ಬದುಕು ರೂಪಿಸಿದ ಸಹಕಾರ ಸಂಘಗಳು

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಕಾಳಗಿ
ರೈತರ ಅಭಿವೃದ್ಧಿಯಲ್ಲಿ ಸಹಕಾರ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತದೆ. ಹಳ್ಳಿಗಳಲ್ಲಿ ಸಹಕಾರ ಸಂಘಗಳ ಸ್ಥಾಪನೆಯಿಂದ ನೆಮ್ಮದಿಯ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಅಪೇಕ್ಸ್ ಬ್ಯಾಂಕ್ ಮತ್ತು ಡಿಸಿಸಿ ಬ್ಯಾಂಕ್’ನ ನಿರ್ದೇಶಕ ಸುನಿಲಕುಮಾರ್ ವಿ ದೊಡ್ಮನಿ ಹೇಳಿದರು.

ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಲಬುರಗಿ ಹಮ್ಮಿಕೊಳ್ಳಲಾಗಿದ್ದ 73ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಕ್ಷೇತ್ರ ತುಂಬಾ ವಿಶಾಲವಾದ ಕ್ಷೇತ್ರವಾಗಿದೆ, ಸಹಕಾರ ಕ್ಷೇತ್ರಕ್ಕೆ ನಾವೆಲ್ಲರೂ ಕೈಜೋಡಿಸಬೇಕು, ರೈತರಿಗೆ ಹೆಚ್ಚಿನ ಆದ್ಯತೆ ನೀಡುವಂತಾಗಬೇಕು‌‌. ರೈತರೆ ದೇಶದ ಬೆನ್ನೆಲುಬು ಆಗಿರುವುದರಿಂದ ಡಿಸಿಸಿ ಬ್ಯಾಂಕ್ ಮತ್ತು ಅಪೇಕ್ಸ್ ಬ್ಯಾಂಕ್ ಎಲ್ಲಾ ರೀತಿಯ ಸೌಲತ್ತುಗಳು ನೀಡುವಂತಾಗಬೇಕು ಅಂದಾಗ ಮಾತ್ರ ಸಹಕಾರ ಕ್ಷೇತ್ರ ಅಭಿವೃದ್ದಿ ಹೊಂದಲು ಸಾಧ್ಯ ಎಂದರು.

ಡಿಸಿಸಿ ಬ್ಯಾಂಕ್ ಮತ್ತು ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತದ ನಿರ್ದೇಶಕ ಕಲ್ಯಾಣ್ ರಾವ್ ಮೂಲಗೆ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವಾ ಮನೋಭಾವನೆ ಬಳಸಿಕೊಂಡು ಸಹಕಾರಿ ಕ್ಷೇತ್ರದ ಉಳಿವಿಗಾಗಿ ಹಾಗೂ ಬೆಳವಣಿಗೆಗಾಗಿ ಪ್ರತಿಯೊಬ್ಬರ ಸಹಾಯ ಅವಶ್ಯಕ, ಎಲ್ಲರೂ ಕೂಡಿಕೊಂಡು ಈ ಸಹಕಾರಿ ಕ್ಷೇತ್ರವನ್ನು ಬೆಳಸೋಣ, ಡಿಸಿಸಿ ಬ್ಯಾಂಕಿಗೆ ಲಭ್ಯವಿರುವ ಸೌಕರ್ಯಗಳು ನೀಡುವಂತೆ ನಾವು ಪ್ರಯತ್ನಿಸುತ್ತೆವೆ, ಈ ಭಾಗದ ರೈತರಿಗೆ ಅನುಕೂಲ ನೀಡುತ್ತಿದೆ ಮತ್ತು ಎಲ್ಲರೂ ಸೇರಿ ಕೆಲಸ ಮಾಡೋಣ ಎಂದರು.

ಮುಖಂಡ ಬಸವರಾಜ ಶಿವಗೋಳ ಮಾತನಾಡಿ, ಸಹಕಾರ ಎಂದರೆ ಪರಸ್ಪರರು ಕೂಡಿ ಪರಸ್ಪರ ಪ್ರೀತಿ, ವಿಶ್ವಾಸ ನಿಸ್ವಾರ್ಥ ಸೇವಾ ಮನೋಭಾವನೆ ಈ ಕ್ಷೇತ್ರದಲ್ಲಿ ಕಾಣುತ್ತೆವೆ, ಸರ್ವರಿಗೂ ಸಮಪಾಲು ಎನ್ನುವಂತೆ ಸಹಕಾರ ಕ್ಷೇತ್ರಕ್ಕೆ ನಾವೆಲ್ಲರು ಕೈಜೋಡಿಸುವಂತಾಗಬೇಕು. ರೈತಾಪಿ ವರ್ಗದವರಿಗೆ, ಸಾಮಾನ್ಯ ವರ್ಗದವರಿಗೂ ಮತ್ತು ಸರ್ಕಾರ ಹಾಗೂ ಡಿಸಿಸಿ ಬ್ಯಾಂಕ್ ಎಲ್ಲಾ ರೀತಿಯ ಸೌಕರ್ಯಗಳು ದೊರೆಯುವಂತಾಗಬೇಕು ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಬಸವರಾಜ ಕೋಟಪ ಮಾತನಾಡಿ, ಸಹಕಾರ ಸಂಘ ಪ್ರಾರಂಭ ಮಾಡುವಲ್ಲಿ ಅನೇಕ ಸಮಸ್ಯೆಗಳು ಎದುರಿಸಬೇಕಾಯಿತು, ಹಾಗೆ ಸಹಕಾರ ಸಂಘದ ಬೆಳವಣಿಗೆಯಲ್ಲಿ ಗ್ರಾಮದ ಗುರು ಹಿರಿಯರ, ಮುಖಂಡರ ಮಾರ್ಗದರ್ಶನದಲ್ಲಿ ಸಹಕಾರ ಸಂಘ ಸ್ಥಾಪನೆಯಾಯಿತು, ಇದರಿಂದ ನಮ್ಮ ಭಾಗದ ಜನರಿಗೆ ಅನುಕೂಲವಾಗಿದೆ ಎಂದರು.

ಸಹಕಾರ ಸಂಘದ ಉಳಿವಿಗಾಗಿ ಬೆಳವಣಿಗೆಗಾಗಿ ಬಹಳಷ್ಟು ಕಷ್ಟ ಪಟ್ಟು ಇಲ್ಲಿವರೆಗೆ ಸಹಕಾರ ಸಂಘವನ್ನು ನಡೆಸಿಕೊಂಡು ಬಂದಿದ್ವೆವೆ ಮತ್ತು ಇನ್ನು ಹೆಚ್ಚಿನ ರೀತಿಯಲ್ಲಿ ಸಂಘದ ಬೆಳವಣಿಗೆಗೋಸ್ಕರ, ರೈತರ ಅನುಕೂಲಕ್ಕಾಗಿ ಡಿಸಿಸಿ ಬ್ಯಾಂಕ್ ನೆರವು ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿದ್ಧನಗೌಡ ಆರ್ ಪಾಟೀಲ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಜಿಲ್ಲಾ ಸಹಕಾರ ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುಳಾ ಎಸ್ ಬಿರಾದಾರ ಮಾತನಾಡಿದರು.

ಕಾರ್ಯಕ್ರಮವನ್ನು ಸುನಿಲಕುಮಾರ ವಟವಟಿ ನಿರೂಪಿಸಿದರು, ಸಂಘದ ಕಾರ್ಯದರ್ಶಿ ರೇವಣಸಿದ್ಧ ಮರಪಳ್ಳಿ ಸ್ವಾಗತಿಸಿದರು ಮತ್ತು ಶಿಕ್ಷಕಿ ಇಸ್ಮಾಯಿಲ್’ಬಿ ವಂದಿಸಿದರು.

Leave a Reply

Your email address will not be published. Required fields are marked *