ಗ್ರಂಥಾಲಯಗಳು ಜೀವಂತ ದೇವಾಲಯಗಳು

ಕಲಬುರಗಿ: ಜ್ಞಾನಕ್ಕಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ. ಇದು ಯಾರಿಂದಲೂ ಕಳ್ಳತನ ಮಾಡಲಾಗದ ಸಂಪತ್ತಾಗಿದೆ. ಇಂತಹ ಅಮೂಲ್ಯವಾದ ಸಂಪತ್ತನ್ನು ನೀಡುವ ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯ ಜೀವಂತ ದೇವಾಲಯ ಮತ್ತು ಬದುಕನ್ನು ಸುಂದರಗೊಳಿಸುವ ಸಾಧನಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಅಭಿಮತಪಟ್ಟರು. ಸುಂಟನೂರ ಗ್ರಾಮದ ಅರಿವು ಕೇಂದ್ರವಾದ ಸಾರ್ವಜನಿಕ ಗ್ರಂಥಾಲಯದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ರಾಷ್ಟ ಗ್ರಂಥಾಲಯ ಸಪ್ತಾಹ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ದೆಸೆಯಿಂದಲೇ ಪುಸ್ತಕಗಳು, ದಿನ ಪತ್ರಿಕೆಗಳು ಓದುವ […]

Continue Reading

ತೊಗರಿ ಕಾಯಿ ಕೊರಕದ ಸಮಗ್ರ ಹತೋಟಿ ಮಾಡಿ

ಕಲಬುರಗಿ: ಅಧಿಕ ಮಳೆಯಾಗಿದ್ದರಿಂದ ಕೆಲವೆಡೆ ತೊಗರಿ ಬೆಳೆ ನಾಶವಾಗಿದೆ. ಇನ್ನೂ ಕೆಲವೆಡೆ ಬೆಳೆಗೆ ಗೊಡ್ಡು, ಹಳದಿ ಬಣ್ಣಕ್ಕೆ ತಿರುಗಿರುವುದು, ಕಪ್ಪು ಚುಕ್ಕೆ ರೋಗದ ಜೊತೆಗೆ ಕೀಟಗಳ ಬಾಧೆ ಕಂಡುಬರುತ್ತಿದೆ ಎಂದು ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್. ಬಿರಾದಾರ ರೈತರಿಗೆ ಸಲಹೆ ನೀಡಿದರು.  ಜಿಲ್ಲೆಯ ಸುಂಟನೂರ ಗ್ರಾಮದ ಹೊಲವೊಂದರಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಸಾಯಂಕಾಲ ಜರುಗಿದ ‘ತೊಗರಿ ಬೆಳೆ ಕ್ಷೇತ್ರ ಭೇಟಿ, ವೀಕ್ಷಣೆ ಹಾಗೂ ರೈತರಿಗೆ ಸಲಹೆಗಳು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೀಟಗಳ […]

Continue Reading

ಆರೇ ವರ್ಷಕ್ಕೆ ಕಲಬುರಗಿ ಬೆಂಗಳೂರು ವಿಮಾನ ಸಂಚಾರ ಬಂದ್‌

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಹೆಬ್ಬಾಗಿಲು ಎಂದು ಕರೆಯಸಿಕೊಳ್ಳುವ ಜಿಲ್ಲೆ ಕಲಬುರಗಿ. ಇದೀಗ ಕಲಬುರಗಿಯ ವಿಮಾನ ನಿಲ್ದಾಣಕ್ಕೆ ಸೂತಕದ ಛಾಯೆ ಆವರಿಸಿದೆ. ಆರಂಭವಾಗಿ ಆರೇ ವರ್ಷಕ್ಕೆ ವಿಮಾನ ಹಾರಾಟವಿಲ್ಲದೆ ವಿಮಾನ ನಿಲ್ದಾಣವೇ ಬಂದ್ ಆಗಿದೆ. ಹೀಗಾಗಿ ಆ ಭಾಗದ ಜನರ ದಶಕದ ಕನಸು ಆರೇ ವರ್ಷಕ್ಕೆ ಮಣ್ಣುಪಾಲಾದಂತಾಗಿದೆ. ಕಲಬುರಗಿಯಿಂದ ಬೆಂಗಳೂರು ಸಂಪರ್ಕಿಸುತ್ತಿದ್ದ ಏಕೈಕ ವಿಮಾನ ಹಾರಾಟ ಸ್ಟಾರ್ ಏರ್‌ ಸಂಸ್ಥೆ ನಿಲ್ಲಿಸಿದೆ. ಅಕ್ಟೋಬರ್‌ 15 ರಿಂದ ಸೇವೆ ಸ್ಥಗಿತಗೊಳಿಸಿದೆ. ಈಗ ಒಂದೇ ಒಂದು ವಿಮಾನವೂ ಸಹ ಕಲಬುರಗಿ […]

Continue Reading

ಕೆ-ಸೆಟ್ ಪರೀಕ್ಷೆ: ಬಳ್ಳಾರಿಯಲ್ಲಿ ವಿದ್ಯಾರ್ಥಿಗಳ ಕಿವಿಯೋಲೆ, ಮೂಗುತಿ ಬಿಚ್ಚಿಸಿದ ಸಿಬ್ಬಂದಿ

ಬಳ್ಳಾರಿ: ಇಂದು ಕೆ-ಸೆಟ್ ಪರೀಕ್ಷೆ ಹಿನ್ನೆಲೆ ಬಳ್ಳಾರಿಯಲ್ಲಿ ವಿದ್ಯಾರ್ಥಿಗಳ ಕಿವಿಯೋಲೆ, ಮೂಗುತಿ, ಕೈಕಡಗ ಸೇರಿದಂತೆ ಮೈಮೇಲೆ ಹಾಕಿಕೊಂಡಿರೋ ದೇವರ ದಾರವನ್ನು ಸಹ ಬಿಚ್ಚಿಸಿ ಅಭ್ಯರ್ಥಿಗಳನ್ನು ಒಳಗೆ ಕಳುಹಿಸಿದ ಘಟನೆ ನಡೆದಿದೆ. ಕಿವಿಯೋಲೆ, ಮೂಗುತಿ ಹಾಗೂ ದೇವರ ದಾರ ಬಿಚ್ಚಿಸಿದ್ದಕ್ಕೆ ಕೆಲ ಪರೀಕ್ಷಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು. ಅಸಮಾಧಾನದ ನಡುವೆಯೂ ಅನಿವಾರ್ಯವಾಗಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾದರು. ಇನ್ನೂ ಪರೀಕ್ಷೆ ಮುಗಿಸಿಕೊಂಡು ಹೊರಬಂದ ಬಳಿಕ ಪ್ರತಿಕ್ರಿಯೆ ನೀಡಿದ ಪರೀಕ್ಷಾರ್ಥಿಗಳು ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ದ ಅಸಮಾಧಾನ ಹೊರಹಾಕಿದರು. ಕಿವಿಯೋಲೆ, ಮೂಗುತಿ ಬಿಚ್ಚಿಸಿದ್ದು […]

Continue Reading

ನಿವೃತ್ತ ಪ್ರಾಚಾರ್ಯ ಬಸವರಾಜ ಬಿರಾದಾರ ಅವರಿಗೆ ಬೀಳ್ಕೊಡುಗೆ

ಕಲಬುರಗಿ: ಜೇವರ್ಗಿ ಪಟ್ಟಣದ ಕೋರ್ಟ್ ಎದುರುಗಡೆಯಿರುವ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ಬಸವರಾಜ ಬಿರಾಜದಾರ ಅವರಿಗೆ ಸತ್ಕರಿಸಿ, ಬೀಳ್ಕೊಡಲಾಯಿತು. ಜಿಲ್ಲಾ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಬಿರಾದಾರ ಅವರಿಗೆ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಜಿಲ್ಲೆಯ ವಿವಿಧ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಬಿರಾದಾರ ಅವರಿಗೆ ಸತ್ಕರಿಸಿ, ಅವರ ಅನುಪಮ ಸೇವೆಯನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ […]

Continue Reading

ಚಿತ್ತಾಪುರ: ಅಥ್ಲೆಟಿಕ್ಸ್‌ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಕಲಬುರಗಿ: ಜಿಲ್ಲಾ ಮಟ್ಟದ ಪ್ರೌಢ ಶಾಲಾ ಕ್ರೀಡಾಕೂಟದಲ್ಲಿ ಚಿತ್ತಾಪುರ ಪಟ್ಟಣದ ಆದರ್ಶ ವಿದ್ಯಾಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಪಟುಗಳು ಅಥ್ಲೆಟಿಕ್ಸ್‌ನ ವಿವಿಧ ಕ್ರೀಡೆಗಳಲ್ಲಿ ವಿಜಯಶಾಲಿಗಳಾಗುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 10ನೇ ತರಗತಿಯ ವಿದ್ಯಾರ್ಥಿಗಳಾದ ಶ್ರೀಶೈಲ ಸರಪಳಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ ಮತ್ತು 10ನೇ ತರಗತಿಯ ಪ್ರಕೃತಿ ಜಿಲ್ಲಾ ಮಟ್ಟದ 3 ಕಿಲೋ ಮೀಟರ್ ನಡಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟ ಕ್ಕೆ ಆಯ್ಕೆಯಾಗಿದ್ದಾರೆ. ಶಾಲಾ ಮೇಲುಸ್ತುವಾರಿ ಸಮಿತಿಯ ಚಂದರ ಚವ್ಹಾಣ, […]

Continue Reading

ಹೆಬ್ಬಾಳ: ಅಥ್ಲೆಟಿಕ್ಸ್‌ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಕಲಬುರಗಿ: ಜಿಲ್ಲಾ ಮಟ್ಟದ ಪ್ರೌಢ ಶಾಲಾ ಕ್ರೀಡಾಕೂಟದಲ್ಲಿ ಕಾಳಗಿ ತಾಲೂಕಿನ ಹೆಬ್ಬಾಳ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಕ್ರೀಡಾಪಟುಗಳು ಅಥ್ಲೆಟಿಕ್ಸ್‌ನ ವಿವಿಧ ಕ್ರೀಡೆಗಳಲ್ಲಿ ವಿಜಯಶಾಲಿಗಳಾಗುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 10ನೇ ತರಗತಿಯ ವಿದ್ಯಾರ್ಥಿಗಳಾದ ಸಮೀರ್ ಎಂ ಪಟೇಲ್ ಟ್ರಿಪಲ್ ಜಂಪ್’ನಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ ಮತ್ತು ಅಭಿಷೇಕ್ ಶಿವಾನಂದ 400 ಮೀಟರ್ ಹರ್ಡಲ್ಸ್‌ನಲ್ಲಿ ದ್ವಿತೀಯ ಸ್ಥಾನಗಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಶಾಲೆಯ ಕ್ರೀಡಾಪಟುಗಳ ಸಾಧನೆಯನ್ನು ತರಬೇತುದಾರ, ದೈ.ಶಿ ಶಿಕ್ಷಕ ನಾಗರಾಜ […]

Continue Reading

ವಿಜಯಪುರದಲ್ಲಿ ಸರಣಿ ಭೂಕಂಪನ: 2 ತಿಂಗಳಲ್ಲಿ 11 ಬಾರಿ ಕಂಪಿಸಿದ ಭೂಮಿ

ವಿಜಯಪುರ: ಜಿಲ್ಲೆಯಲ್ಲಿ ಸರಣಿ ಭೂಕಂಪನ ಸಂಭವಿಸಿದೆ. ಕಳೆದ 2 ತಿಂಗಳ ಅವಧಿಯಲ್ಲಿ 11 ಬಾರಿ ಭೂಮಿ ಕಂಪಿಸಿದ್ದು, ಇದರಿಂದ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಮಂಗಳವಾರ (ಅ.28) ರಾತ್ರಿ 11:41ರ ಸುಮಾರಿಗೆ ಭೂಕಂಪನ ಸಂಭವಿಸಿದ್ದು, ಅದಾದ ಬಳಿಕ ಬುಧವಾರ (ಅ.29) ಬೆಳಿಗ್ಗೆ 5:30ರ ಸುಮಾರಿಗೆ ಭೂಮಿ ಕಂಪಿಸಿದೆ. ಸಿಸಿಟಿವಿ ದೃಶ್ಯದಲ್ಲಿಯೂ ಭೂಕಂಪನದ ತೀವ್ರತೆ ದಾಖಲಾಗಿದೆ. 3.0 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಸರಣಿ ಭೂಕಂಪನದಿಂದ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

Continue Reading

ಚಿತ್ತಾಪುರ ಶಾಂತಿ ಸಭೆಯಲ್ಲಿ ಅಶಾಂತಿ, ಸಂಘಟನೆಗಳ ಮಧ್ಯೆ ಮೂಡದ ಒಮ್ಮತ

ಕಲಬುರಗಿ: ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನ ಪ್ರಕರಣ ಸಂಬಂಧ ಕಲಬುರಗಿ ಜಿಲ್ಲಾಡಳಿತ ನಡೆಸಿದ ಶಾಂತಿ ಸಭೆಯಲ್ಲಿ ಅಶಾಂತಿ ಮೂಡಿದೆ. ಬೆಳಗ್ಗೆ 11:30ಕ್ಕೆ ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ನೇತೃತ್ವದಲ್ಲಿ ಆರ್‌ಎಸ್‌ಎಸ್, ಭೀಮ್ ಆರ್ಮಿ ಸೇರಿದಂತೆ 10 ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಮೊದಲಿಗೆ ಡಿಸಿಗೆ ಲಿಖಿತ ಹೇಳಿಕೆ ಸಲ್ಲಿಸಿದ ಸಂಘಟನೆಗಳಿಗೆ ಸಭೆಯಲ್ಲಿ ಅನಿಸಿಕೆ ಹೇಳಲು ಸೂಚಿಸಲಾಯಿತು. ಈ ವೇಳೆ ಆರ್‌ಎಸ್‌ಎಸ್ ಲಾಠಿ ಬಿಟ್ಟು ರಾಷ್ಟ್ರಧ್ವಜ ಹಿಡಿದು ಪಥಸಂಚಲನ ಮಾಡುವಂತೆ ದಲಿತ ಸಂಘಟನೆಗಳು ಪಟ್ಟು ಹಿಡಿದವು. ಇದಕ್ಕೆ ಲಾಠಿ ಹಿಡಿದು ಪಥಸಂಚಲನ […]

Continue Reading

ಕಲಬುರಗಿ: ಸರಕಾರಿ ನೌಕರರಿಗೆ ಗೀತ ಗಾಯನ ಸ್ಪರ್ಧೆ

ಕಲಬುರಗಿ: ಸರಕಾರಿ ನೌಕರರ ಸಂಘದಿಂದ ಕರ್ನಾಟಕರಾಜ್ಯೋತ್ಸವ ಅಂಗವಾಗಿ ಸರಕಾರಿ ನೌಕರರಿಗೆ ಬೆಂಗಳೂರಿನ ಸಂಘದ ಆವರಣದಲ್ಲಿ ನ.8 ರಂದು ರಾಜ್ಯಮಟ್ಟದ ಜನಪದ, ಕನ್ನಡ ಗೀತೆಗಳ ಗುಂಪು ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ತಿಳಿಸಿದ್ದಾರೆ. ನೌಕರರ ಸಂಘವು ನೀಡಿರುವ ಆನ್‌ಲೈನ್ ಲಿಂಕ್ https://forms.gle/8pR3m5nXowwQzccs9 ಮೂಲಕ ನ.2ರ ಸಂಜೆ 5 ಗಂಟೆಯೊಳಗೆ ನೋಂದಾಯಿಸಿಕೊಳ್ಳಬೇಕು. ವಿಜೇತ ತಂಡಗಳಿಗೆ ಪ್ರಥಮ 1,00,000 ರೂ., ದ್ವಿತೀಯ 75,000 ರೂ. ಹಾಗೂ ತೃತೀಯ ಬಹುಮಾನ 50,000 […]

Continue Reading