ಚಿತ್ತಾಪುರ: ಪುರಾತನ ಕಾಲದಲ್ಲಿ ಉತ್ತರ ಭಾರತದಲ್ಲಿದ್ದ ನಳಂದಾ, ತಕ್ಷಶಿಲಾ ವಿಶ್ವವಿದ್ಯಾಲಯ ಮಾದರಿಯಲ್ಲೇ ದಕ್ಷಿಣ ಭಾರತದ ನಾಗಾವಿಯಲ್ಲಿ ಘಟಕಾಸ್ಥಾನ ಹೆಸರಿನ ಪ್ರಸಿದ್ಧ ವಿಶ್ವವಿದ್ಯಾಲಯವಿತ್ತು, ನಾಗಾವಿಯಲ್ಲಿ ಉತ್ಖನನ, ಸ್ಥಳದ ಸಮಗ್ರ ಇತಿಹಾಸದ ಸಂಶೋಧನೆ ನಡೆಯಬೇಕು ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.
ಪಟ್ಟಣದ ತಾ.ಪಂ ಸಭಾಂಗಣದಲ್ಲಿ ನಾಗಾವಿ
ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಳ್ಳಲಾಗಿದ್ದ ನಾಗಾವಿ ಸಾಂಸ್ಕೃತಿಕ ರತ್ನ ಪ್ರಶಸ್ತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಭಾರತದಲ್ಲಿ ನಳಂದ ತಕ್ಷಶಿಲಾ ವಿಶ್ವವಿದ್ಯಾಲಯ ಮಾದರಿಯಲ್ಲಿ ದಕ್ಷಿಣ ಭಾರತದಲ್ಲಿ ನಾಗಾವಿಗೆ ಅಗ್ರಹಾರ ಹೆಸರಿನ ಪ್ರಸಿದ್ಧಿ ಪಡೆದ ವಿಶ್ವವಿದ್ಯಾಲಯವಾಗಿತ್ತು. ಪುರಾತನ ಸ್ಮಾರಕಗಳು, ಶಾಸನಗಳು, ಅವಶೇಷಗಳು ಶಿಲ್ಪ ಕಲೆಗಳಿಂದ ನಾಗಾವಿ ನಾಡು ಸಾಂಸ್ಕೃತಿಕ ಶ್ರೀಮಂತ ನಾಡಾಗಿತ್ತು, ಇದರ ಇತಿಹಾಸ ತಿಳಿದುಕೊಳ್ಳಲು ಇನ್ನು ಹೆಚ್ಚಿನ ಸಂಶೋಧನೆ ಆಗಬೇಕು ಎಂದರು.
ನಾಗಾವಿ ನಾಡಿನ ಸಾಂಸ್ಕೃತಿಕ ರತ್ನ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ಅವರು, ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ನಾಗಾವಿ ಸಾಂಸ್ಕೃತಿಕ ಪ್ರತಿಷ್ಠಾನವು ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸುತ್ತಿರವ ಕೆಲಸ ಶ್ಲಾಘನೀಯ ಎಂದರು.
ಪ್ರಶಸ್ತಿ ಪುರಸ್ಕೃತರು ತಮ್ಮ ಕ್ಷೇತ್ರದಲ್ಲಿ ಇನ್ನೂ ಉತ್ತಮ ಸಾಧನೆಗೈಯಲ್ಲಿ, ನಿಮ್ಮ ಸಾಧನೆಯಿಂದ ಇತರರು ಪ್ರೇರಣೆ ಪಡೆಯಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ. ಸರಕಾರಿ ನೌಕರ ಸಂಘದ ತಾಲೂಕಾಧ್ಯಕ್ಷ ಬಸವರಾಜ ಬಳೂಂಡಗಿ, ಬಿಜೆಪಿ ತಾಲೂಕ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಶಿವಾನಂದ ನಾಲವಾರ, ತಾ.ಪಂ ವ್ಯವಸ್ಥಾಪಕ ಅಮೃತ ಕ್ಷೀರಸಾಗರ ಭಾಗವಹಿಸಿದರು.
ಜನಪದ ಕ್ಷೇತ್ರದಿಂದ ಪ್ರಶಸ್ತಿ ಪುರಸ್ಕೃತರಾದ ಮಹಾದೇವಿ ಕೊಲ್ಲೂರು, ಶಿಕ್ಷಣ ಕ್ಷೇತ್ರದಿಂದ ಶೈಲಶ್ರೀ, ಸಾಹಿತ್ಯ ಸಂಘಟಕ ಕ್ಷೇತ್ರದಿಂದ ವಿಕ್ರಂ ತೇಜಸ್ ವಾಡಿ, ಮಾಧ್ಯಮ ಕ್ಷೇತ್ರದಿಂದ ಮಲ್ಲಿಕಾರ್ಜುನ್ ಮೂಡುಬಳಕರ್, ಕೃಷಿ ಕ್ಷೇತ್ರದಿಂದ ಭೀಮಸೇನ ಭೀಮನಹಳ್ಳಿ ಇವರಿಗೆ ನಾಗಾವಿ ನಾಡಿನ ಸಾಂಸ್ಕೃತಿಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಯ್ಯ ಶಾಸ್ತ್ರಿ, ಪ್ರಮುಖರಾದ ಮಲ್ಲೇಶಿ ನಾಟೆಕರ್, ಮಡಿವಾಳಪ್ಪ ಹೇರೂರು, ದಯಾನಂದ ಕರ್ಜೂರಿ, ವಿರುಪಾಕ್ಷಿ ಬೆಣ್ಣಿ, ಸಂತೋಷ ಕಟ್ಟಿಮನಿ, ವಿಶ್ವರಾಧ್ಯ ಕರದಾಳ, ಶಿಕ್ಷಕರಾದ ಶಿವಲೀಲಾ, ಬೇಬಿ ಬಿರಾದರ್, ಜಯಶ್ರೀ, ಜಯಲಕ್ಷ್ಮಿ, ಶರಣಪ್ಪ ಐಕುರ್, ಸಾಬಣ್ಣ, ಸುರೇಶ್, ಅಂಬಣ್ಣ, ರಾಮಲಿಂಗಪ್ಪ ಪ್ಯಾಟಿ ಸೇರಿದಂತೆ ಅನೇಕರು ಇದ್ದರು.
ಪ್ರತಿಷ್ಠಾನ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರು ಪ್ರಸ್ತಾವಿಕವಾಗಿ ಮಾತನಾಡಿದರು, ಉಪಾಧ್ಯಕ್ಷ ಲಿಂಗಣ್ಣ ಮಲ್ಕನ ಸ್ವಾಗತಿಸಿದರು, ಕಾರ್ಯದರ್ಶಿ ನರಸಪ್ಪ ಚಿನ್ನಕಟ್ಟಿ ನಿರೂಪಿಸಿದರು, ಬಸವರಾಜ ಹೊಟ್ಟಿ ವಂದಿಸಿದರು.