ್ಲಿ ಮರ್ಯಾದಾ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರೀತಿಸಿದವನ ಜೊತೆ ಓಡಿ ಹೋಗಿದ್ದ ಮಹಿಳೆಯನ್ನು ಪೋಷಕರು ಕರೆತಂದು ವಿಷ ಕುಡಿಸಿ ಹತ್ಯೆ ಮಾಡಿದ್ದಾರೆ. ಬಳಿಕ ಸಾಕ್ಷಿ ನಾಶಕ್ಕಾಗಿ ಶವವನ್ನು ಸುಟ್ಟು ಹಾಕಿದ್ದಾರೆ. ಕೊಲೆಯಾದ ಮಹಿಳೆಯನ್ನು ಗ್ರಾಮದ ಸತ್ತೆವ್ವಾ ಹೆಳವರ್ ಎಂದು ಗುರುತಿಸಲಾಗಿದೆ. ಈಕೆ ಇದೆ ಗ್ರಾಮದ ಕೃಷ್ಣಾ ಪಾಟೀಲ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ಮನೆಯಲ್ಲಿ ಗೊತ್ತಾಗಿ ರಾಯಬಾಗ ತಾಲೂಕಿನ ಹನಬರಟ್ಟಿ ಗ್ರಾಮದ ಸಂತೋಷ ಹೇಳವಿ ಎಂಬಾತನ ಜೊತೆ […]

Continue Reading

ಮಂತ್ರಾಲಯ ರಾಯರ ಮಠಕ್ಕೆ ಮಂಜೂರಾದ ಜಾಗದ ಸರ್ವೆಗೆ ಭಾರಿ ವಿರೋಧ: ಹಲವರು ವಶಕ್ಕೆ

ಸುದ್ದಿ ಸಂಗ್ರಹ ರಾಯಚೂರು ಬಿಚ್ಚಾಲಿ ಗ್ರಾಮದಲ್ಲಿನ ರಾಘವೇಂದ್ರ ಸ್ವಾಮಿಗಳ ಏಕಶಿಲಾ ವೃಂದಾವನದ ಪಕ್ಕದ ಭೂಮಿ ವಿವಾದ ಹಿನ್ನೆಲೆ ಅಧಿಕಾರಿಗಳು ಸರ್ವೆ ನಡೆಸಿದ್ದಾರೆ. ಈ ವೇಳೆ ಸರ್ವೆಗೆ ವಿರೋಧಿಸಿ ಹೋರಾಟ ನಡೆಸಿದ ಗ್ರಾಮಸ್ಥರು, ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನ್ಯಾಯಾಲಯದ ಸೂಚನೆಯಂತೆ ಗ್ರಾಮದ 2 ಎಕರೆ 33 ಗುಂಟೆ ಜಾಗದ ಸರ್ವೆಗೆ ಬಂದ ಅಧಿಕಾರಿಗಳಿಗೆ ಗ್ರಾಮಸ್ಥರು, ಅರ್ಚಕರು, ಸಾಗುವಳಿ ಮಾಡುತ್ತಿರುವ ರೈತರು ವಿರೋಧ ವ್ಯಕ್ತಪಡಿಸಿ ಹೋರಾಟ ಮಾಡಿದರು. ಮಂತ್ರಾಲಯ ಮಠ ರಾಘವೇಂದ್ರ ಸ್ವಾಮಿಗಳ ಚಾರಿತ್ರಿಕ ಸ್ಥಳಗಳ ಅಭಿವೃದ್ಧಿಗಾಗಿ ಜಮೀನು […]

Continue Reading

ಪತ್ರಕರ್ತರ ಸಮ್ಮೇಳನ: ಅರುಣ್ ಬಡಿಗೇರ್‌ಗೆ ಅತ್ಯುತ್ತಮ ಆ್ಯಂಕರ್ ಪ್ರಶಸ್ತಿ ಪ್ರದಾನ

ಸುದ್ದಿ ಸಂಗ್ರಹ ಬೀದರ್ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 40ನೇ ರಾಜ್ಯ ಮಟ್ಟದ ಕಾರ್ಯನಿರತ ಪತ್ರಕರ್ತರ ಸಮ್ಮೇಳನದಲ್ಲಿ ಪಬ್ಲಿಕ್ ಟಿವಿಯ ಹಿರಿಯ ನಿರೂಪಕ ಅರುಣ್ ಸಿ ಬಡಿಗೇರ್‌ ಅವರಿಗೆ ವಾರ್ಷಿಕ ಅತ್ಯುತ್ತಮ ಆ್ಯಂಕರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೀದರ್ ನಗರದ ಝೀರಾ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಪತ್ರಕರ್ತರ ಸಮ್ಮೇಳನದಲ್ಲಿ ಸ್ಪೀಕರ್ ಯುಟಿ ಖಾದರ್, ವಿರೋಧ ಪಕ್ಷದ ನಾಯಕ ಆರ್ ಆಶೋಕ್, ಸಚಿವ ಈಶ್ವರ್ ಖಂಡ್ರೆ ಪ್ರಶಸ್ತಿ ನೀಡಿ ಗೌರವಿಸಿದರು. ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅರುಣ್‌ ಬಡಿಗೇರ್‌, […]

Continue Reading

ನಮ್ಮ ಸರ್ಕಾರದ ಪರವಾಗಿ ಬರೆಯಿರಿ ಅಂತ ಈವರೆಗೂ ನಾನು ಯಾರನ್ನೂ ಕೇಳಿಲ್ಲ‌: ಸಿಎಂ

ಸುದ್ದಿ ಸಂಗ್ರಹ ಬೀದರ್ ನಮ್ಮ ಸರ್ಕಾರದ ಪರವಾಗಿ ಬರೆಯಿರಿ ಅಂತ ನಾನು ಯಾವತ್ತೂ ಫೋನ್ ಮಾಡಿಲ್ಲ. ಸಾಧ್ಯವಾದಷ್ಟು ವಸ್ತುನಿಷ್ಠೆ, ಸತ್ಯವನ್ನು ಜನರ ಮುಂದೆ ಇಡುವ ಕೆಲಸ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಬೀದರ್‌ನಲ್ಲಿ ನಡೆದ 40ನೇ ರಾಜ್ಯಮಟ್ಟದ ಕಾರ್ಯನಿರತ ಪತ್ರಕರ್ತ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಮಂತ್ರಿಯಾಗಿ 40 ವರ್ಷ ಆಯ್ತು. ನಮ್ಮ ಸರ್ಕಾರದ ಪರವಾಗಿ ಬರೆಯಿರಿ ಎಂದು ಇವತ್ತಿನವರೆಗೂ ನಾನು ಯಾರನ್ನೂ ಕೇಳಿಲ್ಲ‌. ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದಿವಾ ಎಂದು […]

Continue Reading

ಏ.11ರಂದು ಬೀದರ್, ಕಲಬುರಗಿಗೆ ಸಿಎಂ ಸಿದ್ದರಾಮಯ್ಯ ಪ್ರವಾಸ

ಸುದ್ದಿ ಸಂಗ್ರಹ ಬೀದರ್/ಕಲಬುರಗಿ ಏ.11ರಂದು ಸಿಎಂ ಸಿದ್ದರಾಮಯ್ಯ ಅವರು ಬೀದರ್ ಹಾಗೂ ಕಲಬುರಗಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಏ.11ರಂದು ಬೀದರ್‌ನಲ್ಲಿ ನಡೆಯಲಿರುವ 40ನೇ ಪತ್ರಕರ್ತರ ಸಮ್ಮೇಳನದಲ್ಲಿ ಭಾಗಿಯಾಗಿ ಉದ್ಘಾಟನೆ ಮಾಡಲಿದ್ದಾರೆ. ನಂತರ ಬೀದರ್‌ನಿಂದ ಕಲಬುರಗಿಗೆ ತೆರಳಲಿದ್ದಾರೆ. ಈ ವೇಳೆ ಕಲಬುರಗಿಯ ಚಿತ್ತಾಪುರದಲ್ಲಿ ನೂತನವಾಗಿ ನಿರ್ಮಿಸಿರುವ ಭೋಜಲಿಂಗೇಶ್ವರರ ದೇವಸ್ಥಾನವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ಸಂಜೆ 5 ಗಂಟೆಗೆ ಕೋಡಿ ಮಹಾಸಿದ್ದೇಶ್ವರ ಮಠಕ್ಕೆ ಭೇಟಿ ನೀಡಲಿದ್ದಾರೆ. ನಂತರ ರಾತ್ರಿ ಕಲಬುರಗಿಯಿಂದ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

Continue Reading

ಬಗೆದಷ್ಟು ಬಯಲಾಗ್ತಿದೆ ಜಿಮ್ ಟ್ರೈನರ್ ಬಂಡವಾಳ: 8 ರಿಂದ 10 ಬಾರಿ ಗರ್ಭಪಾತದ ಮಾತ್ರೆ ನೀಡಿದ್ದ ಸಮೀರ್

ಸುದ್ದಿ ಸಂಗ್ರಹ ಹುಬ್ಬಳ್ಳಿಲವ್ ಜಿಹಾದ್ ಪ್ರಕರಣದಲ್ಲಿ ಜಿಮ್ ಟ್ರೈನರ್ ಬಂಡವಾಳ ಬಗೆದಷ್ಟು ಬಯಲಾಗುತ್ತಿದೆ. ಇದೀಗ ಸಂತ್ರಸ್ತೆಗೆ ಸಮೀರ್ 8 ರಿಂದ 10 ಬಾರಿ ಗರ್ಭಪಾತದ ಮಾತ್ರೆ ನೀಡಿದ್ದ ಎಂದು ತಿಳಿದುಬಂದಿದೆ. ಪೊಲೀಸರು ಸಮೀರ್ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಮತ್ತಷ್ಟು ಬಯಲಾಗಿದೆ. ಮೊಬೈಲ್‌ನಲ್ಲಿ ಕೆಲ ರೋಚಕ ವಿಡಿಯೋಗಳು, ಯುವತಿಯರೊಂದಿಗಿನ ವಾಟ್ಸಪ್ ಚಾಟ್‌ಗಳು ಪತ್ತೆಯಾಗಿದೆ. ಮೊಬೈಲ್‌ನಲ್ಲಿ ಸಂತಸ್ತೆ ಗರ್ಭಪಾತದ ಮಾತ್ರೆ ತೆಗೆದುಕೊಳ್ಳುತ್ತಿರುವ ವಿಡಿಯೋ ಕೂಡ ಸಿಕ್ಕಿವೆ. ಸಮೀರ್ ಪ್ರತಿ ಸಾರಿ ಲೈಂಗಿಕ ದೌರ್ಜನ್ಯ ಎಸಗಿದ ಬಳಿಕ ಗರ್ಭಪಾತ […]

Continue Reading

ಹನುಮ ಜಯಂತಿ: ಅಂಜನಾದ್ರಿಗೆ ಆಗಮಿಸಿ ಮಾಲೆ ವಿಸರ್ಜಿಸಿದ ಭಕ್ತರು

ಸುದ್ದಿ ಸಂಗ್ರಹ ಕೊಪ್ಪಳ ಹನುಮ ಜಯಂತಿ ಹಿನ್ನೆಲೆ ಇಂದು ಅಂಜನಾದ್ರಿಗೆ ಹನುಮ ಮಾಲಾಧಾರಿಗಳು ಆಗಮಿಸಿ ಮಾಲೆಯನ್ನು ವಿಸರ್ಜನೆ ಮಾಡಿದರು. ರಾಮಾಯಣ ಕಾಲದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಜಯಂತಿ ಅಂಗವಾಗಿ ಹನುಮಮಾಲೆಯನ್ನು ಧಾರಣೆ ಮಾಡಿರುವ ನೂರಾರು ಮಾಲಾಧಾರಿಗಳು ಆಗಮಿಸಿ ಮಾಲೆಯನ್ನು ವಿಸರ್ಜನೆ ಮಾಡಿದರು. ಹನುಮ ಜಯಂತಿಯ ಅಂಗವಾಗಿ 11 ದಿನಗಳ ಮುಂಚಿತವಾಗಿಯೇ ಹನುಮಮಾಲೆ ಧಾರಣೆ ಮಾಡಿರುತ್ತಾರೆ. ಮಾಲಾಧಾರಿಗಳು ಕಠಿಣ ವ್ರತ ಕೈಗೊಂಡು ಹನುಮನ ಆರಾಧನೆ ಮಾಡುತ್ತಾರೆ. ಹನುಮ ಜಯಂತಿಯಂದು ಮಾಲಾಧಾರಿಗಳು […]

Continue Reading

ಹೊನ್ನಾಳಿಯಲ್ಲಿ ಸಿನಿಮಿಯ ರೀತಿಯ ದರೋಡೆ: ಕಾರು ಅಡ್ಡಗಟ್ಟಿ 38 ಲಕ್ಷ ರಾಬರಿ

ಸುದ್ದಿ ಸಂಗ್ರಹ ದಾವಣಗೆರೆ ಕಾರು ಅಡ್ಡಗಟ್ಟಿ 38 ಲಕ್ಷ ರೂ. ಹಣ ದೋಚಿದ ಘಟನೆ ಹೊನ್ನಾಳಿ ತಾಲೂಕಿನ ಅರಕೆರೆ ಕಾಲೋನಿಯ ಸಮೀಪದ ನಿರ್ಜನ ಪ್ರದೇಶದಲ್ಲಿ ನಡೆದಿದೆ. ಭದ್ರಾವತಿಯ ಮಾಲತೇಶ್ ಹಣ ಕಳೆದುಕೊಂಡವರು. ಮಾಲತೇಶ್ ಅವರ ಸ್ನೇಹಿತ ಮಾನಚಾರಿ ಜೊತೆ ಹಗರಿಬೊಮ್ಮನಹಳ್ಳಿಯಲ್ಲಿ ತಮ್ಮ ಪೂರ್ವಿಕರ ಜಮೀನು ಮಾರಿ, ಓಮಿನಿ ಕಾರಲ್ಲಿ ಹಣ ತರುತ್ತಿದ್ದರು. 76 ಲಕ್ಷ ರೂ. ಹಣವನ್ನು ಒಂದು ಬ್ಯಾಗಿನಲ್ಲಿ 38 ಲಕ್ಷ ರೂ. ಹಣವನ್ನು ಮತ್ತೊಂದು ಬ್ಯಾಗಿನಲ್ಲಿ ಹಾಗೂ ಜೆಬಿನಲ್ಲಿ ಎರಡು ಲಕ್ಷ ಇಟ್ಟುಕೊಂಡು ಬರುತ್ತಿದ್ದರು. […]

Continue Reading