ಪತ್ರಕರ್ತರಿಗೆ ರಕ್ಷಣೆ, ಗೌರವ ಅಗತ್ಯ: ಭೀಮಾಶಂಕರ ಫಿರೋಜಾಬಾದ್

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಹಾಗೂ ದೇಶದ ಅಭಿವೃದ್ಧಿಯಲ್ಲಿ ನಾಲ್ಕನೇ ರಂಗವಾದ ಪತ್ರಿಕಾರಂಗ ಮತ್ತು ಪತ್ರಕರ್ತರ ಜವಾಬ್ದಾರಿ ದೊಡ್ಡದು. ಜಗತ್ತಿಗೆ ಸತ್ಯವನ್ನು ಸಾರುವ ಪತ್ರಕರ್ತರ ಧ್ವನಿಯನ್ನು ಹತ್ತಿಕ್ಕಬಾರದು. ಪತ್ರಕರ್ತರ ರಕ್ಷಣೆ ಮತ್ತು ಗೌರವ ನೀಡುವುದು ಅಗತ್ಯವಾಗಿದೆ ಎಂದು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಫಿರೋಜಾಬಾದ್ ಅಭಿಮತಪಟ್ಟರು.

ನಗರದ ಗಾಂಧಿ ನಗರದಲ್ಲಿರುವ ಆಚಾರ್ಯ ಪದವಿ ಪೂರ್ವ ಕಾಲೇಜ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಸಾಯಂಕಾಲ ಏರ್ಪಡಿಸಿದ್ದ “ಅಂತಾರಾಷ್ಟ್ರೀಯ ಪತ್ರಕರ್ತರ ಸುರಕ್ಷತಾ ದಿನಾಚರಣೆ” ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಮುಕ್ತ, ನಿರ್ಭೀತವಾಗಿ ಕೆಲಸ ನಿರ್ವಹಿಸಲು ಪೂರಕ ವಾತಾವರಣ ಅವಶ್ಯಕ ಎಂದರು.

ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವಸಂಸ್ಥೆಯ ಮಹಾಸಭೆಯು 2013ರ ಡಿಸೆಂಬರ್‌ನಲ್ಲಿ ನಡೆದ ತನ್ನ 70ನೇ ಮಹಾ ಸಭೆಯಲ್ಲಿ ನವೆಂಬರ-2 ಅನ್ನು ಈ ದಿನವನ್ನಾಗಿ ಘೋಷಿಸಿತು. ಕರ್ತವ್ಯ ನಿರ್ವಹಿಸುವಾಗ ಹತ್ಯೆಗೀಡಾದ, ಹಲ್ಲೆಗೊಳಗಾದ ಅಥವಾ ಕಿರುಕುಳಕ್ಕೊಳಗಾದ ಪತ್ರಕರ್ತರಿಗೆ ನ್ಯಾಯ ಒದಗಿಸುವುದು ಮತ್ತು ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಇರುವ ವಾಸ್ತವಿಕ ಸಂಗತಿಯನ್ನು ತಮ್ಮ ಎದೆಗಾರಿಕೆ, ಧೈರ್ಯ, ಪತ್ರಿಕಾ ಧರ್ಮದಿಂದ ಬರೆದು ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಟ್ಟ ಮತ್ತು ತಮ್ಮ ಜೀವವನ್ನು ನೀಡಿದ ಮಹನೀಯರು ಕೂಡಾ ಇದ್ದಾರೆ. ಪತ್ರಿಕಾ ಸ್ವಾತಂತ್ರ್ಯ ಧ್ವನಿ ಹತ್ತಿಕ್ಕುವ ಕೆಲಸ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಎಂದು ಮಾರ್ಮಿಕವಾಗಿ ನುಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ ಬಿರಾದಾರ, ಬಳಗದ ಸದಸ್ಯ ಅಸ್ಲಾಂ ಶೇಖ್, ಕಾಲೇಜಿನ ಉಪನ್ಯಾಸಕರಾದ ಶಿವಾನಿ, ಮಹೇಶ್ವರಿ, ಸಂತೋಷ ಪಿಳ್ಳೆ, ರವಿ ಬಿರಾದಾರ,ಆಶೀಷ್ ಸಿಂಗ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *