ನಾಡಿನ ಇತಿಹಾಸ ಸಾರುವ ಚಿಂಚನಸೂರಿನ ಮಹೇಶ್ವರ ದೇವಾಲಯ: ಮುಡಬಿ ಗುಂಡೇರಾವ

ಕಲಬುರಗಿ: ಅಪರೂಪದ ವಾಸ್ತುಶಿಲ್ಪ ಶೈಲಿಯುಳ್ಳ, ಕಲೆ-ಸಾಹಿತ್ಯ, ಸಂಸ್ಕೃತಿ, ಭವ್ಯ ಪರಂಪರೆಯನ್ನು ಸಾರುವ ಚಿಂಚನಸೂರಿನ ಮಹೇಶ್ವರ ದೇವಾಲಯದ ಇತಿಹಾಸ ಅದಮ್ಯ ಹಾಗೂ ಅದ್ಭುತವಾಗಿದೆ. ಎಳು ಊರುಗಳಿಂದ ಕೂಡಿರುವ ಮತ್ತು ನಾಡಿನ ರಕ್ಷಣೆ ಮಾಡಿದ ವೀರ-ಶೂರರ ಇತಿಹಾಸವುಳ್ಳದಾಗಿದೆ. ಇಂತಹ ಸ್ಮಾರಕಗಳ ರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ ಅಭಿಪ್ರಾಯಪಟ್ಟರು. ಚಿಂಚನಸೂರ್‌ನ ಗ್ರಾಮದ ಐತಿಹಾಸಿಕ ಹಾಗೂ ಪ್ರಾಚೀನ ಮಹೇಶ್ವರ ದೇವಾಲಯದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯಾತ್ಮಕ ಸರಣಿ […]

Continue Reading

ಕವಲಗಾ(ಬಿ) ಪಿಡಿಓ ಪ್ರೀತಿರಾಜ್ ಅಮಾನತು

ಕಲಬುರಗಿ: ತಾಲೂಕಿನ ಕವಲಗಾ(ಬಿ) ಗ್ರಾಮದ ಪಂಪ್ ಆಪರೇಟರ್ ಗುರುಸಿದ್ದಯ್ಯ ಸ್ಥಾವರಮಠ ಎಂಬುವವರ ವೇತನ ಬಿಡುಗಡೆ ಮಾಡಲು ಹಾಗೂ ಸೇವೆಗೆ ಮರು ನೇಮಕ ಮಾಡಿಕೊಳ್ಳಲು 17 ಸಾವಿರ ಲಂಚ ಪಡೆದ ಆರೋಪದ ಮೇರೆಗೆ ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ಪಿಡಿಓ ಪ್ರೀತಿರಾಜ್ ಅವರನ್ನು ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಲೋಕಾಯುಕ್ತ ದಾಳಿಯಾಗಿರುವುದರಿಂದ ಕೆಸಿಎಸ್‌ಆ‌ರ್ ನಿಯಮಾವಳಿಗಳ ಅನ್ವಯ ಶಿಸ್ತು ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಸಂಸ್ಥೆಯ ಪೊಲೀಸ್ ಇನ್‌ಸ್ಪೆಕ್ಟರ್ ಅರುಣಕುಮಾ‌ ಮುರಗುಂಡಿ ಅವರು ತಾ.ಪಂ ಇಒ […]

Continue Reading

ಕಲಬುರಗಿ: ಬಾಕಿ ವೇತನ ಪಾವತಿಗೆ 17 ಸಾವಿರ ಲಂಚ, ಲೋಕಾಯುಕ್ತ ಬಲೆಗೆ ಪಿಡಿಒ

ಕಲಬುರಗಿ: ಪಂಪ್ ಆಪರೇಟರ್ ಒಬ್ಬರ ಬಾಕಿ ವೇತನ ಪಾವತಿ ಹಾಗೂ ಮರು ನೇಮಕ ಮಾಡಿಕೊಳ್ಳಲು 17 ಸಾವಿರ ರೂ ಲಂಚದ ಹಣ ಪಡೆಯುತ್ತಿದ್ದ ಆರೋಪದಡಿ ಪಿಡಿಒ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ. . ಕಲಬುರಗಿ ತಾಲೂಕಿನ ಕವಲಗಾ (ಬಿ) ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಪ್ರೀತಿರಾಜ್ ಲಂಚ ಪಡೆದ ಆರೋಪಿ . ಪಂಪ್ ಆಪರೇಟರ್ ಗುರುಸಿದ್ದಯ್ಯ ಅವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ . ಗುರುಸಿದ್ದಯ್ಯ ಅವರ ಆರು ತಿಂಗಳ […]

Continue Reading

ದೇವಸ್ಥಾನ ಕಳ್ಳತನ ಪ್ರಕರಣ: ಆರೋಪಿ ಬಂಧನ,1.80 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ

ಚಿತ್ತಾಪುರ: ಬಹಾರಪೇಠ ತಾಂಡಾ ಹಾಗೂ ಆಲೂರು ಗ್ರಾಮದ ದೇವಸ್ಥಾನ ಕಳ್ಳತನ ಮಾಡಿದ ಆರೋಪಿ ಬಂಧಿಸಿ, 1.80 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿತ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಹಾರಪೇಠ ತಾಂಡಾ ಹಾಗೂ ಆಲೂರು ಗ್ರಾಮದ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಕುರಿತು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿತ್ತು, ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಬೀರಪ್ಪ ಈರಪ್ಪ ಪೂಜಾರಿಯನ್ನು ಗುರುವಾರ ಬಂಧಿಸಿ ಆತನಿಂದ 1,80,500 ಮೌಲ್ಯದ ಬಂಗಾರ, ಬೆಳ್ಳಿ ಆಭರಣ, ನಗದು ಹಣ ಜಪ್ತಿ […]

Continue Reading

ಒಳಮೀಸಲಾತಿ ಜಾರಿ ಮಾಡದೆ ಕಾಲಾಹರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಡಿ.16 ರಂದು ಬೆಳಗಾವಿ ಚಲೋ: ದೀಪಕ್ ಹೊಸ್ಸುರಕರ್

ಚಿತ್ತಾಪುರ: ಸುಪ್ರೀಂಕೋರ್ಟಿನ ತೀರ್ಪು ಬಂದು ನಾಲ್ಕು ತಿಂಗಳಾದರೂ ಒಳಮೀಸಲಾತಿ ಜಾರಿ ಮಾಡದೆ ಕಾಲಾಹರಣದ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಡಿ.16 ರಂದು ಬೆಳಗಾವಿಯಲ್ಲಿ ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶ ನಡೆಸಲು ರಾಜ್ಯ ನಾಯಕರು ನಿರ್ಧರಿಸಿದ್ದಾರೆ. ಹೀಗಾಗಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮಾದಿಗ ಸಮಾಜದ ಮುಖಂಡ ಹಾಗೂ ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ದೀಪಕ್ ಹೊಸ್ಸುರಕರ್ ತಿಳಿಸಿದ್ದಾರೆ. ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, […]

Continue Reading

ಸಂಸ್ಕೃತಿ ಸನ್ಮಾನ್ ಹಾಗೂ ಸೀಗಿ ಸಾಹಿತ್ಯ ಪ್ರಶಸ್ತಿಗೆ ಡಾ.ಸ್ವಾಮಿರಾವ ಕುಲಕರ್ಣಿ, ಮಹಿಪಾಲರೆಡ್ಡಿ ಮುನ್ನೂರ ಆಯ್ಕೆ

ಸೇಡಂ: ಸಂಸ್ಕೃತಿ ಪ್ರಕಾಶನ ಟ್ರಸ್ಟ್ ಕೊಡಮಾಡುವ ಸಂಸ್ಕೃತಿ ಸಮ್ಮಾನ್ ಪ್ರಶಸ್ತಿಗೆ ದಾಸ ಸಾಹಿತ್ಯದ ವಿದ್ವಾಂಸ ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಹಾಗೂ ಸಿಗಿ ಸಾಹಿತ್ಯ ಪ್ರಶಸ್ತಿಗೆ ಕ್ರಿಯಾಶೀಲ ಬರಹಗಾರ, ಲೇಖಕ, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ಆಯ್ಕೆಯಾಗಿದ್ದಾರೆ ಎಂದು ಸಂಸ್ಕೃತಿ ಪ್ರಕಾಶನ ಟ್ರಸ್ಟ್‌ ಅಧ್ಯಕ್ಷ ಪ್ರಭಾಕರ ಜೋಶಿ ತಿಳಿಸಿದ್ದಾರೆ. ಸಂಸ್ಕೃತಿ ಪ್ರಕಾಶನದ 35ನೇ ವಾರ್ಷಿಕೋತ್ಸವದ ಅಂಗವಾಗಿ ಸಂಸ್ಕೃತಿ ಸಮ್ಮಾನ್‌ ಪ್ರಶಸ್ತಿ ನೀಡಲಾಗುತ್ತಿದೆ. ಸಂಸ್ಕೃತಿ ಪ್ರಕಾಶನದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಕೊಡಲಾಗುತ್ತಿರುವ ಸಂಸ್ಕೃತಿ ಸಮ್ಮಾನ್‌ ಪ್ರಶಸ್ತಿಯನ್ನು ಸಾಹಿತ್ಯ – […]

Continue Reading

ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ ಬಳೂಂಡಗಿ ಅವರಿಗೆ ಕಸಾಪದಿಂದ ಸನ್ಮಾನ

ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ ಬಳೂಂಡಗಿ ಹಾಗೂ ರಾಜ್ಯ ಸಮಿತಿಗೆ ಆಯ್ಕೆಯಾದ ಧರ್ಮರಾಜ ಜವಳಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಚಪ್ಪರಬಂದಿ ಅವರು ಸನ್ಮಾನಿಸಿ ಗೌರವಿಸಿದರು.

Continue Reading

ಕಲಬುರಗಿ: ಸನ್ನಡತೆ ಆಧಾರದ ಮೇಲೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 6 ಖೈದಿಗಳು ಬಿಡುಗಡೆ

ಕಲಬುರಗಿ: ಸನ್ನಡತೆ ಆಧಾರದ ಮೇಲೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 6 ಜನ ಖೈದಿಗಳು ಬಿಡುಗಡೆಯಾಗಿದ್ದಾರೆ. ಕಲಬುರಗಿ ಸೆಂಟ್ರಲ್ ಜೈಲಿನಿಂದ ಸಾಬಣ್ಣ ಬನಾರ್, ಖಾಜಾಸಾಬ್, ಶಿವಶಂಕರ, ಬಸವರಾಜ, ರವಿ, ಬೀರಪ್ಪ ಮತ್ತು ಅಬಿದಾ ಬೇಗಂ ಬಿಡುಗಡೆಯಾಗಿದ್ದಾರೆ. ಜೈಲಿನಲ್ಲಿ ಉತ್ತಮ ನಡತೆ ತೋರಿದ ಹಿನ್ನೆಲೆಯಲ್ಲಿ ಕಾರಾಗೃಹ ಇಲಾಖೆ ಅವಧಿ ಪೂರ್ವ ಬಿಡುಗಡೆ ಮಾಡಿದೆ. ಕಾರಾಗೃಹ ಡಿಜಿ ನಿರ್ದೇಶನದ ಮೇರೆಗೆ ಕಲಬುರಗಿ ಜೈಲು ಅಧೀಕ್ಷಕಿ ಆರ್ ಅನಿತಾ ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ.

Continue Reading

ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ ನಾಳೆ ಕಾರ್ತಿಕ ಮಾಸದ ದೀಪೋತ್ಸವ

ಚಿತ್ತಾಪುರ: ರಾಷ್ಟ್ರಕೂಟರ ಕುಲದೇವತೆ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಅರ್ಚಕರ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ನ.29 ರಂದು ಸಂಜೆ 6.30ಕ್ಕೆ ಕಾರ್ತಿಕ ಮಾಸದ ಪ್ರಯುಕ್ತ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಾಗಾವಿ ದೇವಸ್ಥಾನ ಪೂಜಾರಿ ಶಶಿಕುಮಾರ ಎಸ್ ಪೂಜಾರಿ ತಿಳಿಸಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವು ದೇವಸ್ಥಾನದ ಸರ್ವ ಪೂಜಾರಿಗಳು ಸೇರಿಕೊಂಡು ಖರ್ಚು ವೆಚ್ಚಗಳು ಪೂಜಾರಿ ಕಮಿಟಿ ತಂಡದವರೆ ಭರಿಸಿಕೊಳುತ್ತೆವೆ. ನಾಳೆ ಶುಕ್ರವಾರ ಸಂಜೆ 6.30ಕ್ಕೆ ದೀಪೋತ್ಸವ ಜರುಗಲಿದೆ. ಆದ್ದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ […]

Continue Reading

ಸಚಿವ ಪ್ರಿಯಾಂಕ್ ಖರ್ಗೆಯವರ ಜನ್ಮದಿನ ಪ್ರಯುಕ್ತ ರಕ್ತದಾನ ಶಿಬಿರ

ಚಿತ್ತಾಪುರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ/ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರ 46ನೇ ಜನ್ಮದಿನವು ಇದೆ ತಿಂಗಳು 22 ರಂದು ಇರುವ ಪ್ರಯುಕ್ತ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬುಳಕರ ತಿಳಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪ್ರಿಯಾಂಕ್ ಖರ್ಗೆಯವರ ಅಭಿಮಾನಿಗಳು ಸ್ವ-ಇಚ್ಛೆಯಿಂದ ರಕ್ತದಾನ ಮಾಡಲು, ಇಚ್ಛೆಸುವವರು ರಕ್ತದಾನ ಮಾಡುವ ಮೂಲಕ ರಕ್ತದ ಅವಶ್ಯಕತೆ ಇರುವವರಿಗೆ ನೇರವಾಗುವ ಮೂಲಕ ಜೀವ ಉಳಿಸುವ ಕೆಲಸಕ್ಕೆ ಮುಂದಾಗಬೇಕ ಎಂದು ಕೊರಿದ್ದಾರೆ. ಚಿತ್ತಾಪುರ […]

Continue Reading