40 ಕಿ.ಮೀ ಚೇಸಿಂಗ್​​​: ಪ್ರಾಣ ಪಣಕ್ಕಿಟ್ಟು ಅಂತಾರಾಜ್ಯ ದನಗಳ್ಳರ​​ ಹೆಡೆಮುರಿ ಕಟ್ಟಿದ ಯಾದಗಿರಿ ಪೊಲೀಸರು

ಸುದ್ದಿ ಸಂಗ್ರಹ ಯಾದಗಿರಿಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ರೈತರ ನಿದ್ದೆಗೆಡಿಸಿದ್ದ ಅಂತಾರಾಜ್ಯ ದನಗಳ್ಳರ ಖತರ್ನಾಕ್ ಗ್ಯಾಂಗ್​​ನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ . ದನಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಕಳ್ಳರನ್ನು ಬರೋಬ್ಬರಿ 40 ಕಿ.ಮೀ ಬೆನ್ನಟ್ಟಿ ಖೆಡ್ಡಾ ತೋಡುವಲ್ಲಿ ಯಾದಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಡೆದಿದ್ದೇನು ?ಕಳೆದ ಎರಡು ವರ್ಷಗಳಿಂದ ವಡಗೇರ ತಾಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ಈ ಗ್ಯಾಂಗ್ ನಿರಂತರವಾಗಿ ಕೈಚಳಕ ತೋರುತ್ತಿತ್ತು. ಮನೆಗಳ ಮುಂದೆ ಹಾಗೂ ಕೊಟ್ಟಿಗೆಯಲ್ಲಿ ಕಟ್ಟಲಾಗಿದ್ದ ರಾಸುಗಳಿಗೆ ಅರವಳಿಕೆ (ನಿದ್ದೆ ಬರುವ) ಇಂಜೆಕ್ಷನ್ […]

Continue Reading

ಕಲಬುರಗಿ: 18 ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ, ನವೀಕರಣ ಸೇವೆ ಪ್ರಾರಂಭ

ಸುದ್ದಿ ಸಂಗ್ರಹ ಕಲಬುರಗಿಕಲಬುರಗಿ ವಿಭಾಗದ ಅಂಚೆ ಇಲಾಖೆಯು ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲೆಯ 18 ಪ್ರಮುಖ ಅಂಚೆ ಕಚೇರಿಗಳಲ್ಲಿ ಆಧಾರ್‌ ನೋಂದಣಿ ಮತ್ತು ನವೀಕರಣ ಸೇವೆ ಪ್ರಾರಂಭಿಸಿದೆ ಎಂದು ಕಲಬುರಗಿ ವಿಭಾಗದ ಅಂಚೆ ಅಧೀಕ್ಷಕ ರವೀಂದ್ರ ಬಿ.ಎಲ್ ತಿಳಿಸಿದ್ದಾರೆ. ಈ ಅಂಚೆ ಕಚೇ ರಿಗಳಲ್ಲಿ ತರಬೇತಿ ಪಡೆದ ಸಿಬ್ಬಂದಿ ಹಾಗೂ ಅತ್ಯಾ ಧುನಿಕ ಬಯೋಮೆಟ್ರಿಕ್ ಸಾಧನಗಳ ಮೂಲಕ ಗುಣಮಟ್ಟದ ಆಧಾರ್ ಸೇವೆ ನೀಡಲಾಗುತ್ತಿದೆ. ಸಾರ್ವಜನಿಕರು ಅಗತ್ಯ ಮೂಲ ದಾಖಲೆಗಳೊಂದಿಗೆ ಅಂಚೆ ಕಚೇರಿಗೆ ಭೇಟಿ ನೀಡಿ ಈ ಸೌಲಭ್ಯದ ಸದುಪಯೋಗ […]

Continue Reading

ಕಲಬುರಗಿ: ಕಾರಾಗೃಹದಿಂದ ಪರಾರಿಯಾಗಿದ್ದ ಮೂರನೇ ಕೈದಿ ಬಂಧನ

ಸುದ್ದಿ ಸಂಗ್ರಹ ಕಲಬುರಗಿಜಿಲ್ಲಾ ಕಾರಾಗೃಹದಿಂದ ಪರಾರಿಯಾಗಿದ್ದ ಮೂರನೇ ಕೈದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ ಗ್ರಾಮದ ಕೈದಿ ಮಸ್ತಾನ್‌ ಕಮಲಾಪುರ ಎಂಬಾತನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದಲ್ಲಿ ಅವಿತುಕೊಂಡಿರುವುದನ್ನು ಖಚಿತಪಡಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ, ಮಸ್ತಾನ್‌ ಕಮಲಾಪುರೆಯನ್ನು ಬಂಧಿಸಿದ್ದಾರೆ. ಮಸ್ತಾನ್‌, ಪೊಕ್ಸೊ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಇದರೊಂದಿಗೆ ಕಲಬುರಗಿ ಜಿಲ್ಲಾ ಕಾರಾಗೃಹದಿಂದ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಪುನಃ ಬಂಧಿಸಿದಂತಾಗಿದೆ. ಮೂವರು ಕೈದಿಗಳು ಜುಲೈ 14ರಂದು ಜೈಲಿನ ಕಾಂಪೌಂಡ್‌ನಿಂದ […]

Continue Reading

ಆಯತಪ್ಪಿ ಕೊಡಚಾದ್ರಿ ಬೆಟ್ಟದಿಂದ ಬಿದ್ದ ಪ್ರವಾಸಿಗ: ಜೀಪ್ ಚಾಲಕರಿಂದ ಉಳಿಯಿತು ಜೀವ

ಸುದ್ದಿ ಸಂಗ್ರಹ ಶಿವಮೊಗ್ಗಕೊಡಚಾದ್ರಿ ಬೆಟ್ಟದಿಂದ ಆಯತಪ್ಪಿ ಕೆಳಗೆ ಬಿದಿದ್ದ ಪ್ರವಾಸಿಗನನ್ನು ಜೀಪ್ ಚಾಲಕರರು ರಕ್ಷಣೆ ಮಾಡುವಲ್ಲಿ ಯಶಸ್ಸಿಯಾಗಿದ್ದು, ಪ್ರವಾಸಿ ಜೀಪ್ ಚಾಲಕರ ಸಮಯ ಪ್ರಜ್ಞೆಯಿಂದ ಪ್ರವಾಸಿಗನ ಜೀವ ಉಳಿದಿರುವ ಘಟನೆ ಹೊಸನಗರ ತಾಲೂಕಿನಲ್ಲಿ ನಡೆದಿದೆ. ಕುಮುಟಾ ಮೂಲದ ಪ್ರದೀಪ್ ಕೆಳಗೆ ಬಿದ್ದಿರುವ ಪ್ರವಾಸಿಗ. ಹೊಸನಗರ ತಾಲೂಕಿನ ಕೊಡಚಾದ್ರಿ ಬೆಟ್ಟಕ್ಕೆ ಪ್ರವಾಸ ಬಂದಿದ್ದ ಪ್ರದೀಪ್ ಕೊಡಚಾದ್ರಿಯ ಶಂಕರಾಚಾರ್ಯ ಪೀಠದ ಸಮೀಪ ತೆರಳುವಾಗ ತಲೆ ಸುತ್ತಿದ್ದರಿಂದ ಆಯತಪ್ಪಿ 60 ಅಡಿ ಕೆಳಗೆ ಬಿದ್ದಿದ್ದಾನೆ. ಕೂಡಲೆ ಪೊಲೀಸರು ಮತ್ತು ಅರಣ್ಯಾಧಿಕಾರಿಗಳಿಗೆ ಪ್ರವಾಸಿಗರು […]

Continue Reading

KSRTC ಬಸ್‌ಗೆ ಏಕಾಏಕಿ ಬೆಂಕಿ: ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪಾರು

ಸುದ್ದಿ ಸಂಗ್ರಹ ಚಿಕ್ಕಬಳ್ಳಾಪುರಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಸರ್ಕಾರಿ ಬಸ್‌ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಬಸ್ ಸಂಪೂರ್ಣ ಸುಟ್ಟುಹೋದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಎಂ.ಗೊಲ್ಲಹಳ್ಳಿ ಗ್ರಾಮದ ಬಳಿ ನಡೆದಿದೆ. ಅದೃಷ್ಟವಶಾತ್ ಚಾಲಕನ ಸಮಯಪ್ರಜ್ಞೆಯಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೌರಿಬಿದನೂರು ಕೆಎಸ್‌ಆರ್‌ಟಿಸಿ ಘಟಕಕ್ಕೆ ಸೇರಿದ ಬಸ್ ನಗರದಿಂದ ಮರಿಪಡಿಗು ಗ್ರಾಮದತ್ತ ತೆರಳುತ್ತಿತ್ತು. ಎಂ.ಗೊಲ್ಲಹಳ್ಳಿ ಗ್ರಾಮದ ಸಮೀಪ ಬರುತ್ತಿದ್ದ ವೇಳೆ ಬಸ್‌ನಲ್ಲಿ ಏಕಾಏಕಿ ತಾಂತ್ರಿಕ ದೋಷ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ತಕ್ಷಣ ಬಸ್’ನ್ನು […]

Continue Reading

ಚಿಕ್ಕಮಗಳೂರು ಡಿಸಿ ಹೆಸರಲ್ಲಿ ಸೈಬರ್ ವಂಚಕರ ಗಾಳ: 50,000 ಹಣ ಕಳೆದುಕೊಂಡ ಆಹಾರ ಇಲಾಖೆ ಅಧಿಕಾರಿ

ಸುದ್ದಿ ಸಂಗ್ರಹ ಚಿಕ್ಕಮಗಳೂರುಇಲ್ಲಿನ ಡಿಸಿ ಭನ್ವರ್ ಸಿಂಗ್ ಮೀನಾ ಹೆಸರು, ಫೋಟೋ ಬಳಸಿ ಆಹಾರ ಇಲಾಖೆ ಅಧಿಕಾರಿಯೊಬ್ಬರಿಗೆ ಸೈಬರ್‌ ವಂಚಕರು 50,000 ರೂ. ವಂಚಿಸಿದ ಪ್ರಕರಣ ನಡೆದಿದೆ. ಡಿಸಿ ಹೆಸರಿನಲ್ಲಿ ನಕಲಿ ವಾಟ್ಸಪ್ ಖಾತೆ ಸೃಷ್ಟಿಸಿ, ಆಹಾರ ಇಲಾಖೆಯ ಉಪನಿರ್ದೇಶಕ ಯೋಗಾನಂದ್ ಅವರಿಗೆ ತುರ್ತು ಹಣ ಹಾಕುವಂತೆ ವಂಚಕರು ಮೆಸೇಜ್‌ ಮಾಡಿದ್ದರು. ಇದನ್ನು ನಂಬಿದ್ದ ಅಧಿಕಾರಿ, ವಂಚಕ ಕಳಿಸಿದ್ದ ಅಕೌಂಟ್‌ ನಂಬರ್‌ಗೆ 50,000 ರೂ. ಹಣ ಹಾಕಿದ್ದರು. ವಂನೆಯಾಗಿರೋದು ತಿಳಿದ ಬಳಿಕ ಸೆನ್ ಠಾಣೆಯಲ್ಲಿ ಅವರು ದೂರು […]

Continue Reading

ಕಲಬುರಗಿ ಅಂಚೆ ವಿಭಾಗದಲ್ಲಿ ಫ್ರಾಂಚೈಸಿ ಮಳಿಗೆಗಳಿಗೆ ಅರ್ಜಿ ಆಹ್ವಾನ

ಸುದ್ದಿ ಸಂಗ್ರಹ ಕಲಬುರಗಿಭಾರತ ಸರ್ಕಾರದ ಅಂಚೆ ಇಲಾಖೆಯು ಸಾರ್ವಜನಿಕರಿಗೆ ಅಂಚೆ ಸೇವೆಗಳನ್ನು ಇನ್ನಷ್ಟು ಸುಲಭವಾಗಿ ಮತ್ತು ಸಮೀಪದಲ್ಲಿ ಒದಗಿಸುವ ಉದ್ದೇಶದಿಂದ ಕಲಬುರಗಿ ಅಂಚೆ ವಿಭಾಗದ ವ್ಯಾಪ್ತಿಯ ಆಯ್ದ ಸ್ಥಳಗಳಲ್ಲಿ ಅಂಚೆ ಕಚೇರಿ ಫ್ರಾಂಚೈಸಿ ಮಳಿಗೆಗಳನ್ನು ಆರಂಭಿಸಲು ಅರ್ಜಿ ಆಹ್ವಾನಿಸಿದೆ ಎಂದು ಕಲಬುರಗಿ ಅಂಚೆ ವಿಭಾಗದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಿಗದಿತ ಅರ್ಜಿ ನಮೂನೆಯನ್ನು ಕಲಬುರಗಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿಯಿಂದ ಕಚೇರಿ ವೇಳೆಯಲ್ಲಿ ಪಡೆಯಲು ಅಥವಾ ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ದಿಂದ ಡೌನ್‌ಲೋಡ್ ಮಾಡಿಕೊಂಡು ಭರ್ತಿ […]

Continue Reading

ಮಂತ್ರಾಲಯ ರಾಯರ ಮಠದ ಹುಂಡಿ ಎಣಿಕೆ: 21 ದಿನದಲ್ಲಿ 3.75 ಕೋಟಿ ಕಾಣಿಕೆ ಸಂಗ್ರಹ

ಸುದ್ದಿ ಸಂಗ್ರಹ ರಾಯಚೂರುಕಲಿಯುಗ ಕಾಮಧೇನು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಹುಂಡಿ ಎಣಿಕೆ ಮುಕ್ತಾಯವಾಗಿದ್ದು, 21 ದಿನದಲ್ಲಿ 3.75 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಪ್ರತಿ ತಿಂಗಳಿನಂತೆ ಈ ಬಾರಿಯೂ ಗುರುರಾಘವೇಂದ್ರ ಸ್ವಾಮಿ ಮಠಕ್ಕೆ ಭಕ್ತರ ದಂಡು ಮಠಕ್ಕೆ ಹರಿದು ಬಂದಿದೆ. ಜುಲೈ ಮತ್ತು ಆಗಸ್ಟ್ ತಿಂಗಳಿನ 21 ದಿನದಲ್ಲಿ ಕೋಟ್ಯಂತರ ರೂ. ಕಾಣಿಕೆ ಹರಿದು ಬಂದಿದ್ದು, 3,75,91,531 ರೂ. ಸಂಗ್ರಹವಾಗಿದೆ. ಸಂಗ್ರಹವಾದ ಒಟ್ಟು ಕಾಣಿಕೆಯಲ್ಲಿ 3,65,16,531 ರೂ. ಕರೆನ್ಸಿ ನೋಟುಗಳು, 10,75,000 ರೂ. ನಾಣ್ಯಗಳು […]

Continue Reading

ಕುರ್‌ಕುರೆ ಪ್ಯಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್ ಬಾಲ್ ನುಂಗಿ 5 ವರ್ಷದ ಬಾಲಕ ಸಾವು

ಸುದ್ದಿ ಸಂಗ್ರಹ ಮೈಸೂರುಕುರ್‌ಕುರೆ ಪ್ಯಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್ ಗಿಫ್ಟ್ ಬಾಲ್ ನುಂಗಿ 5 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ನಡೆದಿದೆ. ಗೌರಿಪುರ ಗ್ರಾಮದ ಮುಕುಂದ್ ಮಯೂರ್ (5) ಮೃತ ಬಾಲಕ. ಗ್ರಾ.ಪಂ ಮಾಜಿ ಉಪಾಧ್ಯಕ್ಷೆ ಗೌರಮ್ಮ ಶಂಕರ್ ನಾಯಕ ಅವರ ಮೊಮ್ಮಗನಾಗಿದ್ದ ಮುಕುಂದ್ ಮಯೂರ್, ಸಂತೋಷ್ ಹಾಗೂ ಐಶ್ವರ್ಯ ದಂಪತಿಯ ಏಕೈಕ ಪುತ್ರನಾಗಿದ್ದನು. ಬಾಲ್ ಗಂಟಲಿನಲ್ಲಿ ಸಿಲುಕಿ ಉಸಿರುಗಟ್ಟಿ ಬಾಲಕ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಬಾಲಕನ ಸಾವಿನಿಂದ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದ್ದು, ಗ್ರಾಮದಲ್ಲಿ […]

Continue Reading

ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ: ತಪ್ಪಿದ ಅನಾಹುತ

ಸುದ್ದಿ ಸಂಗ್ರಹ ಕಮಲಾಪುರತಾಲೂಕಿನ ಮಹಾಗಾಂವ ಕ್ರಾಸ್ ಸಮೀಪದ ಸಿದ್ಧಭಾರತಿ ವಿದ್ಯಾಮಂದಿರ ಬಳಿ ಶುಕ್ರವಾರ ಬೆಳಿಗ್ಗೆ ಕೆಕೆಆರ್’ಟಿಸಿ ಬಸ್ ಪಲ್ಟಿಯಾಗಿದೆ. ಬೀದರ್ ನಿಂದ ಕಲಬುರಗಿಗೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಕಂದಕಕ್ಕೆ ಉರುಳಿದೆ. ಬಸ್ ನಲ್ಲಿ ಕೇವಲ ಐವರು ಪ್ರಯಾಣಿಕರಿದ್ದರು. ಹೀಗಾಗಿ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ. ಚಾಲಕ ನಿರ್ವಾಹಕ ಸೇರಿದಂತೆ ಸುಮಾರು ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Continue Reading