ಸುದ್ದಿ ಸಂಗ್ರಹ ಕಾಳಗಿ
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವುದನ್ನು ಕೂಡಲೇ ತಡೆಯುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಕಾಳಗಿ ತಾಲೂಕು ಅಧ್ಯಕ್ಷ ಅಬ್ದುಲ್ ರೌಫ್ ಅವರು ಚಿತ್ತಾಪುರ ತಾಲೂಕು ಅಬಕಾರಿ ಉಪ ನಿರೀಕ್ಷಕರಿಗೆ ಮನವಿ ಮಾಡಿದ್ದಾರೆ.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಈ ಮೂಲಕ ತಮ್ಮ ಗಮನಕ್ಕೆ ತರುವುದೇನೆಂದರೆ, ಕಾಳಗಿ ತಾಲೂಕಿನ ಹಲವು ಗ್ರಾಮಗಳ ಕಿರಾಣಿ ಅಂಗಡಿ, ಢಾಬಾಗಳು, ಪಾನಶಾಪ್ ಮತ್ತು ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಧಂದೆ ವ್ಯಾಪಕವಾಗಿ ನಡೆಯುತ್ತಿದೆ. ಅಕ್ರಮ ಮದ್ಯ ಮಾರಾಟದಿಂದ ಗ್ರಾಮದಲ್ಲಿ ತೊಂದರೆ ಉಂಟಾಗುತ್ತದೆ.
ಸಾಮಾಜಿಕ ಶಾಂತಿಗೆ ಭಂಗ, ಗ್ರಾಮಗಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಸಾರ್ವಜನಿಕ ಸ್ಥಳಗಲ್ಲಿ ಗಲಾಟೆ ಮತ್ತು ಆಶಾಂತಿ ವಾತವರಣ ನಿರ್ಮಾಣವಾಗುತ್ತಿದೆ, ದಿನಾಲೂ ಸಂಜೆ ವೇಳೆ ಮಹಿಳೆಯರು ಮತ್ತು ಮಕ್ಕಳು ರಸ್ತೆಯಲ್ಲಿ ನಡೆದಾಡಲು ಭಯಪಡುವ ವಾತವರಣ ಸೃಷ್ಠಿಯಾಗಿದೆ. ಯುವಕರು ಮತ್ತು ಕೂಲಿ ಕಾರ್ಮಿಕರು ಮದ್ಯದ ಚಟಕ್ಕೆ ಬಿದ್ದು ತಮ್ಮ ದುಡಿಯಮೆ ಹಣವನ್ನು ಪೋಲು ಮಾಡುತ್ತಿದ್ದು, ಇದೆ ರೀತಿ ಮುಂದುವರೆದರೆ ಹಲವು ಕುಟುಂಬಗಳು ಬೀದಿಗೆ ಬೀಳುತ್ತವೆ, ಅಕ್ರಮವಾಗಿ ತಂದು ಮದ್ಯ ಮಾರಾಟ ಮಾಡುತ್ತಿರುವುದು ಸಾರ್ವಜನಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಈ ಬಗ್ಗೆ ನಾವು ಈಗಾಗಲೆ ಹಲವು ಬಾರಿ ವಿನಂತಿಸಿಕೊಂಡರೂ ಅಕ್ರಮ ಮಾರಾಟಕ್ಕೆ ಯಾವುದೆ ತಡೆ ಬಿದ್ದಿಲ್ಲ.ಆದ್ದರಿಂದ ಅಧಿಕಾರಿಗಳಲ್ಲಿ ವಿನಂತಿ, ತಕ್ಷಣವೇ ಕಾಳಗಿ ತಾಲೂಕಿನ ಗ್ರಾಮಗಳಲ್ಲಿ ಅಬಕಾರಿ ಮತ್ತು ಪೋಲಿಸ ಇಲಾಖೆಯಿಂದ ದಾಳಿ ನಡೆಸಿ, ಅಕ್ರಮ ಮದ್ಯ ಮಾರಾಟ ಜಾಲವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಬೇಕು ಮತ್ತು ಈ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಗ್ರಾಮಗಳಲ್ಲಿ ಶಾಂತಿ- ಸುವ್ಯವಸ್ಥೆ ಕಾಪಾಡಬೇಕೆಂದು ತಮ್ಮಲ್ಲಿ ಸಾರ್ವಜನಿಕರ ಪರವಾಗಿ ಅತ್ಯಂತ ನಮ್ರತೆಯಿಂದ ಪ್ರಾರ್ಥಿಸುತ್ತೆವೆ ಎಂದು ಮನವಿ ಮಾಡಿದ್ದಾರೆ.